ಮುಂಬೈನ ತಾಜ್‌ ಹೊಟೇಲಿನಲ್ಲಿ ಉದ್ಯೋಗಿಯಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಾಮಸಮುದ್ರದ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ. 

ಉಡುಪಿ(ಏ.07): ಮುಂಬೈನ ತಾಜ್‌ ಹೊಟೇಲಿನಲ್ಲಿ ಉದ್ಯೋಗಿಯಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಾಮಸಮುದ್ರದ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದಾರೆ.

ಅವರು ಮುಂಬೈ ತಾಜ್‌ ಹೊಟೇಲಿನಲ್ಲಿ 40 ವರ್ಷಗಳಿಂದ ಕ್ಯಾಪ್ಟನ್‌ ಆಗಿದ್ದು, ಏಪ್ರಿಲ್‌ ತಿಂಗಳಾಂತ್ಯಕ್ಕೆ ನಿವೃತ್ತರಾಗಲಿದ್ದರು. ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ವಾರ ಡಯಾಲಿಸಿಸ್‌ಗೆ ಮುಂಬೈನ ಸಿದ್ಧಿವಿನಾಯಕ ಆಸ್ಪತ್ರೆಗೆ ತೆರಳಿದ್ದ ಸಂದರ್ಭ ಕೊರೋನಾ ಸೋಂಕು ಪತ್ತೆಯಾಗಿ ಐಸೋಲೇಶನ್‌ ವಾರ್ಡ್‌ಗೆ ದಾಖಲಿಸಲಾಗಿತ್ತು.

ಮಂಗಳೂರಿನ ಮೊದಲ ಕೊರೋನಾ ಸೋಂಕಿತ ಸಂಪೂರ್ಣ ಗುಣಮುಖ..!

ಭಾನುವಾರ ಅವರು ಮೃತಪಟ್ಟಿದ್ದು, ರಾತ್ರಿಯೇ ಮಹರಾಷ್ಟ್ರ ಸರ್ಕಾರ ಅವರ ಅಂತ್ಯಕ್ರಿಯೆ ನಡೆಸಿದೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ದೊಡ್ಡ ಮಗ ವಿದೇಶದಲ್ಲಿದ್ದು, ಪತ್ನಿ ಮತ್ತು ಕಿರಿಯ ಮಗನನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.