Asianet Suvarna News Asianet Suvarna News

ನೀರು ಗಂಟಲಲ್ಲಿ ಸಿಲುಕಿ ಕಾರ್ಮಿಕ ಸಾವು..!

ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿಹಾಕಿಕೊಂಡು, ಮಾಂಸಹಾರ ಸೇವಿಸುವಾಗ ಎಲುಬು ಗಂಟಲಲ್ಲಿ ಸಿಕ್ಕಿ ಮೃತಪಟ್ಟ ಘಟನೆಗಳನ್ನು ಕೇಳಿದ್ದೇವೆ. ಆದರೆ ಮಂಗಳೂರಿನಲ್ಲಿ ನೀರು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

Man died while drinking water in mangalore
Author
Bangalore, First Published Jan 30, 2020, 7:47 AM IST
  • Facebook
  • Twitter
  • Whatsapp

ಮಂಗಳೂರು(ಜ.30): ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿಹಾಕಿಕೊಂಡು, ಮಾಂಸಹಾರ ಸೇವಿಸುವಾಗ ಎಲುಬು ಗಂಟಲಲ್ಲಿ ಸಿಕ್ಕಿ ಮೃತಪಟ್ಟ ಘಟನೆಗಳನ್ನು ಕೇಳಿದ್ದೇವೆ. ಆದರೆ ಮಂಗಳೂರಿನಲ್ಲಿ ನೀರು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ಮೂಡುಬಿದಿರೆ: ಬಾಯಾರಿದ ಕೂಲಿ ಕಾರ್ಮಿಕ ಅವಸರದಲ್ಲಿ ನೀರು ಕುಡಿಯುವಾಗ ನೀರು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಘಟನೆ ಕೋಟೆಬಾಗಿಲಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪುತ್ತಿಗೆಪದವು ನಿವಾಸಿ ವಿಕ್ರಮ ಗೌಡ ಅವರ ಮಗ ವಸಂತ ಗೌಡ (38) ಮೃತರು.

ಮಗನ ದೇಹ ಮಣ್ಣು ಮಾಡಿದ ಪೋಷಕರು, 5 ವರ್ಷದ ನಂತರದ DNA ವರದಿ ಹೇಳಿದ್ದೇ ಬೇರೆ!

ಈತ ಕೋಟೆಬಾಗಿಲಿನಲ್ಲಿ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ. ಕೆಲಸದ ಮಧ್ಯೆ ಬಾಯಾರಿಕೆಯಾಯಿತೆಂದು ಅವಸರದಲ್ಲಿ ನೀರು ಕುಡಿದಿದ್ದಾರೆ. ನೀರು ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿತ್ತೆನ್ನಲಾಗಿದ್ದು ತಕ್ಷಣ ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಿಸದೆ ಮೃತಪಟ್ಟರೆನ್ನಲಾಗಿದೆ.

ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಎಂದು ಕೇಸು ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ. ಮೃತರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ.

Follow Us:
Download App:
  • android
  • ios