ಮೂರು ಕರಡಿಗಳೊಂದಿಗೆ ಹೋರಾಡಿ ಬಚಾವಾದ ಬಾಲಮಣಿ

ದಾಂಡೇಲಿಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಕುಳಗಿಯ ಟಿ.ಎಸ್‌. ಬಾಲಮಣಿ ಎಂಬುವರ ಮೇಲೆ ಮೂರು ಕರಡಿಗಳು ದಾಳಿ ನಡೆಸಿದ್ದು, ಬಾಲಮಣಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Man fights with 3 bear and survive in Uttarakannada

ಉತ್ತರಕನ್ನಡ(ಜು.02): ದಾಂಡೇಲಿಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಕುಳಗಿಯ ಟಿ.ಎಸ್‌. ಬಾಲಮಣಿ ಎಂಬುವರ ಮೇಲೆ ಮೂರು ಕರಡಿಗಳು ದಾಳಿ ನಡೆಸಿದ್ದು, ಬಾಲಮಣಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಾಂಡೇಲಿಯಿಂದ 12 ಕಿ.ಮೀ. ದೂರದಲ್ಲಿರುವ ಕುಳಗಿಯ ನಿವಾಸಿ ಟಿ.ಎಸ್‌. ಬಾಲಮಣಿಯವರು ಎಂದಿನಂತೆ ಮುಂಜಾನೆಯ ವಾಯು ವಿಹಾರಕ್ಕೆಂದು ಹೊರಟಿದ್ದರು. ಮನೆಯಿಂದ 2 ಕಿ.ಮೀ. ದೂರದಲ್ಲಿ ನಡೆಯುತ್ತಿರುವಾಗ ರಸ್ತೆಯ ಪೊದೆಯೊಂದರಿಂದ ಒಮ್ಮೆಲೆ ಹೊರ ಬಂದ ಮೂರು ಕರಡಿಗಳು ಬಾಲಮಣಿಯವರ ಮೇಲೆರಗಿದವು.

ಹೆಣ್ಣು​ಮ​ರಿಗೆ ಜನ್ಮ ನೀಡಿದ ಧರ್ಮ​ಸ್ಥ​ಳದ ಆನೆ ಲಕ್ಷ್ಮೀ

ಹಠಾತ್‌ ದಾಳಿಯಿಂದ ವಿಚಲಿತನಾದ ಬಾಲಮಣಿ ಅವರು ಏನು ಮಾಡಬೇಕೆಂದು ತೋಚದೇ ಮನುಷ್ಯರ ಜತೆ ಗುದ್ದಾಡುವಂತೆ ಕರಡಿಗಳ ಜತೆ ಗುದ್ದಾಡಿದರು. ಮೂರು ಕರಡಿಗಳ ದಾಳಿಯಿಂದ ತಪ್ಪಿಸಿಕೊಂಡು ಹೊರ ಬರಲಾಗದ ಅವರು ರಸ್ತೆಯ ಮೇಲೆ ಬಿದ್ದು ಬಿಟ್ಟರು. ಆಗ ಒಂದು ಕರಡಿ ಅವರ ಬಲ ತೊಡೆ ಭಾಗದಲ್ಲಿ ಕಚ್ಚಿಬಿಟ್ಟಿತ್ತು.

ದೇಹದಲ್ಲಿದ್ದ ಶಕ್ತಿಯನ್ನೆಲ್ಲ ಒಂದು ಮಾಡಿ ಆ ಕರಡಿಯ ಮುಖದ ಮೇಲೆ ಮುಷ್ಟಿಯಿಂದ ಹೊಡೆದಾಗ ಕರಡಿ ತನ್ನ ಹಿಡಿತ ಬಿಟ್ಟಿತ್ತು. ಜೋರಾಗಿ ಕೂಗಲಾರಂಭಿಸಿದರಾದರೂ ರಸ್ತೆಯಲ್ಲಿ ಯಾರ ಸುಳಿವಿರಲಿಲ್ಲ. ಹಾಗೂ ಹೀಗೂ ಸೆಣೆಸಾಡಿದ ಬಾಲಮಣಿ ಅವರು ತಮ್ಮ ಕಾಲಿನ ಒದೆತ ಹಾಗೂ ಮುಷ್ಟಿಯ ಪ್ರಹಾರದಿಂದಲೇ ಕರಡಿಗಳನ್ನು ದೂರ ತಳ್ಳಿ ಮನೆಯ ಕಡೆ ಓಡಲಾರಂಭಿಸಿದರು. ಆಗಲೂ ಆ ಕರಡಿಗಳು ಅವರ ಬೆನ್ನು ಹತ್ತಿ ಓಡಿಸಿಕೊಂಡು ಬಂದವು. ಮನೆಯೊಳಗಡೆ ಬಂದು ಸೇರಿದಾಗಲೇ ಬಾಲಮಣಿ ಬಚಾವ್‌ ಆಗಿದ್ದು.

ಉಡುಪಿಯಲ್ಲಿ ಹೆಚ್ಚುತ್ತಿದೆ ಸಂಪರ್ಕಿತ ಸೋಂಕಿತರ ಸಂಖ್ಯೆ

ಬಲ ತೊಡೆಯ ಭಾಗ, ಎರಡೂ ಕಾಲಿನ ಮಂಡಿ, ಮೊಣ ಕೈ, ಎದೆ ಹಾಗೂ ದೇಹದ ಇತರೆ ಭಾಗ ಕರಡಿಗಳು ಪರಚಿದ ಗಾಯಗಳಾಗಿದ್ದು, ತಕ್ಷಣ ಬಾಲಮಣಿಯವರು ದಾಂಡೇಲಿಗೆ ಆಗಮಿಸಿ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios