Asianet Suvarna News Asianet Suvarna News

ನಂಗೆ ಹೆಂಡ್ತಿ ಬೇಕು : ಪತ್ನಿಗಾಗಿ ಟವರ್‌ ಏರಿದ ಪತಿ!

ವ್ಯಕ್ತಿಯೋರ್ವ ತನ್ನ ಪತ್ನಿಗಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದ ಘಟನೆ  ಮೈಸೂರಿನಲ್ಲಿ ನಡೆದಿದೆ. ಕೊನೆಗೂ ಆತನ ಮನ ಒಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

Man Climbs Mobile Tower For his Wife in Mysore snr
Author
Bengaluru, First Published Jan 27, 2021, 10:42 AM IST
  • Facebook
  • Twitter
  • Whatsapp

ಮೈಸೂರು (ಜ.27): ಪತ್ನಿ ಮುನಿಸಿಕೊಂಡು ಹೋಗಿದ್ದಾಳೆಂದು ಮನನೊಂದ ವ್ಯಕ್ತಿಯೊಬ್ಬ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.

ವಿದ್ಯಾರಣ್ಯಪುರಂ ನಿವಾಸಿ ಗೌರಿಶಂಕರ್‌ ಎಂಬವರೇ ಟವರ್‌ ಹತ್ತಿ ಆತ್ಮಹತ್ಯೆಗೆ ಯತ್ನಿಸಿದವರು. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಇದರಿಂದ ಮನನೊಂದ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ. ಹೀಗಿರುವಾಗ, ನನಗೆ ಪತ್ನಿ ಬೇಕು. ಆಕೆ ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೊಬೈಲ್‌ ಟವರ್‌ ಏರಿ ಗೌರಿಶಂಕರ್‌ ಬೆದರಿಕೆ ಹಾಕಿದ್ದಾರೆ.

ಕೈ ಕೊಟ್ಟ ಪ್ರಿಯಕರ : ಡೆತ್ ನೋಟ್ ಬರೆದಿಟ್ಟು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣು ..

ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೌರಿಶಂಕರ್‌ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios