ಕರಪತ್ರ ಹಂಚಿಕೆ ಮೂಲಕ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಐವರು ಯುವಕರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮದ ಚೆಚ್‌ರ್ ಬಳಿ ಜರುಗಿದೆ.
ಮದ್ದೂರು (ನ.12): ಕರಪತ್ರ ಹಂಚಿಕೆ ಮೂಲಕ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಐವರು ಯುವಕರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ಗ್ರಾಮದ ಚೆಚ್‌ರ್ ಬಳಿ ಜರುಗಿದೆ.
ಮಳವಳ್ಳಿ (Malavalli) ತಾಲೂಕು ಕ್ಯಾತನಹಳ್ಳಿ ಇ.ಎನ್.ಕುಮಾರ ನಾಗೇಶ, ಇ.ಎನ್.ವಿಜಯ್‌ಗೌಡ, ಕಂದೇಗಾಲದ ಕೆ.ಆರ್. ಹೇಮಂತ್ ಕುಮಾರ್, ಮೈಸೂರು (Mysuru) ಮಂಡಿ ಮೊಹಲ್ಲಾದ ಸುಮಂತ್, ಹಾಗೂ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಸೋಂಪುರ ಗ್ರಾಮದ ಎಸ್.ಸಿ. ಸಂದೀಪ್ ಬಂಧಿತರು.
ಮದ್ದೂರು ತಾಲೂಕು ಸಿ.ಎ.ಕೆರೆ ಹೋಬಳಿಯ ದೇವೇಗೌಡನದೊಡ್ಡಿ ಗ್ರಾಮದ ಬಿ.ಆರ್. ಅಭಿಷೇಕ್ಗೌಡ ನೀಡಿದ ದೂರಿನನ್ವಯ ಕೆ.ಎಂ.ದೊಡ್ಡಿ ಪೊಲೀಸರು ಐವರು ಆರೋಪಿಗಳ ವಿರುದ್ಧ ಐಪಿಸಿ 153(ಎ), 153(ಬಿ), 295 (ಎ) ಹಾಗೂ 143ರನ್ವಯ ಮತಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ:
ದೂರುದಾರ ಡಿ.ಆರ್.ಅಭಿಷೇಕ್ಗೌಡ ಗುರುವಾರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಕೆ.ಎಂ.ದೊಡ್ಡಿಗೆ ತೆರಳುತ್ತಿದ್ದರು. ಅಣ್ಣೂರು ಗ್ರಾಮದ ಮಾರ್ಗ ಮಧ್ಯೆ ಬರುವ ಚೆಚ್‌ರ್ ಬಳಿ ಅಭಿಷೇಕ್ಗೌಡ ತೆರಳುತ್ತಿದ್ದ ಬೈಕ್‌ನ್ನು ಅಡ್ಡಗಟ್ಟಿದ ಐವರು ಆರೋಪಿಗಳು ಪರಿಚಯ ಮಾಡಿಕೊಂಡು ಮತಾಂತರಕ್ಕೆ ಪ್ರಚೋದನೆ ಮಾಡುವ ಕರಪತ್ರವನ್ನು ನೀಡಿದ್ದಾರೆ.
ಹಿಂದೂ ದೇವರಾದ ಹನುಮಂತ, ಕಾಲಭೈರವೇಶ್ವರ, ತಿರುಪತಿ ತಿಮ್ಮಪ್ಪ, ಶ್ರೀಕೃಷ್ಣ, ಶ್ರೀರಾಮ ದೇವರ ವಿರುದ್ಧ ಅವಹೇಳನಕಾರಿ ನಿಂಧನೆ ಮಾಡಿ ಇಂತಹ ದೇವರಿಂದ ಇನ್ನು ಉದ್ಧಾರವಾಗುವುದಿಲ್ಲ. ಹೀಗಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ಮಾಡಿದ್ದಾರೆ.
