ಹನೂರು (ಅ.26) : ವಿಪರೀತ ಪಾನಮತ್ತನಾಗಿದ್ದ ಪತಿಯೊಬ್ಬ ಪತ್ನಿಯನ್ನು ಕೊಂದು ಊದುಕಡ್ಡಿ ಹಚ್ಚಿ, ಆಕೆಯ ಕಾಲು ಮಡಿಚಿ ಸಾವಧಾನದಿಂದಲೇ ಕುಳಿತಿದ್ದ ಘಟನೆ ನಡೆದಿದೆ. 

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಆಣೆಹೊಲ ಎಂಬಲ್ಲಿ ಈ ನಡೆದಿದ್ದು ತನ್ನ ತಾಯಿ ಸತ್ತು ರಕ್ತ ಮಡುವಿನಲ್ಲಿ ಬಿದ್ದಿದ್ದ ದೃಶ್ಯ ಕಂಡು ಮಗ ಚೀರಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಗ್ರಾಮದ ಸೋಲಿಗ ಜನಾಂಗದ ಸಿದ್ದಮ್ಮ(28) ಕೊಲೆಯಾದವರು. ಪತಿ ಮಹದೇವ ಕುಡಿತದ ಚಟಕ್ಕೆ ದಾಸನಾಗಿದ್ದು ಕೊಡಗಿನಲ್ಲಿ ಕೂಲಿ ಮಾಡುತ್ತಿದ್ದ. 

ಪ್ರಿಯತಮೆ ಸಮಾಧಿ ಬಳಿಯೇ ನೇಣಿಗೆ ಶರಣಾದ ಪ್ರಿಯಕರ!

ಕಳೆದ ನಾಲ್ಕೈದು ದಿನಗಳ ಹಿಂದೆ ಗ್ರಾಮಕ್ಕೆ ಹಿಂತಿರುಗಿ ಬಂದಿದ್ದ, ಶುಕ್ರವಾರ ಸಂಜೆಯೂ ಕುಡಿದು ಬಂದ ಮಹಾದೇವ ಪತ್ನಿಯೊಂದಿಗೆ ಜಗಳ ತೆಗೆದಿದ್ದು ವಿಕೋಪಕ್ಕೆ ತಿರುಗಿ ಸುತ್ತಿಗೆ, ಮಚ್ಚಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಳಿಕ, ಪತ್ನಿಯ ಕಾಲುಗಳನ್ನು ಮಡಚಿ,ಬತ್ತಿ ಹಚ್ಚಿ ಕುಳಿತಿದ್ದ ವೇಳೆ ಮಗ ಮನೋಜ್‌ ಮನೆಗೆ ಬಂದು ತಾಯಿ ಶವ ಕಂಡು ಅಳತೊಡಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಅಕ್ಕ, ಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆರೋಪಿಯನ್ನು ಮ.ಬೆಟ್ಟಪೊಲೀಸರು ಬಂಧಿಸಿ ಮುಂದಿನಕ್ರಮ ಕೈಗೊಂಡಿದ್ದಾರೆ