Asianet Suvarna News Asianet Suvarna News

ಮದುವೆಗೆ ಒಂದು ದಿನವಿದ್ದಾಗಲೇ ಬಾವನಿಂದಲೇ ವರನ ಹತ್ಯೆಗೆ ಯತ್ನ

ಇನ್ನೇನು ವಿವಾಹಿತನಾಗಿ ಕುಟುಂಬಸ್ಥನಾಗಬೇಕಾಗಿದ್ದ ಯುವಕನನ್ನು ಆತನ ಬಾವನೇ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

man attacks brother in law and mother in law in mysore
Author
Bangalore, First Published Jan 29, 2020, 12:11 PM IST
  • Facebook
  • Twitter
  • Whatsapp

ಮೈಸೂರು(ಜ.29): ಇನ್ನೇನು ವಿವಾಹಿತನಾಗಿ ಕುಟುಂಬಸ್ಥನಾಗಬೇಕಾಗಿದ್ದ ಯುವಕನನ್ನು ಆತನ ಬಾವನೇ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಮದುವೆ ಹೊಸ್ತಿಲಲ್ಲಿದ್ದ ಯುವಕನಿಗೆ ಮಚ್ಚಿನಿಂದ ದಾಳಿ ಮಾಡಲಾಗಿದೆ.

"

ಮಲಗಿದ್ದ ವೇಳೆ ಅತ್ತೆ, ಮೈದುನನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಯರಹಳ್ಳಿಯಲ್ಲಿ ಘಟನೆ ನಡೆದಿದೆ. ಗಾಯಗೊಂಡ ಮನು ಮತ್ತು ಹೇಮಾವತಿ ಎಂಬವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಾರ್‌ ಗರ್ಲ್‌ಗೆ ಉಡುಗೊರೆ ನೀಡಲು ವಾಚ್‌ ಅಂಗಡಿಗೆ ಕನ್ನ!

ಮನು ವಿವಾಹ ಗುರುವಾರ ನಡೆಯಬೇಕಿತ್ತು. ವರನ ಬಾವನೇ ಮನುವಿನ ಕುತ್ತಿಗೆ ಸೀಳಿದ್ದಾರೆ. ಸದ್ಯ ಮನು ಸಾವು ಬದುಕಿನೊಡನೆ ಸೆಣಸಾಟ ನಡೆಸುತ್ತಿದ್ದಾರೆ. ಮಚ್ಚಿನಿಂದ ಬಾಮೈದುನನ ಕುತ್ತಿಗೆ ಹಾಗೂ ಅತ್ತೆಯ ಎರಡು ಕೈಗಳನ್ನು ಸೀಳಿದ ಬಾವ ಕೆಂಡಗಣ್ಣನನ್ನು ಬಂಧಿಸಲಾಗಿದೆ. ಘಟನೆ ಹಿನ್ನೆಲೆ ವಿವಾಹ ಸಮಾರಂಭ ಸ್ಥಗಿತಗೊಂಡಿದ್ದು, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios