Asianet Suvarna News Asianet Suvarna News

Mandya : ಏಳು ಕ್ಷೇತ್ರಗಳಲ್ಲಿ ಬಿಜೆಪಿ ಶಕ್ತಿಯುತ : ಗೋಪಾಲಯ್ಯ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದಕ್ಕೆ ಬಿಜೆಪಿ ಸಮರ್ಥವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಗೋಪಾಲಯ್ಯ ವಿಶ್ವಾಸದಿಂದ ನುಡಿದರು.

Mandya BJP strong in seven constituencies Gopalaiah snr
Author
First Published Dec 15, 2022, 5:32 AM IST

 ಮಂಡ್ಯ (ಡಿ. 15):  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದಕ್ಕೆ ಬಿಜೆಪಿ ಸಮರ್ಥವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಗೋಪಾಲಯ್ಯ ವಿಶ್ವಾಸದಿಂದ ನುಡಿದರು.

ಪಕ್ಷವನ್ನು ರಾಜ್ಯಾದ್ಯಂತ ಸಂಘಟನೆ ಮಾಡುವ ಸಲುವಾಗಿ ಜನ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಜನಸಂಕಲ್ಪ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ (State Govt )  ಜನರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದೆ. ಅವುಗಳನ್ನು ಜನರಿಗೆ ತಲುಪಿಸುವುದು ಈ ಯಾತ್ರೆಯ ಉದ್ದೇಶ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa)  ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಒಕ್ಕಲಿಗರ ಮತ ಸೆಳೆಯಲು ಕಾಂಗ್ರೆಸ್‌ ಸಭೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲಾ ಪಕ್ಷದಲ್ಲೂ ಅವರದ್ದೇ ಆದ ಸಮುದಾಯದ ಮತಗಳು ಇರುತ್ತವೆ. ಮೂರು ಪಕ್ಷದಲ್ಲಿ ಒಕ್ಕಲಿಗರಿದ್ದಾರೆ. ನಾನು ಕೂಡ ಒಕ್ಕಲಿಗ. ಒಕ್ಕಲಿಗರು ನನಗೆ ಮತ ಕೊಟ್ಟಿಲ್ವಾ?, ಅಂತಿಮವಾಗಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದನ್ನು ರಾಜ್ಯದ ಜನರು ನಿರ್ಧರಿಸಲಿದ್ದಾರೆ ಎಂದರು.

ಗುಜರಾತ್‌ ಚುನಾವಣೆಯಲ್ಲಿ ಆದಂತೆಯೇ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಬಗ್ಗೆ ಬಿಜೆಪಿಗೆ ಸಂಪೂರ್ಣ ವಿಸ್ವಾಸ ಇದೆ ಎಂದು ವಿಶ್ವಾಸದಿಂದ ನುಡಿದರು. ಅವಧಿಗೂ ಮುನ್ನ ಚುನಾವಣೆ ನಡೆಯುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸಂಪುಟ ವಿಸ್ತರಣೆ, ಪುನರ್‌ ರಚನೆಗಳೆಲ್ಲ ಮುಖ್ಯಮಂತ್ರಿಗಳಿಗೆ ಬಿಟ್ಟವಿಚಾರ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮುನ್ನಡೆದರು.

ಸರ್ವರ ಅಭಿವೃದ್ಧಿಗೆ ಬಿಜೆಪಿ ಬದ್ಧ

ಕೆರೂರ :  ಗ್ರಾಮಗಳ ಅಭಿವೃದ್ದಿಗೆ ಸಮೂಹದ ಚರ್ಚೆ ನಿರ್ಧಾರದ ಅವಶ್ಯಕತೆಯಿದ್ದು ಗ್ರಾಮಸ್ತರೆಲ್ಲರೂ ಒಂದೆಡೆ ಸೇರಿ ತಮ್ಮ ಅಗತ್ಯಗಳ ಪಟ್ಟಿಮಾಡಿ ನನ್ನ ಗಮನಕ್ಕೆ ತಂದರೆ ಅವುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಕೈಗಾರಿಕಾ ಸಚಿವ ಡಾ,ಮುರುಗೇಶ ನಿರಾಣಿ ಹೇಳಿದರು. ಭಾನುವಾರ ಸಂಜೆ ಕೆರೂರ ಸಮೀಪದ ಸರಕಾರಿ ಹಣಮನೇರಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನದ 10 ಲಕ್ಷ ರೂ ವೆಚ್ಚದ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡುತ್ತಾ, ಅತಿವೃಷ್ಥಿಯಿಂದ ಮನೆಗಳು ಸೋರಿದಾಗ ಬಿದ್ದಾಗ ಅನೇಕ ಕುಟುಂಬಗಳಿಗೆ ಗುಡಿ ಗುಂಡಾರಗಳು ಆಶ್ರಯ ತಾಣವಾಗಿದ್ದನ್ನು ನಾವು ನೀವೆಲ್ಲ ಕಂಡಿದ್ದೇವೆ ಕಾರಣ ಗುಡಿ ಗುಂಡಾರಗಳ ಅಭಿವೃದ್ಧಿ ಕೂಡಾ ನನ್ನ ಧ್ಯೇಯವಾಗಿದೆ ಅಂತ ತಿಳಿಸಿದ್ದಾರೆ. 

ಬಾದಾಮಿ ತಾಲೂಕಿನ ಜನ ಉಡುಪಿ ಮಂಗಳೂರ ಕಡೆ ದುಡಿಯಲು ಹೋಗುತ್ತಿರುವದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ಅದನ್ನು ತಪ್ಪಿಸಬೇಕೆನ್ನುವ ಉದ್ದೇಶದಿಂದ ಹಲಕುರ್ಕಿ ಪ್ರದೇಶದ ಭೂ ಸ್ವಾಧಿನಪಡಿಸಿಕೊಂಡು ವಿವಿಧ ಕೈಗಾರಿಕೆಗಳನ್ನು ಪ್ರಾರಂಭಿಸಿ ದುಡಿಯುವ ಕೈಗಳಿಗೆ ಕೆಲಸ ಕೊಡಿಸಬೇಕೆಂಬ ನನ್ನ ಉದ್ದೇಶಕ್ಕೆ ಕ್ಷೇತ್ರದ ಜನರ ಸಹಕಾರ ಬೇಕು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ. ಇಲ್ಲಿಯ ರೈತರು ತಾವು ಬೆಳೆದ ಕಬ್ಬನ್ನು ದೂರದ ಪ್ಯಾಕ್ಟರಿಗೆ ಕಳಸಬೇಕಾದರೆ ಹರ ಸಾಹಸ ಪಡುವಂತಾಗಿತ್ತು. ಇದರಿಂದ ವೇಳೆಯ ಹಾಗೂ ಹಣದ ಅಪವ್ಯಯವಾಗುತ್ತಿತ್ತು ಇದನ್ನು ತಪ್ಪಿಸಲು ಬಾದಾಮಿಯಲ್ಲಿಯೆ 3 ಪ್ಯಾಕ್ಟರಿಗಳನ್ನು ಪ್ರಾರಂಭಿಸಿದ್ದು, ರೈತರು ನಿರಾತಂಕವಾಗಿ ಕಬ್ಬು ಬೆಳೆದು ತಮ್ಮಲ್ಲಿಯೇ ಇರುವ ಫ್ಯಾಕ್ಟರಿಗೆ ಕಬ್ಬು ತಂದು ಯೋಗ್ಯದರಪಡೆದು ವೇಳೆ ಹಾಗೂ ಹಣದ ಅಪವ್ಯಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

KARNATAKA ELECTION : ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಶತಸಿದ್ಧ

ಕ್ಷೇತ್ರದ ಜನ ಸಧೃಡ ಆರೋಗ್ಯವಂತರಾಗಿ ಆರ್ಥಿಕವಾಗಿ ಸುಭದ್ರರಾಗಿ ನೆಮ್ಮದಿಯ ಜೀವನ ನಡೆಸಬೇಕೆನ್ನುವ ನನ್ನ ಹಂಬಲಕ್ಕೆ ಸಾತ್‌ ನೀಡಬೇಕೆಂದು ಮನವಿ ಮಾಡುತ್ತಾ, ಬಿಜೆಪಿ ಸರಕಾರ ಕೂಡಾ ಸರ್ವಜನಾಂಗದ ಅಭಿವೃದ್ದಿಗೆ ಬದ್ದವಾಗಿ ಕೆಲಸ ಮಾಡುತ್ತಿದ್ದು, ನಾಗರಿಕರು ಸರಕಾರದ ಸೌಲಭ್ಯಗಳ ಸದ್ಬಳಕೆಗೆ ಮುಂದಾಗಬೇಕೆಂದರು. ಮಲ್ಲಯ್ಯ ಸುರಗಿಮಠ ಪ್ರಾಸ್ತವಿಕ ಮಾತನಾಡಿದರು. ವೇ,ಮೂ, ನಿಂಗಪ್ಪಜ್ಜ ಸಾನಿಧ್ಯವಹಿಸಿದ್ದರು. ವೇದಿಕೆಯಲ್ಲಿ ಬಸನಗೌಡ ಗೌಡ್ರ, ಯಂಕನಗೌಡ ಹಿರೇನಾಯ್ಕರ ಈರಣ್ಣ ಮೇಟಿ ಸಿದ್ದನಗೌಡ ಕುಳಗೇರಿ ಮಲ್ಲಿಕಾರ್ಜುನ ಅಂಗಡಿ ಶೇಖರ ರಾಠೋಡ ಪಿಡಬ್ಲುಡಿ ಕಾ,ನಿ,ಅಭಿಯಂತರ ನಾರಾಯಣ ಕುಲಕರ್ಣಿ ಜಿ,ಪಂ,ಕಾ,ನಿ,ಅಭಿಯಂತರ ಡಿ,ಎಲ್‌,ಶಾಸ್ತಿ್ರ ಉಪತಹಶೀಲ್ದಾರ ರಾಜಶೇಖರ ಸಾತಿಹಾಳ ಇದ್ದರು.

Follow Us:
Download App:
  • android
  • ios