ಮಾಸ್ಕ್ ಮೇಲೆ ವಾರ, ನೋಟ್‌ನಲ್ಲಿ 2 ದಿನ ಇರುತ್ತೆ ಕೊರೋನಾ!
ಮಾಸ್ಕ್ ಮೇಲೆ ವಾರ, ನೋಟ್‌ನಲ್ಲಿ 2 ದಿನ ಇರುತ್ತೆ ಕೊರೋನಾ| ಒಂದು ವಾರ ಜೀವಂತ ಇರುತ್ತೆ ಕೊರೋನಾ ವೈರಸ್!
ಬೀಜಿಂಗ್(ಏ.07): ಮಾಸ್ಕ್ ಮೇಲೆ ಕೊರೋನಾ ವೈರಸ್ ಗರಿಷ್ಠ ಒಂದು ವಾರ, ಗಾಜು ಹಾಗೂ ಕರೆನ್ಸಿ ನೋಟುಗಳ ಮೇಲೆ ಗರಿಷ್ಠ 2 ದಿನ ಮತ್ತು ಪ್ಲಾಸ್ಟಿಕ್, ಸ್ಟೀಲ್ ವಸ್ತುಗಳ ಮೇಲೆ 4ರಿಂದ 7 ದಿನಗಳ ವರೆಗೆ ಬದುಕಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ವಾತಾವರಣದಲ್ಲಿ ಕೊರೋನಾ ವೈರಸ್ ಸ್ಥಿರತೆ ಕುರಿತಂತೆ ಯುನಿವರ್ಸಿಟಿ ಆಫ್ ಹಾಂಕಾಂಗ್ ಸಂಶೋಧಕರು ಸಮೀಕ್ಷೆ ನಡೆಸಿದೆ. ಮುದ್ರಣ ಯಂತ್ರ ಮತ್ತು ಟಿಶ್ಶೂ ಪೇಪರ್ ಮೇಲೆ ಹವಾಗುಣ ಆಧರಿಸಿ ಮೂರು ಗಂಟೆಗಿಂತ ಕಡಿಮೆ ಕಾಲ ಹಾಗೂ ಮರ, ಬಟ್ಟೆಯ ಮೇಲೆ 2 ದಿನ ಬದುಕಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಕೊರೋನಾ ಎಫೆಕ್ಟ್: ಚಿನ್ನಕ್ಕೆ ಬೇಡಿಕೆಯೇ ಇಲ್ಲ!
ಜೊತೆಗೆ ನಿಯಮಿತವಾಗಿ ಕೈಗಳನ್ನು ಸ್ವಚ್ಛ ಮಾಡುವುದರಿಂದ, ಬ್ಲೀಚಿಂಗ್ ಪೌಡರ್, ಸ್ಯಾನಿಟೈಜರ್ ಬಳಸುವುದರಿಂದಲೂ ಕೊರೊನಾ ವೈರಸ್ ಅನ್ನು ಕೊಲ್ಲಬಹುದು ಎಂದು ಸಂಶೋಧಕರು ಹೇಳಿದ್ದಾರೆ.