ಶಿವಮೊಗ್ಗ(ಏ.07): ತೀರ್ಥಹಳ್ಳಿ ಪಟ್ಟಣದಲ್ಲಿ ಮಂಗನಕಾಯಿಲೆಗೆ ಮತ್ತೊಬ್ಬರು ಬಲಿಯಾಗಿದ್ದು, ಇದರೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿದೆ. ತಾಲೂಕಿನ ಅಗ್ರಹಾರ ಹೋಬಳಿಯ ಉಡುಕೆರೆ ಗ್ರಾಮದ ಸುಬ್ರಹ್ಮಣ್ಯ(52) ಮೃತರು.

ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಸೇರಿಸಲಾಗಿತ್ತು. ಕೆಎಫ್‌ಡಿ ಸೋಂಕಿರುವುದು ದೃಢಪಟ್ಟಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ವಿಫಲವಾಗಿ ಸೋಮವಾರ ಮೃತಪಟ್ಟಿದ್ದಾರೆ.

ಮಾಸ್ಕ್‌ ಮೇಲೆ ವಾರ, ನೋಟ್‌ನಲ್ಲಿ 2 ದಿನ ಇರುತ್ತೆ ಕೊರೋನಾ!

ಈವರೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ 3 ಮತ್ತು ಸಾಗರ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯಲ್ಲಿ 105 ಮತ್ತು ಸಾಗರದಲ್ಲಿ 29 ಮಂದಿಗೆ ಸೋಂಕು ತಗುಲಿದೆ. ಕೊರೋನಾ ವೈರಸ್‌ ಜೊತೆಗೇ ಮಂಗನ ಕಾಯಿಲೆಯ ಬಗ್ಗೆಯೂ ಜನ ಆತಂಕಕ್ಕೊಳಗಾಗಿದ್ದಾರೆ.