ಹಾಸನ, [ಡಿ.7]: ವಿಕೃತ ಕಾಮಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಟಕೊಟ್ಟಿರುವ ಘಟನೆ ಹಾಸನದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ. 

ಲೇಡೀಸ್ ಹಾಸ್ಟಲ್ ಮಾಳಿಗೆ ಮೇಲೆ ತೆರಳಿ ವಿದ್ಯಾರ್ಥಿನಿಯರ ಬಟ್ಟೆ ಧರಿಸಿ ಕಾಟಕೊಟ್ಟಿದ್ದಾನೆ. ಬಳಿಕ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಹೊರತಂದು ಬೆಂಕಿ ಹಚ್ಚಿದ್ದಾನೆ. 

ಇನ್ನು ಬೈಕ್ ಗ್ರಾನೈಟ್ ಉದ್ಯಮಿ ಸುನೀಲ್ ಎಂಬುವರಿಗೆ ಸೇರಿದ್ದಾಗಿದೆ. ಮೊದಲು ಬೈಕ್ ಕಳ್ಳತನಕ್ಕೆ ಯತ್ನಿಸಿದ್ದು ಅದು ಸ್ಟಾರ್ಟ್ ಆಗದ ಕಾರಣ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. 

ಈ ವಿಕೃತ ಕಾಮಿಯ ಎಲ್ಲ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾನಗರ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.