ಮೈಸೂರು(ಫೆ.19): ಮೈಸೂರಿನಲ್ಲಿ ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಬೈಕ್ ಸವಾರ ಸಿಗ್ನಲ್ ಜಂಪ್ ಮಾಡಲು ಪ್ರಯತ್ನಿಸಿದ್ದ. ಮೈಸೂರಿನ ಆಕಾಶವಾಣಿ ಸಿಗ್ನಲ್ ಬಳಿ ಘಟನೆ ನಡೆದಿದೆ.

ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಖಾಸಗಿ ಬಸ್ ಟಯರ್ ವ್ಯಕ್ತಿ ತಲೆ ಮೇಲೆ ಹರಿದಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರಿನ ಆಕಾಶವಾಣಿ ಸಿಗ್ನಲ್ ಬಳಿ ಘಟನೆ‌ ನಡೆದಿದ್ದು, ಕೆಆರ್‌ಎಸ್ ಕಡೆಯಿಂದ ಮೈಸೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಸವಾರನ ಮೇಲೆ ಹರಿದಿದೆ.

ಗರ್ಲ್‌ಫ್ರೆಂಡ್‌ಗಾಗಿ ಬೈಕ್ ಕದ್ದ ರೋಮಿಯೋ..!

ಸಿಗ್ನಲ್ ಜಂಪ್ ಮಾಡಿ ಮುಂದೆ ಹೋಗಲು ಪ್ರಯತ್ನಿಸಿದ ಬೈಕ್ ಸವಾರ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್‌ ಕೂಡಾ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ. ಮೃತ ದೇಹವನ್ನು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತ ಸಂಬಂಧ ವಿವಿ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"