ಅಲ್ಲದೇ, ಆದಿಚುಂಚನಗಿರಿ ಶ್ರೀ, ಸಿದ್ಧಗಂಗಾಶ್ರೀಗಳು, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಕನಕದಾಸರು ಮಾನವತಾ ವಾದಿಗಳಾಗಿದ್ದಾರೆ. ಇವರ ವಚನಗಳು ಹಾಗೂ ಉಪದೇಶಗಳಿಂದ ಹಿಂದೂಗಳಾದ ನಿಮಗೆ ಯಾವುದೇ ಲಾಭವಿಲ್ಲ ಎಂದು ಕರಪತ್ರ ನೀಡಿ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿ ನಿಮ್ಮ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಬಂದರೆ ಚೆಚ್‌ರ್‍ನಲ್ಲಿ ಮತಾಂತರ ಮಾಡಲಾಗುವುದು ಎಂದು ಸಲಹೆ ನೀಡಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಶಿವರಾಮು, ರಂಜಿತ್, ನಂದೀಶ್ ಹಾಗೂ ಸಂತೋಷ್ ಅವರು ನಮ್ಮ ಹಿಂದು ದೇವರು ಮತ್ತು ಮಠಾಧೀಶರನ್ನು ಅವಹೇಳನ ಮಾಡಿದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಐವರು ಆರೋಪಿಗಳನ್ನು ಮತಾಂತರಕ್ಕೆ ಪ್ರಚೋದನೆ ಮಾಡಿದ ಆರೋಪದ ಮೇರೆಗೆ ಕೆ.ಎಂ.ದೊಡ್ಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ನಂತರ ಮದ್ದೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಿಂದೂ ಅಲ್ಲದಿದ್ದರೆ ಮತಾಂತರವಾಗಲಿ
ಬಾಗಲಕೋಟೆ(ನ.10): ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದು ಎಂದರೆ ಅಶ್ಲೀಲ ಪದವಾಗಿದೆ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ, ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಬಿಜೆಪಿ ಕಾರ್ಯಾಲಯದಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ರಾರಯಲಿ ಬಸವೇಶ್ವರ ವೃತ್ತ ತಲುಪಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ಅಲ್ಲಿ ಸತೀಶ ಜಾರಕಿಹೊಳಿ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ಹಿಂದು ಎಂದರೆ ಅಶ್ಲೀಲ, ಪರ್ಶಿಯನ್ ಭಾಷೆಯಲ್ಲಿ ಹಿಂದು ಪದಕ್ಕೆ ಕೆಟ್ಟಅರ್ಥವಿದೆ ಎಂದು ಹೇಳಿಕೆ ನೀಡಿರುವುದು ಅವರ ಉದ್ಧಟತನದ ಪ್ರದರ್ಶನದ ಪರಮಾವಧಿ ಎಂದು ಜಾರಕಿಹೊಳಿ ವಿರುದ್ಧ ಹರಿಹಾಯ್ದರು.
ಬಣಜಿಗರ ಅವಹೇಳನ: ಕಾಶಪ್ಪನವರ & ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ
ಹಿಂದು ಪದದ ಕುರಿತು ಮಾತನಾಡುವ ಸಂದರ್ಭವೇ ಅದಲ್ಲ. ಜಾರಕಿಹೊಳಿ ಅವರ ಹೇಳಿಕೆ ಒಂದು ಅನವಶ್ಯಕ ಮಾತು. ಸಾವಿರಾರು ವರ್ಷಗಳ ಹಿಂದೆ ದೇಶದ ರಾಜ, ಮಹಾರಾಜರು ಹಿಂದು ದೇವಾಲಯ ಕಟ್ಟಿರುವ ಪುರಾವೆಗಳು ಇದೆ. ಹಿಂದು ಶಬ್ದಕ್ಕೆ ತನ್ನದೇ ಆದ ಪರಂಪರೆ ಇದೆ. ಸತೀಶ ಜಾರಕಿಹೊಳಿಯವರು ಹಿಂದು ಅಲ್ಲವೆಂದರೆ ಮತಾಂತರ ಆಗಬಹುದಿತ್ತು. ಅನವಶ್ಯಕವಾಗಿ ಭಾರತದಲ್ಲಿರುವ 110 ಕೋಟಿ ಜನ ಹಿಂದುಗಳ ಮನಸಿಗೆ ನೋವಾಗುವ ರೀತಿ ಮಾತನಾಡಿರುವುದನ್ನು ಖಂಡಿಸಿದರು.
ಮೂಢನಂಬಿಕೆ ಬಗ್ಗೆ ಮಾತನಾಡುವುದು ಬೇರೆ, ಮೂಢನಂಬಿಕೆ ನಂಬುವಂತೆ ನಾವೂ ಕೂಡ ಹೇಳುವುದಿಲ್ಲ. ಹಿಂದು ಪದ ಮೂಢನಂಬಿಕೆ ಅಲ್ಲ. ಹಿಂದು ಸ್ಥಾನದಲ್ಲಿ ಹಿಂದುಗಳು ಅಲ್ಲದೇ ಬೇರೆ ಯಾರು ಇರಲು ಸಾಧ್ಯ. ದೇಶದ ಹೆಸರೇ ಹಿಂದುಸ್ತಾನ ಎಂದಿದೆ. ತುಷ್ಟೀಕರಣದ ನೀತಿ, ಮತಬ್ಯಾಂಕ್ ಗಳಿಸಿಕೊಳ್ಳಲು ಇದೊಂದು ಗಿಮಿಕ್ ಮಾತ್ರ ಎಂದು ಜಾರಕಿಹೊಳಿಯವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.