Asianet Suvarna News Asianet Suvarna News

ಮತ್ತೆ ಬಂದಿದೆ ನರ​ಹಂತಕ ಚಿರ​ತೆ! ಈವ​ರೆಗೆ ಜಿಲ್ಲೆಯಲ್ಲಿ ಐದು ಬಲಿ

ಒಂದಲ್ಲ, ಎರ​ಡಲ್ಲ ಭರ್ತಿ ನಾಲ್ಕು ಮಂದಿ​ಯನ್ನು ಬಲಿ ಪಡೆದು ಕಳೆದ 4 ತಿಂಗ​ಳಿ​ನಿಂದ ಕಣ್ಮ​ರೆ​ಯಾ​ಗಿದ್ದ ನರ​ಹಂತಕ ಚಿರತೆ ಮತ್ತೊಂದು ಮಗು​ವಿನ ರಕ್ತ ಹೀರು​ವು​ದ​ರೊಂದಿಗೆ ಗ್ರಾಮೀಣ ಜನ​ರನ್ನು ಬೆಚ್ಚಿ ಬೀಳಿ​ಸಿದೆ.

Man eater cheetah in Tumakur create anxiety among people
Author
Bangalore, First Published Jul 12, 2020, 10:39 AM IST
  • Facebook
  • Twitter
  • Whatsapp

ತುಮ​ಕೂರು(ಜು.12): ಒಂದಲ್ಲ, ಎರ​ಡಲ್ಲ ಭರ್ತಿ ನಾಲ್ಕು ಮಂದಿ​ಯನ್ನು ಬಲಿ ಪಡೆದು ಕಳೆದ 4 ತಿಂಗ​ಳಿ​ನಿಂದ ಕಣ್ಮ​ರೆ​ಯಾ​ಗಿದ್ದ ನರ​ಹಂತಕ ಚಿರತೆ ಮತ್ತೊಂದು ಮಗು​ವಿನ ರಕ್ತ ಹೀರು​ವು​ದ​ರೊಂದಿಗೆ ಗ್ರಾಮೀಣ ಜನ​ರನ್ನು ಬೆಚ್ಚಿ ಬೀಳಿ​ಸಿದೆ.

ಕಳೆದ ಅಕ್ಟೋ​ಬರ್‌ ತಿಂಗ​ಳಿ​ನಲ್ಲಿ ಬಿನ್ನಿ​ಕು​ಪ್ಪೆ​ಯಲ್ಲಿ ಮಹಿ​ಳೆ​ಯೊ​ಬ್ಬಳನ್ನು ಕೊಲ್ಲುವು​ದ​ರೊಂದಿಗೆ ಜಿಲ್ಲೆ​ಯಲ್ಲಿ ನರ​ಹಂತಕ ಚಿರತೆ ಭೀತಿ ಹುಟ್ಟಿ​ಸಿತು. ಇದಾದ ಬಳಿಕ ಕುಣಿ​ಗಲ್‌ ತಾಲೂಕು ದೊಡ್ಡ​ಮ​ಳ​ಲಾ​ಡಿ​ಯಲ್ಲಿ ವೃದ್ಧ​ರೊ​ಬ್ಬ​ರ ರಕ್ತ ಹೀರಿತು. ನಂತರ ಮಣ​ಕು​ಪ್ಪೆ​ಯಲ್ಲಿ 9 ವರ್ಷದ ಬಾಲ​ಕ​ನನ್ನು ಕೊಂದು ಹಾಕಿತು. ಫೆಬ್ರ​ವರಿ ತಿಂಗ​ಳಿ​ನಲ್ಲಿ ಬೈಚಾಪು​ರ​ದಲ್ಲಿ ಮನೆ​ಯಂಗ​ಳ​ದಲ್ಲಿ ಆಟ​ವಾ​ಡು​ತ್ತಿದ್ದ ಹೆಣ್ಣು ಮಗು​ವನ್ನು ಕೊಲ್ಲು​ವು​ದ​ರೊಂದಿಗೆ ಮತ್ತಷ್ಟುಬೆಚ್ಚಿ​ ಬೀ​ಳಿ​ಸಿತ್ತು ಈ ನರ​ಹಂತಕ ಚಿರತೆ.

