ಮಂಡ್ಯ: ಮತ್ತೆ ಸನ್ಯಾಸ ದೀಕ್ಷೆಯತ್ತ ಅಪರ ಜಿಲ್ಲಾಧಿಕಾರಿ ನಾಗರಾಜು

2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಡಾ.ಎಚ್.ಎಲ್ .ನಾಗರಾಜು ಅವರು ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ನಿಶ್ಚಲಾನಂದನಾಥ ಎಂದು ಹೆಸರನ್ನೂ ಬದಲಾಯಿಸಿಕೊಂಡಿದ್ದರು. ಆ ವೇಳೆ ಕುಟುಂಬದವರು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಸನ್ಯಾಸ ದೀಕ್ಷೆ ತ್ಯಜಿಸಿ ಮತ್ತೆ ಸರ್ಕಾರಿ ಅಧಿಕಾರಿಯಾಗಿ ಮುಂದುವರೆದಿದ್ದರು. 

Mandya Additional District Collector Dr HL Nagaraju Again Towards monastic initiation grg

ಮಂಡ್ಯ(ಡಿ.03):  ಹದಿಮೂರು ವರ್ಷಗಳ ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರು ಮತ್ತೆ ಸನ್ಯಾಸ ದೀಕ್ಷೆ ಪಡೆಯುವತ್ತ ಮನಸ್ಸು ಮಾಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಡಿವೆ. 

2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಡಾ.ಎಚ್.ಎಲ್ .ನಾಗರಾಜು ಅವರು ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ನಿಶ್ಚಲಾನಂದನಾಥ ಎಂದು ಹೆಸರನ್ನೂ ಬದಲಾಯಿಸಿಕೊಂಡಿದ್ದರು. ಆ ವೇಳೆ ಕುಟುಂಬದವರು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಸನ್ಯಾಸ ದೀಕ್ಷೆ ತ್ಯಜಿಸಿ ಮತ್ತೆ ಸರ್ಕಾರಿ ಅಧಿಕಾರಿಯಾಗಿ ಮುಂದುವರೆದಿದ್ದರು. 

ಅನುಷ್ಕಾ ಶೆಟ್ಟಿ ಸನ್ಯಾಸಿನಿಯಾಗ್ತಾರೆ ಅಂತ ಭಯ ಪಟ್ಟ ಅಪ್ಪ-ಅಮ್ಮ!

ಅವಿವಾಹಿತರಾಗಿಯೇ ಉಳಿದುಕೊಂಡಿರುವ ಡಾ.ಎಚ್.ಎಲ್.ನಾಗರಾಜು ಮತ್ತೆ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಅವರು ಕೆಂಗೇರಿ ಯಲ್ಲಿರುವ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಯಾಗಲಿದ್ದಾರೆ  ಎಂಬ ಮಾತುಗಳು ಕೇಳಿಬರುತ್ತಿವೆ. ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಅನಾರೋಗ್ಯ ಕಾರಣದಿಂದ ಪೀಠವನ್ನು ತ್ಯಜಿಸುತ್ತಿದ್ದು, ಆ ಸ್ಥಾನಕ್ಕೆ ಡಾ.ಎಚ್. ಎಲ್.ನಾಗರಾಜು ಪೀಠಾಧಿಪತಿಗಳಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 
ಇದೇ ಕಾರಣಕ್ಕೆ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರೊಂದಿಗೆ ನಾಗರಾಜು ಅವರು ನಿರಂತರ ಸಂಪರ್ಕ ದಲ್ಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಈಗಾಗಲೇ ಎಡಿಸಿನಾಗರಾಜು ಅವರು ಇನ್ನೂ ಎರಡು ಮೂರು ದಿನಗಳ ಲ್ಲಿರಜೆಯ ಮೇಲೆ ತೆರಳುತ್ತಿದ್ದಾರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡದೆ ಸ್ವಯಂ ನಿವೃತ್ತಿ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಕೆ ಸಾಧ್ಯತೆ: ಚಲುವರಾಯಸ್ವಾಮಿ 

ಅಪರ ಜಿಲ್ಲಾಧಿಕಾರಿ ನಾಗರಾಜು ಸನ್ಯಾಸ ದೀಕ್ಷೆ ಪಡೆಯುವ ವಿಚಾ ರ ನನ್ನ ಗಮನಕ್ಕೂ ಬಂದಿದೆ. ಅದು ಅವರ ವೈಯಕ್ತಿಕ ವಿಚಾರ. ಈಗಾಗಲೇ ಹಿಂದೆಯೂ ಅವರು ದೀಕ್ಷೆ ತೆಗೆದುಕೊಂಡಿದ್ದರು. ಹಿತೈಷಿಗಳ ಒತ್ತಾಯದಿಂದ ವಾಪಸ್ ಬಂದಿದ್ದರು. ಈಗ ಮತ್ತೆ ಅದೇ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೆರಡು ಮೂರು ದಿನಗಳಲ್ಲಿ ರಜೆ ಕೇಳಿದ್ದಾರೆ. ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು.

ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆ

ತಹಸೀಲ್ದಾ‌ರ್, ಉಪ ವಿಭಾಗಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸೇರಿ ದಂತೆ ವಿವಿಧ ಉನ್ನತ ಹುದ್ದೆಗಳನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದ ಡಾ.ನಾಗರಾಜು ಅವರು ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಹುದ್ದೆಯ ಜೊತೆಗೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ನಾಗರಾಜು ಅವರು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರು ಹಾಗೂ ಹಣಕಾಸು ಸಮಿತಿಯಲ್ಲೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅತ್ಯುತ್ತಮ ಭಾಷಣಕಾರರಾಗಿಯೂ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಹ ಮಾತುಗಳನ್ನಾಗಿ ಅವರ ಆಕರ್ಷಣೆಗೂ ಒಳಗಾಗಿದ್ದರು.

ಮೂರು ಜನರ ಜೊತೆ ಡೇಟಿಂಗ್‌ ಮಾಡಿದ ಬಲು ಬೇಡಿಕೆಯ ಹೀರೋಯಿನ್‌ ಸನ್ಯಾಸಿಯಾಗ್ತಾಳಂತೆ ಹೌದಾ?

ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಗಣಿ ಉದ್ಯಮಿ!

ರಾಮನಗರ: ರಾಜಸ್ಥಾನದ ಪ್ರಖ್ಯಾತ ಗಣಿ ಉದ್ಯಮಿ ಓಸ್ವಾಲ್‌ ಜೈನ್‌. ರಾಜಸ್ಥಾನ ಮಾತ್ರವಲ್ಲದೆ, ಮುಂಬೈ, ಗುಜರಾತ್‌, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅವರ ಹೆಸರಲ್ಲಿ ಇದ್ದಿದ್ದು ಬರೋಬ್ಬರಿ 3 ಸಾವಿರ ಎಕರೆಯ ಭೂಮಿ. ಇದರಲ್ಲಿ ಕಲ್ಲಿದ್ದಲು, ಚಿನ್ನ ಹಾಗೂ ಅದಿರಿನ ಗಣಿಗಾರಿಕೆ ಮಾಡುತ್ತಿದ್ದರು. ಅದರೊಂದಿಗೆ ಜರ್ಮನಿ, ಜಪಾನ್‌ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದ್ದ ಎಲ್ಲಾ ವಿದೇಶಿ ವಹಿವಾಟುಗಳಿದ್ದವು. ಈ ಎಲ್ಲವನ್ನೂ ಓಸ್ವಾಲ್‌ ಜೈನ್‌, ರಾಮನಗರ ಜಿಲ್ಲೆಯ ಮಾಗಡಿಯಲ್ಲಿರುವ ಪಾಲನಹಳ್ಳಿ ಮಠಕ್ಕೆ ದಾನ ಮಾಡಿದ್ದರು. 

78 ವರ್ಷದ ಓಸ್ವಾಲ್‌ ಜೈನ್‌ ಇಷ್ಟು ದೊಡ್ಡ ಪ್ರಮಾಣದ ಜಮೀನನ್ನು ದಾನ ಮಾಡಿ ಸಂನ್ಯಾಸತ್ವ ಸ್ವೀಕಾರ ಮಾಡಿದ್ದರು. ಅವರು ನೀಡಿರುವ ಭೂಮಿಯಲ್ಲಿ ಈಗಾಗಲೇ ಗಣಿಗಾರಿಕೆ ನಡೆಯತ್ತಿದ್ದು, ಇದರಲ್ಲಿ ಬರುವ ಆದಾಯದಿಂದ ಆಸ್ಪತ್ರೆ, ಗೋಶಾಲೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲೋಕ ಕಲ್ಯಾಣಕ್ಕೆ ಮತ್ತು ಸಮಾಜ ಸೇವೆಗೆ ಬಳಸುವುದು ಮಠದ ಉದ್ದೇಶವಾಗಿದೆ" ಎಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಹೇಳಿದ್ದರು.

Latest Videos
Follow Us:
Download App:
  • android
  • ios