ಹೈದರಾಬಾದ್(ಅ.25)  ಇದೊಂದು ಲವ್ ಸ್ಟೋರಿ..  ಕಂಡಿದ್ದು ದುರಂತ ಅಂತ್ಯ. ತೆಲಂಗಾಣದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ 24 ವರ್ಷದ  ಹುಡುಗ ತನ್ನ ಪ್ರೇಯಸಿ ಸಮಾಧೀ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾನು ಪ್ರೀತಿಸುತ್ತಿದ್ದ ಹುಡುಗಿಯ 'ಸಮಾಧಿ' ಬಳಿ ಚಲ್ಲಾ ಮಹೇಶ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೇಯಸಿ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು.

ದುಡ್ಡಿಗಾಗಿ ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಬಿಟ್ಟ ಪತಿರಾಯ

ಆತ್ಮಹತ್ಯೆಗೈ ಮುನ್ನ ವಾಟ್ಸಪ್ ಸ್ಟೇಟಸ್ ಹಾಕಿದ್ದ ಯುವಕ ನನ್ನಿಂದ ಬದುಕಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದ.  ಮಹೇಶ್ ತೆಲಂಗಾಣ ರಾಜ್ಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ.

ಆದರೆ, ನಂತರ ಆತ ಬಾಲಕಿಯ 'ಸಮಾಧಿ' ಬಳಿಯ ಮರದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಪ್ರೀತಿಸಿದ ಹುಡುಗಿಯ ಸಾವಿನ ನಂತರ ಮಹೇಶ್ ಖಿನ್ನತೆಗೆ ಒಳಗಾಗಿದ್ದ.