ಪತ್ನಿ ಮಗಳಿಗೆ ಕೋವಿಡ್ ಪಾಸಿಟಿವ್ : ನೊಂದ ಪತಿ ಆತ್ಮಹತ್ಯೆ

  • ಪತ್ನಿ ಮಗಳಿಗೆ ಕೊರೋನಾ ಪಾಸಿಟಿವ್ -ವ್ಯಕ್ತಿ ಆತ್ಮಹತ್ಯೆ
  • ನೊಂದು ನೇಣುಬಿಗಿದುಕೊಂಡು ಸಾವನ್ನಪ್ಪಿದ ಪತಿ
  • ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಘಟನೆ 
Man Commits Suicide After Wife Daughter Covid Test Result Positive snr

ಕೋಲಾರ (ಮೇ.09): ಕೊರೋನಾ ಮಹಾಮಾರಿ ಏರುತ್ತಲೆ ಇದೆ.  ಇನ್ನೊಂದೆ ಕೋವಿಡ್ ಭಯವೂ ಹಲವರನ್ನು ಕೊಲ್ಲುತ್ತಿದೆ.  ಕೋಲಾರದಲ್ಲಿ  ವ್ಯಕ್ತಿಯೋರ್ವ ಪತ್ನಿ ಹಾಗೂ ಮಗಳಿಗೆ ಪಾಸಿಟಿವ್ ರಿಪೋರ್ಟ್ ಬಂದಾದ, ತನಗಿನ್ನು ಬದುಕಲಾಗದು ಎಂದು ನೊಂದು ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಪ್ರಸಾದ್ ರಸ್ತೆಯ ನಿವಾಸಿ ಸೀನಪ್ಪ (50) ಎಂಬಾತ ಇಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  

ನಾಳೆಯಿಂದ ಸೆಮಿ ಲಾಕ್ಡೌನ್‌, ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ ..

ಕುಟುಂಬಕ್ಕೆ ಕೊರೋನಾ ಹಾಡಿದ ಹಿನ್ನೆಲೆ ನೊಂದು  ಪಟ್ಟಣದ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿರುವ ಮರಕ್ಕೆ ಸೀನಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿದೆ. 

ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೀಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, 6 ಸಾವಿರಕ್ಕೂ ಅಧಿಕ ಸಕ್ರೀಯ ಪ್ರಕರಣಗಳು ದಾಖಲಾಗಿವೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios