ಚಿರತೆಯ ಬಾಲ ಹಿಡಿದು ಸಾಹಸ ಮೆರೆದಿದ್ದ ತುಮಕೂರಿನ ಆನಂದ್‌ ಅವರ 13 ವರ್ಷದ ಪುತ್ರಿ ಕವನ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತುಮಕೂರು (ಜ.11): ವಾರದ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿತ್ತು. ವ್ಯಕ್ತಿಯೊಬ್ಬ ಚಿರತೆಯ ಬಾಲವನ್ನು ಧೈರ್ಯವಾಗಿ ಹಿಡಿದು ಅದನ್ನು ಬೋನಿಗೆ ಹಾಕಿದ್ದ. ತುಮಕೂರಿನಲ್ಲಿ ನಡೆದ ಈ ಘಟನೆಯಲ್ಲಿ ಧೈರ್ಯವಂತ ವ್ಯಕ್ತಿಯನ್ನು ಆನಂದ್‌ ಎಂದು ಗುರುತಿಸಲಾಗಿತ್ತು. ಚಿರತೆಯ ಬಾಲವನ್ನು ಹಿಡಿದು ಅದನ್ನು ಬೋನಿಗೆ ಹಾಕುವ ಮೂಲಕ ಗ್ರಾಮಸ್ಥರ ಆತಂಕವನ್ನು ಆನಂದ್‌ ದೂರ ಮಾಡಿದ್ದರು. ಆದರೆ, ಈ ಆನಂದ್‌ ಅವರಿಗೆ ಜೀವನದ ಬಹುದೊಡ್ಡ ನೋವು ಎದುರಾಗಿದೆ. ಚಿರತೆ ಬಾಲ ಹಿಡಿದು ಎಲ್ಲರನ್ನ ನಿಬ್ಬೆರಗು ಮಾಡಿದ್ದ ಆನಂದ್‌ಗೆ ಶನಿವಾರ ಆಘಾತ ಉಂಟಾಗಿದ್ದು, ಅವರ 13 ವರ್ಷದ ಪುತ್ರಿ ಕವನ ದಿಢೀರ್‌ ಸಾವು ಕಂಡಿದ್ದಾಳೆ.

ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಕವನ ಸಾವು ಕಂಡಿದ್ದಾಳೆ. ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಘಟನೆ ನಡೆದಿದೆ. ಇಲ್ಲಿನ ರಂಗಾಪುರ ಬಳಿಯ ಚಿಕ್ಕಕೊಟ್ಟಿಗೇನಹಳ್ಳಿ ನಿವಾಸಿ ಆಗಿರುವ ಆನಂದ್‌ ವಿಡಿಯೋ ವೈರಲ್‌ ಆದ ಕ್ಷಣದಿಂದ ರಾಜ್ಯದ ಮನೆಮಾತಾಗಿದ್ದರು. 

ಕಳೆದ ಒಂದು ವಾರದ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ತೆರಳುತ್ತಿದ್ದ ಚಿರತೆಯ ಬಾಲ ಹಿಡಿದು ಅದನ್ನು ಬೋನಿಗೆ ಹಾಕುವ ಮೂಲಕ ಸಾಹಸ ಮೆರೆದಿದ್ದು. ಆನಂದ್ ಚಿರತೆ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆನಂದ್ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿದು ಕೊಟ್ಟ ತುಮಕೂರಿನ ವೀರ: ವೀಡಿಯೋ ಸಖತ್ ವೈರಲ್

ಇಂದು ಏಕಾಏಕಿ ಅವರ ಮಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ತಿಪಟೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಮಾಡಲಾಗಿತ್ತು. ಸಂಜೆಯ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಆನಂದ್‌ ಅವರ ಪುತ್ರಿ ಸಾವು ಕಂಡಿದ್ದಾಳೆ.

'ನನ್ನ ಹತ್ರ ಹಣ ಕೇಳಿದ್ರೆ ಕೊಟ್ಟುಬಿಡ್ತಿದ್ದೆ..' 13 ವರ್ಷದ ಮಗನನ್ನು ಕಳೆದುಕೊಂಡು ಶಕುಂತಲಾ ಕಣ್ಣೀರು!

Scroll to load tweet…