ಮೊಹರಂ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ವೇಳೆಯೇ ವ್ಯಕ್ತಿಗೆ ಹೃದಯಾಘಾತ: ಸಾವು
ಮೊಹರಂ ಮೆರವಣಿಗೆಯ ಹೆಜ್ಜೆ ಮೇಳದಲ್ಲಿ ಹೆಜ್ಜೆ ಹಾಕುತ್ತಿದ್ದ ವೇಳೆಯೇ ವ್ಯಕ್ತಿಗೆ ಹೃದಯಾಘಾತವಾಗಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗದಗ (ಜು.29): ಮೊಹರಂ ಮೆರವಣಿಗೆಯ ಹೆಜ್ಜೆ ಮೇಳದಲ್ಲಿ ಹೆಜ್ಜೆ ಹಾಕುತ್ತಿದ್ದ ವೇಳೆಯೇ ವ್ಯಕ್ತಿಗೆ ಹೃದಯಾಘಾತವಾಗಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಇಮಾಮ್ ಸಾಬ್ ನದಾಫ್ (55) ಮೃತಪಟ್ಟ ವ್ಯಕ್ತಿ. ಗ್ರಾಮದ ಮಸೀದಿಯಿಂದ ವಿರೂಪಾಕ್ಷ ಮಂದಿರ ವರೆಗೆ ಹೊರಟಿದ್ದ ಮೊಹರಂ ಮೆರವಣಿಗೆಯಲ್ಲಿ ಇಮಾಮ್ ಸಾಬ್ ನದಾಫ್ ಹೆಜ್ಜೆ ಹಾಕುತ್ತಿದ್ದರು. ಗ್ರಾಮ ಪಂಚಾಯ್ತಿ ಕಚೇರಿ ಬಳಿ ಮೆರವಣಿಗೆ ತಲುಪುತ್ತಿದ್ದಂತೆ ಏಕಾ ಏಕಿ ಸ್ಥಳದಲ್ಲೇ ಇಮಾಮ್ ಸಾಬ್ ಕುಸಿದು ಬಿದ್ದರು. ಘಟನೆಯ ದೃಶ್ಯಾವಳಿ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಶೌಚಾಲಯದಲ್ಲಿ ವ್ಯಕ್ತಿಗೆ ಹೃದಯಾಘಾತ: ಶೌಚಾಲಯಕ್ಕೆ ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಘಟನೆ ಪಟ್ಟಣದ ಡಾ.ರಾಜ್ ವೃತ್ತದಲ್ಲಿ ನಡೆದಿದೆ. ಮೃತಪಟ್ಟವ್ಯಕ್ತಿಯನ್ನು ಆಂಧ್ರಪ್ರದೇಶದ ಗುಂಟೂರಿನ ವಿಜಯಕುಮಾರ್(35)ಎಂದು ಗುರುತಿಸಲಾಗಿದೆ. ಲಾರಿ ಕ್ಲೀನರ್ ಆಗಿರುವ ವಿಜಯಕುಮಾರ್ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ತುಂಬಿಸಲು ಗುಂಟೂರಿನಿಂದ ಬಂದಿದ್ದು, ಪುರಸಭೆಯ ಶೌಚಾಲಯಕ್ಕೆ ಬಂದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಘಟನೆ ಸ್ಥಳಕ್ಕೆ ಸಿಬ್ಬಂದಿ ಜತೆ ಭೇಟಿ ನೀಡಿದ ಸಬ್ ಇನ್ಸ್‌ಪೆಕ್ಟರ್ ವರಲಕ್ಷ್ಮೇ ಪರಿಶೀಲನೆ ನಡೆಸಿ ಶವವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳ ಮಾದರಿಯಲ್ಲಿ ಗ್ರಾಪಂಗಳ ಅಭಿವೃದ್ಧಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರನ್ನು ಹೊರತೆಗೆಯಲು ಯತ್ನಿಸಿದ ವೇಳೆ ವಿದ್ಯುತ್ ಸ್ಪರ್ಶದಿಂದ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ-ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ವರ್ಕ್ಶಾಪ್ ಬಳಿ ಗುರುವಾರ ರಾತ್ರಿ ನಡೆದಿದೆ. ಅಶೋಕಪುರಂ ನಿವಾಸಿಗಳಾದ ಕಿರಣ್(35), ರವಿಕುಮಾರ್(33) ಮೃತರು. ಇನ್ನು ಕಾರು ಚಾಲಕ ರವಿ, ಸಹಾಯ ಮಾಡಲು ಬಂದಿದ್ದ ಸಂದೇಶ, ಶಿವಕುಮಾರ್ ಹಾಗೂ ರೋಷನ್ ಎಂಬವರು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿ ಎಂಬವರು ಗುರುವಾರ ರಾತ್ರಿ ಇನ್ನೋವಾ ಕಾರನ್ನು ಚಾಲನೆ ಮಾಡಿಕೊಂಡು ನಾಚನಹಳ್ಳಿಪಾಳ್ಯದ ಕಡೆಯಿಂದ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಹೆದ್ದಾರಿಗೆ ಉರುಳುತ್ತಿರುವ ವಿದ್ಯುತ್ ಟವರ್‌ಗಳು: ಪ್ರಾಧಿಕಾರದವರ ಭಂಡತನ
ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರು ವಿದ್ಯುತ್ ಕಂಬ ಮತ್ತು ಪಕ್ಕದಲ್ಲೇ ಇದ್ದ ಕಾಂಪೌಂಡ್ ಗೋಡೆ ನಡುವೆ ಸಿಕ್ಕಿಕೊಂಡಿದೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಚಾಲಕರಾದ ರವಿಕುಮಾರ್ ಮತ್ತು ಕಿರಣ್ ಅವರು ಕಾರು ಚಾಲಕನ ನೆರವಿಗೆ ಬಂದಿದ್ದು, ಕಾರನ್ನು ಹೊರ ತೆಗೆಯಲು ಮುಂದಾಗಿದ್ದಾರೆ. ಇದಕ್ಕೆ ದಾರಿಯಲ್ಲಿ ಹೋಗುತ್ತಿದ್ದ ಸಂದೇಶ್, ಶಿವಕುಮಾರ್, ರೋಷನ್ ಮತ್ತು ಇತರರು ನೆರವಿಗೆ ಬಂದಿದ್ದಾರೆ. ಈ ವೇಳೆ ವಿದ್ಯುತ್ ಶಾಕ್‌ನಿಂದ ರವಿಕುಮಾರ್ ಮತ್ತು ಕಿರಣ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಉಳಿದವರಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.