ಮಂಡ್ಯ(ಮಾ.14): ಮಂಡ್ಯ ಜಿಲ್ಲಾ ಬಿಜೆಪಿ ವಿವಿಧ ವಿಭಾಗಗಳಿಗೆ ನೇಮಕಗೊಂಡಿರುವ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಯಶೋಧಮ್ಮ, ಪ್ರಮೀಳಮ್ಮ, ಅನುರಾಧ ರಘು, ರೂಪಾ, ಪುಟ್ಟಸಿದ್ದೇಗೌಡ, ಎಂ.ಎಸ್‌. ಪರಮಾಂದ್‌, ಟಿ.ಶ್ರೀಧರ್‌, ನರಸಿಂಹಮೂರ್ತಿ ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಜೆ. ಶಿವಲಿಂಗೇಗೌಡ, ಪಿ.ಎನ್‌.ಸುರೇಶ್‌, ಎಚ್‌.ಆರ್‌.ಬಸವರಾಜು, ಕಾರ್ಯದರ್ಶಿಗಳಾಗಿ ಪೈಲ್ವಾನ್‌ ಮಹದೇವು, ಎಂ.ಪಿ.ಅರುಣ್‌ ಕುಮಾರ್‌, ಅಂಕಪ್ಪ, ಬಿ.ಕೃಷ್ಣ, ಬಿ.ಸಿ. ಮಂಜು, ತ್ರಿವೇಣಿ, ಸಿ.ಎಸ್‌. ಸುಕನ್ಯ, ಮಂಗಳ ನವೀನ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಖಜಾಂಚಿಯಾಗಿ ಅಶೋಕ್‌ ಎಸ್‌ .ಕಾಗೇಪುರ, ಕಾರ್ಯಾಲಯ ಕಾರ್ಯದರ್ಶಿಯಾಗಿ ಎನ್‌. ಸುರೇಶ್‌, ವಿಶೇಷ ಆಹ್ವಾನಿತರಾಗಿ ಹಿರಿಯ ಮುಖಂಡರಾದ ಕೆ.ಎಸ್‌. ನಂಜುಂಡೇಗೌಡ, ಎನ್‌. ಶಿವಣ್ಣ ಚಂದಗಾಲು, ಕೆ.ಎಸ್‌. ದೊರೆಸ್ವಾಮಿ, ಎಚ್‌.ಎಂ. ಶಿವಸ್ವಾಮಿ, ಎಚ್‌.ಎನ್‌. ಮಂಜುನಾಥ್‌, ಪಾ.ಮ. ರಮೇಶ್‌, ಎಚ್‌.ಆರ್‌. ಅರವಿಂದ್‌, ಬಿ.ರಾಮಾಚಾರ್‌, ಕೆ. ಆನಂದ್‌, ಚಂದ್ರಶೇಖರ್‌, ಶಿವರಾಮು, ಎಂ.ಎಲ್. ಕುಮಾರ್‌, ರೇಣುಕಾಸ್ವಾಮಿ, ಪ.ಲಿ. ಕೃಷ್ಣ, ದೇವರಾಜ್‌ ನಿಯೋಜನೆ ಮಾಡಲಾಗಿದೆ.

ವಿವಿಧ ಮೋರ್ಚಾ ಅಧ್ಯಕ್ಷರ ನೇಮಕ:

ಯುವ ಮೋರ್ಚಾ ಅಧ್ಯಕ್ಷರಾಗಿ ಜೆ.ಅವಿನಾಶ್‌, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ರಶ್ಮಿ, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಎಂ.ಬಿ.ರಮೇಶ್‌, ಎಸ್‌.ಸಿ. ಮೋರ್ಚಾ ಅಧ್ಯಕ್ಷರಾಗಿ ನಿತ್ಯಾನಂದ್‌, ಎಸ್‌.ಟಿ. ಮೋರ್ಚಾ ಅಧ್ಯಕ್ಷರಾಗಿ ದೇವರಾಜು, ರೈತ ಮೋರ್ಚಾ ಅಧ್ಯಕ್ಷರಾಗಿ ಜೋಗೀಗೌಡ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ನಯಾಜ್ ಪಾಷ ಅವರನ್ನು ನೇಮಿಸಲಾಗಿದೆ ಎಂದು ಕೆ.ಜೆ. ವಿಜಯಕುಮಾರ್‌ ತಿಳಿಸಿದ್ದಾರೆ.

ಮಂಡಲದ ಅಧ್ಯಕ್ಷರ ನೇಮಕ:

ನಾಗಮಂಗಲ ಮಂಡಲ ಅಧ್ಯಕ್ಷರಾಗಿ ಸೋಮಶೇಖರ್‌, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್‌, ಪಾಂಡವಪುರ ಮಂಡಲ ಅಧ್ಯಕ್ಷರಾಗಿ ಅಶೋಕ್‌, ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ್, ಕೆ.ಆರ್‌. ಪೇಟೆ ಮಂಡಲ ಅಧ್ಯಕ್ಷರಾಗಿ ಪರಮೇಶ್‌(ಮೊಬೈಲ್) ಆಯ್ಕೆಯಾಗಿದ್ದಾರೆ. ನಗರ ಅಧ್ಯಕ್ಷರಾಗಿ ಟಿ.ಎಸ್‌. ವಿವೇಕ್‌, ಗ್ರಾಮಾಂತರ ಅಧ್ಯಕ್ಷರಾಗಿ ಸುಜಾತ ರಮೇಶ, ಶ್ರೀರಂಗಪಟ್ಟಣ ಅಧ್ಯಕ್ಷರಾಗಿ ಜಯಕುಮಾರ್‌, ಮಳವಳ್ಳಿ ಅಧ್ಯಕ್ಷರಾಗಿ ಎಂ.ಎನ್‌. ಕೃಷ್ಣ, ಮದ್ದೂರು ಅಧ್ಯಕ್ಷರಾಗಿ ಪಣ್ಣೇದೊಡ್ಡಿ ರಘು ಈ ಹಿಂದೆ ನೇಮಕಗೊಂಡಿದ್ದರು.

ಬಸ್‌ನಲ್ಲಿ ಹೋಗೋವಾಗ ಕೈ ಹೊರಗೆ ಹಾಕಿದ, ಕೈ ಕಟ್..!

ನಗರವ್ಯಾಪ್ತಿಯ ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಎನ್‌. ನವನೀತ್‌ ಗೌಡ, ಚಾಮರಾಜು, ಉಪಾಧ್ಯಕ್ಷರುಗಳಾಗಿ ಶಂಕರೇಗೌಡ, ಮಾದರಾಜಅರಸ್‌, ಎಂ.ನಾರಾಯಣಸ್ವಾಮಿ, ಸುರೇಶ್, ಅನಿಲ್, ಮಂಜುನಾಥ್, ಕಾರ್ಯದರ್ಶಿಗಳಾಗಿ ರುಕ್ಮಿಣಿ, ವರಲಕ್ಷ್ಮಿ, ಶಿವಲಿಂಗು, ಪದ್ಮಾವತಿ, ಎಚ್‌.ಉಷಾ, ಎಂ. ನಾಗಣ್ಣ, ಖಜಾಂಚಿಯಾಗಿ ಯಶೋಧಮ್ಮ, ಮಂಡ್ಯ ಗ್ರಾಮಾಂತರ ತಾಲೂಕು ಘಟಕದ ಉಪಾಧ್ಯಕ್ಷರುಗಳಾಗಿ ಸಿ.ಬಿ.ಸೋಮು, ಶಿವಕುಮಾರ್‌ ಆರಾಧ್ಯ, ಶ್ರೀನಿವಾಸ್, ಭಾಗಮ್ಮ, ಯೋಗನಂದ, ಶಾರದ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ. ರವಿ, ಜಿ.ಎಸ್‌. ಅಶೋಕ್, ಕಾರ್ಯದರ್ಶಿಗಳಾಗಿ ಅಶೋಕ್‌ ಕುಮಾರ್‌ ,ಕಾವ್ಯ, ಕೃಷ್ಣೇಗೌಡ, ಸ್ವಾಮಿ, ಪುಷ್ಪ, ಎಸ್.ಬಿ. ಶೇಖರ್‌, ಖಜಾಂಚಿಯಾಗಿ ಮನೋಹರ್‌ ನೇಮಕಗೊಂಡಿದ್ದಾರೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"