Asianet Suvarna News Asianet Suvarna News

ಹುಡುಗಿಯರೇ ಎಚ್ಚರ,  ನಿಮ್ಮ ದೂರವಾಣಿ ಸಂಖ್ಯೆ ಲೀಕ್  ಆಗಬಹುದು!

ಹೆಣ್ಣು ಮಕ್ಕಳೆ ಹುಷಾರ್, ನೌಕರಿ ಅರಸಿ ರೆಸ್ಯೂಮ್ ಅಪ್ ಲೋಡ್ ಮಾಡಬೇಕಿದ್ದರೆ ಎಚ್ಚರವಿರಲಿ. ಎಲ್ಲೆಂದರಲ್ಲಿ ದೂರವಾಣಿ ಸಂಖ್ಯೆ ನೀಡದರಿ. ನೀಡಿದರೆ ನೀವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಾ! ಯಾಕೆ ಅಂದ್ರೆ ಈ ಸುದ್ದಿ ಓದಿ..

man who harassing women held by Bengaluru ccb police
Author
Bengaluru, First Published Jul 12, 2018, 8:02 PM IST

ಬೆಂಗಳೂರು(ಜು.12)  ಉದ್ಯೋಗ ಕೊಡಿಸುವ ನೆಪದಲ್ಲಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಅನಂತ್ ಹೆಬ್ಬಾರ್ ಅಲಿಯಾಸ್ ಮಹೇಶ್ ರಾವ್ ಎಂಬಾತನನ್ನು ಬಂಧಿಸಿ ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ.

ಫೇಸ್‌ಬುಕ್ ಹೆಚ್ ಆರ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ಆರೋಪಿ ನೌಕರಿ ಡಾಟ್ ಕಾಮ್ ನಲ್ಲಿ ಉದ್ಯೋಗ ಅರಸಿ ರೆಸ್ಯೂಮ್ ಅಪ್ಲೋಡ್ ಮಾಡುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ  ಒಮ್ಮೊಮ್ಮೆ ಗಂಡಸಿನ ಇನ್ನೂ ಕೆಲವೊಮ್ಮೆ ಹೆಂಗಸಿನ ಧ್ವನಿಯಲ್ಲಿ ಮಾತನಾಡ್ತಿದ್ದ ಆರೋಪಿ ಮಹಿಳೆರನ್ನು ಡೇಟಿಂಗ್‌ ಗೆ ಆಹ್ವಾನಿಸುತ್ತಿದ್ದ.

ಕೆಲಸದ ಸಂದರರ್ಶನದ ಭಾಗವಾಗಿ ಡೇಟಿಂಗ್ ಸಹ ಮಾಡಬೇಕು. ಇದಕ್ಕಾಗಿ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡುವಂತೆ ಮಹಿಳೆಗೆ ಹೇಳಿದ್ದ. ಅನುಮಾನಗೊಂಡ ಮಹಿಳೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.ಹೆಣ್ಣು ಮಕ್ಕಳೆ ಹುಷಾರ್, ನೌಕರಿ ಅರಸಿ ರೆಸ್ಯೂಮ್ ಅಪ್ ಲೋಡ್ ಮಾಡಬೇಕಿದ್ದರೆ ಎಚ್ಚರವಿರಲಿ. ಎಲ್ಲೆಂದರಲ್ಲಿ ದೂರವಾಣಿ ಸಂಖ್ಯೆ ನೀಡದರಿ. ನೀಡಿದರೆ ನೀವೆ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಾ! ಯಾಕೆ ಅಂದ್ರೆ ಈ ಸುದ್ದಿ ಓದಿ..

Follow Us:
Download App:
  • android
  • ios