ಹಾಸನ(ಫೆ.14): ಹಾಸನದಲ್ಲಿ ಕಾರು ಹಾಗೂ ಆಟೋ ಮುಖಾಮುಖಿಯಾಗಿ ಭೀಕರ ಅಪಘಾತವಾಗಿದ್ದು, ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ಆಟೋ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಪಾದಚಾರಿ ಮೇಲೆ‌ ಉರುಳಿಬಿದ್ದಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತ ನಾಗರಾಜ್(55) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!

ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಿ.ಎಂ ರಸ್ತೆಯಲ್ಲಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮೂಲದ ನಾಗರಾಜ್ ಮೃತರು.

ಪ್ರೀತಿಸುವುದಾಗಿ ನಂಬಿಸಿ ಕೈಕೊಟ್ಟ ಶಿಕ್ಷಕ, ಶಿಕ್ಷಕಿ ಆತ್ಮಹತ್ಯೆ

ಶಿವರಾತ್ರಿ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ನಾಗರಾಜ್ ರಾತ್ರಿ 12.ಗಂಟೆ ವೇಳೆಯಲ್ಲಿ ನಡೆದು ಹೋಗುತ್ತಿದ್ದಾಗ ಘಟನೆ ನಡೆದಿದೆ. ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಆಟೋಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾಗುತ್ತಲೇ ಆಟೋ ರಸ್ತೆ ಬದಿಗೆ ಉರುಳಿದೆ. ಆಟೋದಡಿ ಸಿಲುಕಿದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಸಂಚಾರಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.