ವಿಕ್ಟೋರಿಯಾ ಆಸ್ಪತ್ರೆ ICUನಲ್ಲಿದ್ದ 70 ವರ್ಷದ ಕೊರೋನಾ ಸೋಂಕಿತ ಆತ್ಮಹತ್ಯೆ

ಅಂದು ಬೈಜಾ​ಪು​ರಕ್ಕೆ ಅರಣ್ಯ ಸಚಿ​ವರು ಆಗ​ಮಿಸಿ ನರ​ಹಂತಕ ಚಿರ​ತೆ​ಯನ್ನು ಕಂಡಲ್ಲಿ ಗುಂಡು ಹೊಡೆ​ಯು​ವಂತೆ ಆದೇ​ಶಿ​ಸಿ​ದರು. ಚಿರ​ತೆ​ಗಾಗಿ ಅರ​ಣ್ಯ ಇಲಾಖೆ ಅಧಿಕಾರಿಗಳು ಹುಡು​ಕಿ​ದರೂ ನರ​ಹಂತಕ ಜಾಡು ಸಿಗ​ಲಿಲ್ಲ. ಕಡೆಗೆ ನಾಗ​ರಹೊಳೆ​ಯಿಂದ ಆನೆ​ಗ​ಳನ್ನು ಕರೆಸಿ ಕಾರ್ಯಾ​ಚ​ರಣೆ ನಡೆ​ಸ​ಲಾ​ಯಿತು. ಆದರೂ ನಿರೀಕ್ಷೆ ಮಟ್ಟ​ದಷ್ಟುಯಶಸ್ಸು ಕಾಣ​ಲಿ​ಲ್ಲ.

8 ಚಿರ​ತೆ​ಗಳ ಸೆರೆ:

ತುಮ​ಕೂರು, ಗುಬ್ಬಿ ಹಾಗೂ ಕುಣಿ​ಗಲ್‌ ತಾಲೂ​ಕು​ಗ​ಳಲ್ಲಿ ಕಳೆದ 5 ತಿಂಗ​ಳಿ​ನಿಂದ ಬೆಂಬಿ​ಡದೆ ಕಾಡು​ತ್ತಿದ್ದ ಚಿರ​ತೆ​ಯನ್ನು ಕಡೆಗೂ ಅರಣ್ಯ ಇಲಾ​ಖೆ​ಯ​ವರು ಬೋನಿಗೆ ಕೆಡ​ವು​ವಲ್ಲಿ ಯಶ​ಸ್ವಿ​ಯಾ​ದರು. ಇದರ ಮಧ್ಯೆ ಹೇಮಾ​ವತಿ ನಾಲೆ ಕೆಳಗೆ ಅಡ​ಗಿದ್ದ ಚಿರ​ತೆ​ಯೊಂದನ್ನು ಅತ್ಯಂತ ಯಶಸ್ವಿ ಕಾರ್ಯಾ​ಚ​ರ​ಣೆ​ಯಿಂದ ಸೆರೆ ಹಿಡಿ​ದರು. ಅಂತೂ ಇಂತೂ ಚಿರತೆ ಹಾವಳಿ ಕಡಿ​ಮೆ​ಯಾ​ಯಿತು ಎನ್ನು​ವ​ಷ್ಟ​ರಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ವ್ಯಕ್ತಿ​ಯೊ​ಬ್ಬರ ಮೇಲೆ ಚಿರತೆ ಎಗರಿ ಗಾಯ​ಗೊ​ಳಿ​ಸಿತ್ತು. ಇನ್ನೇನು ಆ ಪ್ರಕ​ರಣ ಮಾಸುವ ಮುನ್ನವೇ ಮತ್ತೊಂದು ಬಲಿ ತೆಗೆ​ದು​ಕೊ​ಳ್ಳುವ ಮೂಲಕ ಚಿರತೆ ಮತ್ತೆ ತನ್ನ ಅಟ್ಟ​ಹಾಸ ಮೆರೆ​ದಿದೆ.

ಅತ್ಯಂತ ಅಪಾ​ಯ​ಕಾರಿ:

ಈಗಾ​ಗಲೇ ತುಮ​ಕೂರು ಗ್ರಾಮಾಂತರ ಪ್ರದೇ​ಶ​ದಲ್ಲಿ ಸಾಕಷ್ಟುಖಾಲಿ ಜಮೀ​ನು​ಗ​ಳಲ್ಲಿ ಪೊದೆ​ಗ​ಳನ್ನು ಬೆಳೆ​ದಿವೆ. ಅಲ್ಲದೇ, ಹೇಮಾ​ವತಿ ನೀರಿನ ಒರತೆ ಸಾಕಷ್ಟುಇರು​ವು​ದ​ರಿಂದ ಚಿರ​ತೆ​ಗಳ ಆವಾ​ಸ​ ಸ್ಥಾ​ನಕ್ಕೆ ಇದು ಹೇಳಿ ಮಾಡಿ​ಸಿ​ದಂತಾ​ಗಿದೆ. ಮೊದ​ಲೆಲ್ಲಾ ಚಿರ​ತೆ​ಗಳು ಕೋಳಿ, ಕುರಿ, ಮೇಕೆ, ಕರು​ಗ​ಳ​ನ್ನಷ್ಟೆತಿನ್ನು​ತ್ತಿದ್ದು, ಈಗ ಮನು​ಷ್ಯರ ರಕ್ತ ಹೀರುವ ಮೂಲಕ ನರ​ಹಂತ​ಕ​ಗ​ಳಾ​ಗಿವೆ. ಈಗಾ​ಗಲೇ ಐದು ನರ​ಬಲಿ ಪಡೆ​ದಿ​ರುವ ನರ​ಹಂತಕ ಚಿರ​ತೆ​ಗ​ಳಿಗೆ ಕಡಿ​ವಾಣ ಹಾಕ​ದಿ​ದ್ದರೆ ಮತ್ತಷ್ಟುಅನಾ​ಹುತ ತಪ್ಪಿ​ದ್ದಲ್ಲ. ಚಿರತೆ ಹಾವಳಿ ಹೆಚ್ಚಾ​ಗಿದ್ದ ಸಂದ​ರ್ಭ​ದಲ್ಲಿ ರಾತ್ರಿ ವೇಳೆ ಯಾರೂ ಕೂಡ ಮನೆ​ಯಿಂದ ರಾತ್ರಿ ವೇಳೆ ಓಡಾ​ಡು​ತ್ತಿ​ರ​ಲಿಲ್ಲ. ಕಳೆದ ನಾಲ್ಕು ತಿಂಗ​ಳಿ​ನಿಂದ ನರ​ಹಂತಕ ಚಿರತೆ ಹಾವ​ಳಿ​ಯಿ​ಲ್ಲದೆ ನೆಮ್ಮ​ದಿ​ಯಾ​ಗಿದ್ದ ಜನ​ರಿಗೆ ಮತ್ತೆ ನರ​ಹಂತಕ ಜಾಡು ಕಾಣಿ​ಸಿ​ಕೊಂಡಿ​ರು​ವುದು ಆತಂಕ ಮೂಡಿ​ಸಿದೆ.

