ದೇವೇಗೌಡರ ಅತ್ಯಾಪ್ತ ಕುಟುಂಬದ ಮುಖಂಡರೋರ್ವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಅಧಕೃತವಾಗಿ ಇಂದು ಪಕ್ಷ ಸೇರಲಿದ್ದಾರೆ. 

ಸಿಂದಗಿ (ಮಾ.09): ದಿ.ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್‌ ಪಕ್ಷ ತೊರೆದು ಮಂಗಳವಾರ ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾತ್ಯತೀತ ಮತಗಳ ವಿಭಜನೆ ತಡೆಯುವ ಸಲುವಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುತ್ತಿದ್ದೇನೆ. ಮಾ.9ರಂದು ಬೆಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದು, ಬರುವ ದಿನಗಳಲ್ಲಿ ಸಿಂದಗಿಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗುವುದು ಎಂದರು.

ಕಾಂಗ್ರೆಸ್ ಮಾಜಿ ಸಂಸದ ಇಂದು ಬಿಜೆಪಿಗೆ ಸೇರ್ಪಡೆ ...

 ಮನಗೂಳಿ ಕುಟುಂಬ ಮತ್ತು ದೇವೇಗೌಡರ ಕುಟುಂಬ ಯಾವತ್ತಿಗೂ ಅನ್ಯೋನ್ಯವಾಗಿದ್ದು ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. 

ಪ್ರತಿ ಬಾರಿಯೂ ತ್ರಿಕೋನ ಸ್ಪರ್ಧೆ ವೇಳೆ ಜಾತ್ಯತೀತ ಮತಗಳ ವಿಭಜನೆಯಾಗುತ್ತಿರುವುದರಿಂದ ಬಿಜೆಪಿಗೆ ಲಾಭವಾಗುತ್ತಿತ್ತು. ಈ ರಾಜಕೀಯ ಲೆಕ್ಕಾಚಾರ ಮಾಡಿಕೊಂಡು ಕಾಂಗ್ರೆಸ್‌ ಸೇರುತ್ತಿದ್ದೇನೆ ಎಂದರು.