Asianet Suvarna News Asianet Suvarna News

ಟ್ರಾನ್ಸ್‌ಫಾರ್ಮರ್‌ ಸ್ಫೋಟಕ್ಕೆ ಸವಾರ ಬಲಿ: ಮಗಳ ಮದುವೆ ಸಂಭ್ರಮಕ್ಕೆ ಬ್ರೇಕ್‌ ಹಾಕಿದ ಜವರಾಯ

*  ನಿಶ್ಚಿತಾರ್ಥಕ್ಕೆ ಚೌಲ್ಟ್ರಿ ಬುಕ್‌ ಮಾಡಿ ಮಗಳೊಂದಿಗೆ ವಾಪಸ್‌ ಬರುವಾಗ ದುರ್ಘಟನೆ
*  ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರಿಗೆ ಬೆಂಕಿ
*  ತಂದೆ ಸಾವು, ಮದುವೆ ಸಂಭ್ರಮದಲ್ಲಿ ಮಗಳ ಸ್ಥಿತಿಯೂ ಗಂಭೀರ
 

Man Dies Due to Transformer Explosion in Bengaluru grg
Author
Bengaluru, First Published Mar 24, 2022, 5:53 AM IST | Last Updated Mar 24, 2022, 5:53 AM IST

ಬೆಂಗಳೂರು(ಮಾ.24):  ತಾಂತ್ರಿಕ ದೋಷ(Technical Error) ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌(Transformer) ಸ್ಫೋಟಗೊಂಡು ಸ್ಕೂಟರ್‌ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಕಿದ ಪರಿಣಾಮ ತಂದೆ ಮೃತಪಟ್ಟು, ಮಗಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಉಲ್ಲಾಳ ಬಳಿಯ ಮಂಗನಹಳ್ಳಿ ಕ್ರಾಸ್‌ ಸಮೀಪ ಬುಧವಾರ ನಡೆದಿದೆ.

ಮಂಗನಹಳ್ಳಿ ನಿವಾಸಿ ಶಿವರಾಜ್‌(55) ಮೃತ(Death) ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತರ ಪುತ್ರಿ ಚೈತನ್ಯ(19) ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್‌ ಮಾಡಿ ಮಗಳ ಜತೆ ಶಿವರಾಜ್‌ ಮನೆಗೆ ಮರಳುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ರಕ್ಷಿಸಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BESCOM: ಬೆಂಗ್ಳೂರಲ್ಲಿ ಇಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಮಗಳ ಮದುವೆ ಸಂಭ್ರಮ:

ಸೆಕ್ಯೂರಿಟಿ ಗಾರ್ಡ್‌ ಶಿವರಾಜ್‌ ಅವರು, ತಮ್ಮ ಪತ್ನಿ ಮತ್ತು ಮಗಳ ಜತೆ ಮಂಗನಹಳ್ಳಿಯಲ್ಲಿ ನೆಲೆಸಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ಚೈತನ್ಯಳಿಗೆ ಇತ್ತೀಚಿಗೆ ಮದುವೆ(Marriage) ನಿಶ್ಚಯವಾಗಿತ್ತು. ಶಿವರಾಜ್‌ ದಂಪತಿಗೆ ಚೈತನ್ಯ ಒಬ್ಬಳೇ ಮಗಳು.

ಪುತ್ರಿ ಮದುವೆಯನ್ನು ಸಡಗರದಿಂದ ಮಾಡಲು ಯೋಜಿಸಿದ್ದ ಅವರು, ಬುಧವಾರ ಮಧ್ಯಾಹ್ನ ಮನೆ ಹತ್ತಿರ ನಿಶ್ಚಿತಾರ್ಥಕ್ಕಾಗಿ ಕಲ್ಯಾಣ ಮಂಟಪ ಬುಕ್‌ ಮಾಡಲು ಮಗಳನ್ನು ಕರೆದುಕೊಂಡು ಹೋಗಿದ್ದರು. ಮುಂದಿನ ತಿಂಗಳ ಮೊದಲ ವಾರದಲ್ಲಿ ನಿಶ್ಚಿತಾರ್ಥದ ದಿನಾಂಕ ಸಹ ಗೊತ್ತಾಗಿತ್ತು. ಕಲ್ಯಾಣ ಮಂಟಪ ಬುಕ್‌ ಮಾಡಿ ಸ್ಕೂಟರ್‌ನಲ್ಲಿ ತಂದೆ-ಮಗಳು ಮನೆಗೆ ಮರಳುತ್ತಿದ್ದರು. ಆ ವೇಳೆ ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಫೋಟಗೊಂಡಿದೆ(Explosion). ಅದೇ ಸಮಯಕ್ಕೆ ಅಲ್ಲಿಗೆ ಬಂದ ಟ್ರಾನ್ಸ್‌ಫಾರ್ಮರ್‌ನಿಂದ ಸ್ಫೋಟದಿಂದ ಸಿಡಿದ ಬೆಂಕಿ ಕಿಡಿಗಳು ತಂದೆ-ಮಗಳಿಗೆ ತಾಕಿದೆ. ಇದರಿಂದ ಅವರಿಗೆ ಬೆಂಕಿ ಹೊತ್ತಿಕೊಂಡು ಅಗ್ನಿ ಜ್ವಾಲೆಗೆ ಶಿವರಾಜ್‌ ಹಾಗೂ ಚೈತನ್ಯ ಸಿಲುಕಿದ್ದಾರೆ. ಕೂಡಲೇ ತಂದೆ-ಮಗಳ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಬೆಡ್‌ಶೀಟ್‌ ಅನ್ನು ಹೊದಿಸಿ ತಂದೆ-ಮಗಳಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ ಸಾರ್ವಜನಿಕರು, ಬಳಿಕ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ(Victoria Hospital) ಸಾಗಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ನಾಗರಬಾವಿ ಅಗ್ನಿಶಾಮಕ ದಳ ಠಾಣೆ ಸಿಬ್ಬಂದಿ, ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಈ ದುರಂತದಲ್ಲಿ ಶಿವರಾಜ್‌ ಅವರ ದೇಹ ಶೇ.70ರಷ್ಟು ಹಾಗೂ ಅವರ ಪುತ್ರಿ ಚೈತನ್ಯಳ ದೇಹವು ಶೇ.50ರಷ್ಟುಸುಟ್ಟಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಶಿವರಾಜ್‌ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಅಂಜನಾಪುರ ಬೆಸ್ಕಾಂ(BESCOM) ಅಧಿಕಾರಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Power Cut: ಫೆ.14 ರಿಂದ 16 ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್.. ನಿಮ್ಮದು ಯಾವ್ ಏರಿಯಾ?

ಸ್ಥಳೀಯ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಕಿ ಕಾಣಿಸಿದಾಗಲೇ ಬೆಸ್ಕಾಂಗೆ ಮಾಹಿತಿ

ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಿಡಿ ಕಾಣಿಸಿದ ಕೂಡಲೇ ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಆ ಭಾಗದ ವಿದ್ಯುತ್‌(Electricity) ಸಂಪರ್ಕ ಕಡಿತಗೊಳಿಸದೆ ಬೆಸ್ಕಾಂ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ತಂದೆ-ಮಗಳು ಜೀವ ಅಪಾಯಕ್ಕೆ ಸಿಲುಕಿದೆ ಎಂದು ಪೊಲೀಸರು(Police) ಹೇಳಿದ್ದಾರೆ.

ಬೇಕಾಬಿಟ್ಟಿ ವಿದ್ಯುತ್‌ ಕಡಿತ!

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (Bescom) ವತಿಯಿಂದ ಬೇಕಾಬಿಟ್ಟಿ ವಿದ್ಯುತ್‌ ಕಡಿತ ಮಾಡುತ್ತಿದೆ. ಪರಿಣಾಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರು (Corona Patients), ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು (Work From Home), ಆನ್‌ಲೈನ್‌ ತರಗತಿಗಳಲ್ಲಿ (Online Classes) ಕಲಿಯುತ್ತಿರುವ ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ. ಜ. 16 ರಂದು ಒಂದೇ ದಿನ ನಗರದ ಬರೋಬ್ಬರಿ 146 ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ ಉಂಟಾಗಿದೆ. ಅಷ್ಟೇ ಅಲ್ಲದೆ ಜ.17ರಂದು ಸೋಮವಾರವೂ 103 ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ ಮಾಡುತ್ತಿರುವುದಾಗಿ ಬೆಸ್ಕಾಂ ಹೇಳಿತ್ತು.
 

Latest Videos
Follow Us:
Download App:
  • android
  • ios