ಬೆಂಗಳೂರು(ಮಾ.04): ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಮೊಬೈಲ್‌ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆ ನಿವಾಸಿ ಇಮ್ರಾನ್‌ಖಾನ್‌ (25) ಬಂಧಿತ. ಆರೋಪಿಯಿಂದ ಸುಮಾರು ಒಂಬತ್ತು ಲಕ್ಷ ಮೌಲ್ಯದ ಬೆಲೆಬಾಳುವ 109 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಇನ್ನು ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಇಮ್ರಾನ್‌ ಕಳವು ಕೃತ್ಯಕ್ಕೆ ತನ್ನದೇ ಒಂದು ತಂಡ ಕಟ್ಟಿಕೊಂಡಿದ್ದ. ನಗರದ ವಿವಿಧ ಕಡೆಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಆರೋಪಿಗಳು ಬಸ್‌ ಹತ್ತುತ್ತಿದ್ದರು.

ಕೊರೋನಾ ಭೀತಿ: ಏರ್ಪೋರ್ಟ್‌ನಲ್ಲಿ 40 ಸಾವಿರ ಜನರ ತಪಾಸಣೆ

ಜನ ಹೆಚ್ಚಾಗಿರುವ ಬಸ್‌ಗಳಲ್ಲಿ ಪ್ರಯಾಣಿಕರ ಮೊಬೈಲ್‌ ಕಳವು ಮಾಡಿ ಪರಾರಿಯಾಗುತ್ತಿದ್ದರು. ಹೀಗೆ ಕಳವು ಮಾಡಿದ ಮೊಬೈಲ್‌ಗಳನ್ನು ಹೈದರಬಾದ್‌ಗೆ ತೆಗೆದುಕೊಂಡು ಹೋಗಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು.