ಮಂಡ್ಯ(ನ.28): ಪತ್ನಿ ಹಾಗೂ ತನ್ನಿಬ್ಬರು ಮಕ್ಕಳನ್ನು ಕೊಂದು ವ್ಯಕ್ತಿಯೋರ್ವ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ತಾಲೂಕಿನ ಬೆಳ್ವೆ ಸಮೀಪದ ಸೂರ್ಗೋಳಿ ಎಂಬಲ್ಲಿ ನಡೆದಿದೆ.

ಕುಂದಾಪುರ ಸೂರ್ಗೋಳಿ ನಿವಾಸಿ ಸೂರ್ಯನಾರಾಯಣ ಭಟ್ (50) ಮಾನಸಿ (40) ಮಕ್ಕಳಾದ ಸುಧೀಂದ್ರ (14) ಸುಧೀಶ್ (8) ಮೃತರು.

ಅಡುಗೆ ಕೆಲಸ ಮಾಡುತ್ತಿದ್ಸ ಸೂರ್ಯನಾರಾಯಣ್ ಭಟ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷವಿಕ್ಕಿದ್ದಾನೆ. ಬಳಿಕ ತೀವ್ರ ಅಸ್ವಸ್ಥರಾದ ಮೂವರಿಗೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಮೂವರು ಪ್ರಾಣಬಿಟ್ಟ ಬಳಿಕ ಸೂರ್ಯನಾರಾಯಣ ಭಟ್ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜ್ಯದ ಎರಡು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ!

ಘಟನೆ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ. ಇನ್ನು ಗಂಡ-ಹೆಂಡತಿ ನಡುವಿನ‌ ಕೌಟುಂಬಿಕ ಕಲಹವೇ ಘಟನೆ ಕಾರಣ ಎಂದು ಶಂಕಿಸಲಾಗಿದೆ. ಸದ್ಯ ಉಡುಪಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಎಎಸ್ಪಿ ಹರಿರಾಮ್ ಶಂಕರ್, ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತಾಯಿ ಓದಲು ಹೇಳಿ​ದ್ದಕ್ಕೆ ಬಾಲಕಿ ಆತ್ಮ​ಹ​ತ್ಯೆ