ಬರಿಗೈಯಲ್ಲೇ ಮ್ಯಾನ್‌ಹೋಲ್‌ ಸ್ವಚ್ಛತೆ..!

ಯಾವುದೇ ರಕ್ಷಾ ಕವಚಗಳನ್ನು ಬಳಸದೆ ಬರಿಕೈಯಿಂದಲೇ ಮ್ಯಾನ್‌ಹೋಲ್‌ ಸ್ವಚ್ಛತಾ ಕಾರ್ಯ ನಡೆಸಿರುವ ಅನಾಗರಿಕ ಘಟನೆಯೊಂದು ಚಿಂತಾಮಣಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 

Man hole cleaned bare hands in chikkaballapur

ಚಿಕ್ಕಬಳ್ಳಾಪುರ(ಮಾ.13): ಯಾವುದೇ ರಕ್ಷಾ ಕವಚಗಳನ್ನು ಬಳಸದೆ ಬರಿಕೈಯಿಂದಲೇ ಮ್ಯಾನ್‌ಹೋಲ್‌ ಸ್ವಚ್ಛತಾ ಕಾರ್ಯ ನಡೆಸಿರುವ ಅನಾಗರಿಕ ಘಟನೆಯೊಂದು ಚಿಂತಾಮಣಿ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಇಂತಹ ಅನಾಗರಿಕ ಘಟನೆ ನಡೆಯಲು ಕಾರಣರಾಗಿದ್ದಾರೆ ಎನ್ನಲಾಗಿದೆ. ಪಟ್ಟಣದ 12ನೇ ವಾರ್ಡಿನಲ್ಲಿರುವ ಹಳೇ ಕಟ್ಟಿಗೆ ಮೈದಾನದಲ್ಲಿ ಕಳೆದ ಒಂದು ವಾರದಿಂದ ಮ್ಯಾನ್‌ಹೋಲ್‌ ಕಟ್ಟಿಕೊಂಡು ಒಳಚರಂಡಿ ತ್ಯಾಜ್ಯ ರಸ್ತೆಗೆ ಹರಿಯುತ್ತಿತ್ತು.

ನಿಮಗೇನು ಅಧಿಕಾರವಿದೆ : ಶಾಸಕ ಹ್ಯಾರಿಸ್ ಪತ್ರಕ್ಕೆ ಆಕ್ಷೇಪ

ಸ್ಥಳೀಯರು ನಗರಸಭೆಗೆ ಸಾಕಷ್ಟುಬಾರಿ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಬೇಸತ್ತ ಸ್ಥಳೀಯ ನಿವಾಸಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಮಾ.6ರಂದು ಇಬ್ಬರು ಕೂಲಿಯಾಳುಗಳನ್ನು ಕರೆಯಿಸಿ ಅವರ ಕೈ ಮತ್ತು ಕಾಲುಗಳಿಗೆ ಬಳಸಬೇಕಿದ್ದ ಯಾವುದೇ ರಕ್ಷಾಕವಚಗಳನ್ನು ಬಳಸದೆ ಬರಿಗೈಯಲ್ಲಿಯೇ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ಜೊತೆಗೆ ಪಕ್ಕದಲ್ಲಿ ರಾಶಿ ಬಿದ್ದಿದ್ದ ಮಲವನ್ನು ಮಕ್ಕರಿಗಳಿಗೆ ತುಂಬಿಸಿ ತಲೆಯ ಮೇಲೆಯೇ ದೂರ ಸಾಗಿಸಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios