Asianet Suvarna News Asianet Suvarna News

ಮಂಗಳೂರಲ್ಲಿ ಮುಖ ಮರೆಮಾಚದ ಮಾಸ್ಕ್‌ ಸಿದ್ಧ!

ಕೊರೋನಾ ಭೀತಿಯಲ್ಲಿ ಮಾಸ್ಕ್‌ ಧರಿಸಿದರೆ ಮುಖದ ಗುರುತು ಸಿಗುವುದಿಲ್ಲ ಎಂಬುದು ಸಾಮಾನ್ಯ ಅಳಲು. ಇದಕ್ಕೋಸ್ಕರ ಮುಖದ ನೈಜ ಚಿತ್ರವನ್ನೇ ಬಳಸಿದ ಮಾಸ್ಕ್‌ ಬಳಸಬಹುದು ಎಂಬ ಅಭಿಪ್ರಾಯ ಕೆಲವು ದಿನಗಳಿಂದ ಜನಜನಿತವಾಗಿದೆ. ಈ ಕಲ್ಪನೆಯನ್ನು ನಿಜವಾಗಿಸಿದ್ದಾರೆ ದ.ಕ. ಕನ್ನಡದ ಕಲಾವಿದರೊಬ್ಬರು.

Man stitches mask with persons half face printing in Mangalore
Author
Bangalore, First Published May 25, 2020, 7:25 AM IST

ಮಂಗಳೂರು(ಮೇ 25): ಕೊರೋನಾ ಭೀತಿಯಲ್ಲಿ ಮಾಸ್ಕ್‌ ಧರಿಸಿದರೆ ಮುಖದ ಗುರುತು ಸಿಗುವುದಿಲ್ಲ ಎಂಬುದು ಸಾಮಾನ್ಯ ಅಳಲು. ಇದಕ್ಕೋಸ್ಕರ ಮುಖದ ನೈಜ ಚಿತ್ರವನ್ನೇ ಬಳಸಿದ ಮಾಸ್ಕ್‌ ಬಳಸಬಹುದು ಎಂಬ ಅಭಿಪ್ರಾಯ ಕೆಲವು ದಿನಗಳಿಂದ ಜನಜನಿತವಾಗಿದೆ. ಈ ಕಲ್ಪನೆಯನ್ನು ನಿಜವಾಗಿಸಿದ್ದಾರೆ ದ.ಕ. ಕನ್ನಡದ ಕಲಾವಿದರೊಬ್ಬರು.

ಮಂಗಳೂರು ತಾಲೂಕು ಬೋಳ್ಯಾರಿನ ಸಂತು ಗ್ರಾಫಿಕ್ಸ್‌ನ ಸಂತೋಷ್‌ ನಾಯಕ್‌ ಅವರು ತಮ್ಮ ಬಟ್ಟೆಯ ಫ್ಲೆಕ್ಸ್‌ ಮುದ್ರಿಸುವ ಯಂತ್ರದಲ್ಲಿ ವ್ಯಕ್ತಿಯ ಮುಖದ ಕೆಳಾರ್ಧದ ಫೋಟೋವನ್ನು ಮುದ್ರಿಸಿ ಆಕರ್ಷಕ ಮಾಸ್ಕ್‌ ತಯಾರಿಸಿದ್ದಾರೆ. ಕಾಟನ್‌ ಬಟ್ಟೆಯಲ್ಲಿ ಮುದ್ರಿಸಿದ ಈ ಮಾಸ್ಕ್‌ನ್ನು ಸದ್ಯ ಸ್ನೇಹಿತರ ಒತ್ತಾಯಕ್ಕೆ ಪ್ರಾಯೋಗಿಕವಾಗಿ ಅವರು ತಯಾರಿಸಿದ್ದಾರೆ. ಒಂದು ಮಾಸ್ಕ್‌ಗೆ ಅಂದಾಜು 20 ರು. ಖರ್ಚು ಬೀಳಬಹುದು ಎನ್ನುತ್ತಾರೆ ಅವರು. ಇದನ್ನು ವಾಣಿಜ್ಯ ದೃಷ್ಟಿಯಿಂದ ಉತ್ಪಾದಿಸುವ ಉದ್ದೇಶ ಅವರಿಗಿಲ್ಲವಂತೆ.

ಲಾಕ್‌ಡೌನ್‌ ಎಫೆಕ್ಟ್‌: ಮದುವೆ ಮುಂದೂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಮೊದಲು ಮೊಬೈಲ್‌ನಲ್ಲಿ ವ್ಯಕ್ತಿಯ ಮುಖದ ಫೋಟೋ ತೆಗೆಯುತ್ತಾರೆ. ಕಂಪ್ಯೂಟರ್‌ನಲ್ಲಿ ಫೋಟೋದ ಗಾತ್ರವನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್‌ ಮಾಡಲಾಗುತ್ತದೆ. ಬಳಿಕ ಪ್ರಿಂಟ್‌ ತೆಗೆಯಲಾಗುತ್ತದೆ. ಇದನ್ನು ಮುಖಕ್ಕೆ ಬೀಗಿಯಲು ಬೇಕಾದ ಹಗ್ಗವನ್ನು ಅಳವಡಿಸಿದರೆ ವ್ಯಕ್ತಿಯ ನೈಜ ಮುಖವನ್ನೇ ಹೋಲುವ ಮುಖಗವಸು ರೆಡಿ.

Follow Us:
Download App:
  • android
  • ios