ಬೆಂಗಳೂರು [ಆ.16]: ನಡುರಸ್ತೆಯಲ್ಲಿ ಮಹಿಳಾ ಸಾಫ್ಟ್‌ವೇರ್‌ ಎಂಜಿನಿಯರ್‌ ಮುಂದೆ ಜಿಪ್‌ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಆಟೋ ಚಾಲಕನೊಬ್ಬನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಸುದ್ದುಗುಂಟೆಪಾಳ್ಯದ ಇಲಿಯಾಸ್‌ ಪಾಷಾ (30) ಬಂಧಿತನಾಗಿದ್ದು, ಆ.9ರ ಆಡುಗೋಡಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. 

ಕೆಲಸ ಮುಗಿಸಿಕೊಂಡು ಸಂತ್ರಸ್ತೆ, ಜೆ.ಪಿ.ನಗರದಿಂದ ಕೋರಮಂಗಲ ಕಡೆಗೆ ಆಟೋದಲ್ಲಿ ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಸಂತ್ರಸ್ತೆ ಜತೆ ಚಾಲಕನಿಗೆ ಜಗಳವಾಗಿದೆ. ಆಗ ಕೋಪಗೊಂಡ ಚಾಲಕ, ಆಕೆಯನ್ನು ಆಟೋದಿಂದ ಕೆಳಗೆ ಇಳಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. 

ತಕ್ಷಣವೇ ಆಟೋ ನೋಂದಣಿ ಸಂಖ್ಯೆ ಬರೆದುಕೊಂಡ ಸಂತ್ರಸ್ತೆ, ಮರುದಿನ ಪೊಲೀಸರಿಗೆ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.