ಮಧುಗಿರಿ [ಮಾ.16]: ಗಂಡ-ಹೆಂಡತಿ ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಹನುಮಂತ ಮತ್ತವರ ಪತ್ನಿ ಅನಿತಾ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಬೆಂಗಳೂರಿನಲ್ಲಿ ನೆಲಸಿದ್ದ ಹನುಮಂತ ಗ್ರಾಮಕ್ಕೆ ಬಂದಿದ್ದ. ಭಾನುವಾರ ಇವರಿಬ್ಬರ ನಡುವೆ ಜೋರು ಗಲಾಟೆಯಾಗಿದೆ.

ಆಗ ಸಿಟ್ಟಿಗೆದ್ದ ಹನುಮಂತ ಮಚ್ಚಿನಿಂದ ತನ್ನ ಹೆಂಡತಿಯನ್ನು ಹೊಡೆಯಲು ಮುಂದಾಗ. ಆಗ ಜಗಳ ಬಿಡಿಸಲು ನಾದಿನಿ ಮೇಘನಾ ಮಧ್ಯೆ ಪ್ರವೇಶಿಸಿದ್ದಾಳೆ.

ಫಸ್ಟ್‌ನೈಟಿಗೂ ಮುನ್ನ ಪತ್ನಿಯ ರಾಸಲೀಲೆ ಲೀಕ್‌! ಪತಿಯ ಮೊಬೈಲ್ ಗೆ ಬಂದ ವಿಡಿಯೋ...

ಈ ವೇಳೆ ಆಕೆಯ ಮುಂಗೈಗೆ ಮಚ್ಚಿನ ಏಟು ಬಿದ್ದು ಜೋತಾಡುತ್ತಿದೆ. ಕೂಡಲೇ ಆಕೆಯನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿ ಪರಾರಿಯಾಗಿದ್ದ ಹನುಮಂತನನ್ನು ಪೊಲೀಸರು ಬಂಧಿಸಿದ್ದಾರೆ.