ನರ​ಹಂತ​ಕನ ಹೆಜ್ಜೆ ಗುರು​ತು

ಮೊದಲ ಬಾರಿ ಬಿನ್ನಿ​ಕು​ಪ್ಪೆ​ಯಲ್ಲಿ ಮಹಿಳೆ ಬಲಿ

ದೊಡ್ಡ​ಮ​ಳ​ಲ​ವಾ​ಡಿ​ಯಲ್ಲಿ ಎರ​ಡನೇ ಬಲಿ

ಮಣ​ಕು​ಪ್ಪೆ​ಯಲ್ಲಿ ಬಾಲ​ಕನ ರಕ್ತ ಹೀರಿದ ಚಿರತೆ

ಬೈಜಾ​ಪು​ರ​ದಲ್ಲಿ 3 ವರ್ಷದ ಮಗು​ವನ್ನು ಕೊಂದ ಚಿರತೆ

ಈಗ ಕುಣಿ​ಗಲ್‌ ತಾಲೂಕು ರಾಜೇ​ನ​ಹ​ಳ್ಳಿ​ಯಲ್ಲಿ ಐದನೇ ಬಲಿ

2019 ಅಕ್ಟೋಬರ್‌ ತಿಂಗಳಲ್ಲಿ ಮೊದಲ ಬಾರಿ ಬಿನ್ನಿ​ಕು​ಪ್ಪೆ​ಯಲ್ಲಿ ಮಹಿಳೆ ಬಲಿ ಪಡೆಯುವ ಮೂಲಕ ಚಿರತೆ ಜನರಲ್ಲಿ ಆತಂಕ ಮೂಡಿಸಿತು. ನಂತರ ದಿನದಲ್ಲಿ ತಿಂಗಳಲ್ಲಿ ಆಗ್ಗಾಗ್ಗೆ ದಾಳಿ ಮಾಡುವ ಮೂಲಕ ಜಿಲ್ಲೆಯಲ್ಲಿ ತಮ್ಮ ದಾಳಿಗಳ ಸಂಖ್ಯೆ ಹೆಚ್ಚು ಮಾಡಿತ್ತು. ನಂತರ ಅರಣ್ಯ ಇಲಾಖೆ ಕಾರಾರ‍ಯಚಾರಣೆದಿಂದ ಒಂದುವರೆ, ಎರಡು ತಿಂಗಳಿಗೊಮ್ಮೆ ದಾಳಿ ಮಾಡಿ ಪ್ರಾಣಿಗಳ ಜೊತೆಗೆ ಮನುಷ್ಯರನ್ನು ಬಲಿ ಪಡೆಯುತ್ತಿತ್ತು. ನಾಲ್ಕೈದು ತಿಂಗಳ ಹಿಂದ ಚಿರತೆಗಳ ಸೆರೆ ಹಾಗೂ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ದಾಳಿ ನಂತರ ಕೊಂಚ ದಾಳಿ ನಿಲ್ಲಿಸಿತ್ತು. ಆದರೆ, ಶನಿವಾರ ಮಧ್ಯಾಹ್ನ 3 ಗಂಟೆ 10 ವರ್ಷದ ಮಗುವನ್ನು ಬಲಿ ಪಡೆಯುವ ಮೂಲಕ ಮತ್ತೆ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

-ಉಗಮ ಶ್ರೀನಿ​ವಾ​ಸ್‌

Follow Us:
Download App:
  • android
  • ios