Asianet Suvarna News Asianet Suvarna News

ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಉಳ್ಳಾಲ ನೇತ್ರಾವತಿ ಸೇತುವೆಯಿಂದ ಬುಧವಾರ ರಾತ್ರಿ ನಿಗೂಢವಾಗಿ ನಾಪತ್ತೆಯಾದ ಕೊಣಾಜೆ ಪುಳಿಂಚಾಡಿ ನಿವಾಸಿಯ ಮೃತದೇಹ ಶುಕ್ರವಾರ ಬೆಳಗ್ಗೆ ಉಳ್ಳಾಲದ ಉಳಿಯ ನದಿ ತೀರದಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ.

 

Man who was missing from netravathi bridge found dead
Author
Bangalore, First Published Apr 18, 2020, 7:30 AM IST
  • Facebook
  • Twitter
  • Whatsapp

ಉಳ್ಳಾಲ(ಏ.18): ಉಳ್ಳಾಲ ನೇತ್ರಾವತಿ ಸೇತುವೆಯಿಂದ ಬುಧವಾರ ರಾತ್ರಿ ನಿಗೂಢವಾಗಿ ನಾಪತ್ತೆಯಾದ ಕೊಣಾಜೆ ಪುಳಿಂಚಾಡಿ ನಿವಾಸಿಯ ಮೃತದೇಹ ಶುಕ್ರವಾರ ಬೆಳಗ್ಗೆ ಉಳ್ಳಾಲದ ಉಳಿಯ ನದಿ ತೀರದಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಮೂಲತಃ ಸೋಮೇಶ್ವರ ಸಮೀಪದ ಕೊಲ್ಯದ ಪ್ರಸಕ್ತ ಕೊಣಾಜೆ ಪುಳಿಂಚಾಡಿ ನಿವಾಸಿ ವಿಕ್ರಮ್‌ ಗಟ್ಟಿ(35) ಮೃತರು.

ವಿಕ್ರಮ್‌ ಕಾರು ಬುಧವಾರ ರಾತ್ರಿ ಸುಮಾರು 10.30ಕ್ಕೆ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಕಾರಿನ ಹೆಡ್‌ಲೈಟ್‌ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತೆನಲಾಗಿದೆ. ಆದರೆ ಕಾರಿನ ಮಾಲೀಕ ವಿಕ್ರಂ ಗಟ್ಟಿನಾಪತ್ತೆಯಾಗಿದ್ದು, ಅವರಿಗಾಗಿ ಗುರುವಾರವಿಡೀ ಶೋಧ ನಡೆಸಲಾಗಿತ್ತು.

ನೇತ್ರಾವತಿಗೆ ತಡೆಗೋಡೆ ಯಾವಾಗ..? ಮತ್ತೊಬ್ಬ ಮಹಿಳೆ ಆತ್ಮಹತ್ಯೆ

ಕೊಣಾಜೆ ಸಮೀಪದ ಪುಳಿಂಚಾಡಿ ಬಳಿ ಹೊಸಮನೆಯಲ್ಲಿ ವಾಸವಾಗಿದ್ದ ವಿಕ್ರಂ ಗಟ್ಟಿಕೊಲ್ಯದಲ್ಲಿ ಗ್ಯಾರೇಜ್‌ ನಡೆಸುತ್ತಿದ್ದರು.ಪುಳಿಂಚಾಡಿಯ ಮನೆಯಲ್ಲಿ ವಿಕ್ರಮ್ರ ಪತ್ನಿಯ ತಂದೆ, ತಾಯಿ ಹಾಗೂ ಪತ್ನಿ, ಮಗು ಇದ್ದರು ಎನ್ನಲಾಗಿದೆ. 9 ಗಂಟೆಗೆ ಟಿವಿ ವೀಕ್ಷಿಸುತ್ತಿದ್ದಾಗ ದಿಢೀರನೆ ಕಾರಿನ ಬ್ಯಾಟರಿ ರೀಚಾರ್ಜ್ ಮಾಡುವ ಉದ್ದೇಶಕ್ಕಾಗಿ ಕೊಣಾಜೆ ಪದವು ತನಕ ಹೋಗಿ ಬರುತ್ತೇನೆಂದು ಹೇಳಿ ವಿಕ್ರಮ್‌ ಮನೆಯಿಂದ ಹೊರಟಿದ್ದರೆನ್ನಲಾಗಿದೆ.

ನೇತ್ರಾವತಿಗೆ ಮತ್ತೆರಡು ಬಲಿ: ಮಗುವಿನೊಂದಿಗೆ ನದಿಗೆ ಹಾರಿದ ತಂದೆ

ಬಳಿಕ ಮನೆ ಮಂದಿ ಕರೆ ಮಾಡಿದಾಗ ಅವರ ಮೊಬೈಲ್‌ ಪೋನ್‌ ಸ್ವಿಚ್‌ ಆಫ್‌ ಬರುತ್ತಿತ್ತು ಎಂದು ಕೊಣಾಜೆ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Follow Us:
Download App:
  • android
  • ios