ಹಾಸ​ನ [ಫೆ.29]:  ಪತ್ನಿಯ ಕಿರುಕುಳ ತಾಳಲಾರದೆ ಮನನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ​ಕೊಂಡಿ​ರುವ ಘಟನೆ ಸಕ​ಲೇ​ಶ​ಪುರ ತಾಲೂಕು ಹೆತ್ತೂರು ಹೋಬ​ಳಿಯ ಬಾಳೆ​ಹಳ್ಳ ಗ್ರಾಮ​ದಲ್ಲಿ ಈ​ಚೆಗೆ ನಡೆ​ದಿದೆ. ಗ್ರಾಮದ ವಾಸಿ ಸಂಜ​ನ್‌​ಗೌಡ (33) ಎಂಬ​ವರೇ ಮೃತ ದುರ್ದೈ​ವಿ. ಇವರಿಗೆ 6 ವರ್ಷದ ಮಗಳಿದ್ದಾಳೆ.

ಈಗ್ಗೆ 12 ವರ್ಷಗಳ ಹಿಂದೆ ಸಂಜನಗೌಡ ಅವರು ಸಕಲೇಶಪುರ ತಾಲೂಕಿನ ಹಾಡ್ಯ ಗ್ರಾಮದ ವಾಸಿ ಮಂಜುನಾಥ ಎಂಬುವರ ಮಗಳು ಭುವನೇಶ್ವರಿಯನ್ನು ಪ್ರೀತಿಸಿ ವಿವಾಹವಾಗಿದ್ದರು.

ಸಂಜನಗೌಡ ಮತ್ತು ಭುವನೇಶ್ವರಿ ಬೆಂಗಳೂರಿನ ಬೊಮ್ಮೇನಹಳ್ಳಿ ವಿಶ್ವಪ್ರಿಯಾ ಲೇಔಟ್‌ನಲ್ಲಿ ವಾಸವಾಗಿದ್ದರು. ಈಚೆಗೆ ಇವರಿಬ್ಬರಲ್ಲಿ ಹೊಂದಾಣಿಕೆಯಾಗದ ಕಾರಣ ಬೆಂಗಳೂರಿನಲ್ಲಿ ಬೇರೆ ಬೇರೆ ವಾಸವಾಗಿದ್ದರು. 

ಬೆಳಗಾವಿ: ಬಾಡೂಟಕ್ಕೆ ಕರೆಯದಕ್ಕೆ ಹೀಗ್ ಮಾಡೋದಾ?...

ಅಲ್ಲದೇ, ಭುನೇ​ಶ್ವರಿ ಅವರು ಪದೇ ಪದೇ ಮನೆಯ ಹತ್ತಿರ ಬರಬೇಡ. ಎಲ್ಲಿಯಾದರೂ ಹೋಗಿ ನಮಗೆ ನಿರಾಳವಾಗಿರುತ್ತದೆ ಎಂದು ಸಂಜ​ನ್‌​ಗೌಡ ಅವ​ರಿಗೆ ಹೇಳಿ​ದ್ದಾರೆ. ಈ ವಿಷಯವನ್ನು ಸಂಜ​ನ್‌​ಗೌಡ ತಮ್ಮ ತಾಯಿಗೆ ತಿಳಿಸಿದ್ದರು. ಫೆ.23ರಂದು ಸಂಜ​ನ್‌​ಗೌಡ ಅವರು ಊರಿಗೆ ಬಂದಿದ್ದರು. ಆದರೆ, ಫೆ.26ರಂದು ಮನನೊಂದು ವಿಷ ಸೇವಿಸಿದ್ದರು. ಕೂಡಲೇ ಅವ​ರನ್ನು ಹೆತ್ತೂರು ಮತ್ತು ಸಕಲೇಶಪುರ ಆಸ್ಪತ್ರೆಗೆ ತೋರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾ​ಗಿತ್ತು. ಆದರೆ, ಚಿಕಿ​ತ್ಸೆಗೆ ಸ್ಪಂದಿ​ಸದೆ ಸಂಜ​ನ್‌​ಗೌಡ ಮೃತ​ಪ​ಟ್ಟಿ​ದ್ದಾ​ರೆ. 

ತಮ್ಮ ಮಗ ಸಂಜನ್‌ಗೌಡ ಅವರ ಸಾವಿಗೆ ಕಾರ​ಣ​ರಾದ ಸೊಸೆ ಭುನೇಶ್ವರಿ, ಆಕೆಯ ತಾಯಿ ನಳಿನಿ, ಸಹೋ​ದ​ರ ಲತೇಶ್‌ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ತಾಯಿ ಸರೋಜಮ್ಮ ಯಸಳೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕ​ರಣ ದಾಖ​ಲಾ​ಗಿ​ದೆ.