ರಾಮನಗರ [ಡಿ.06]: ಪಾನಮತ್ತನಾಗಿ ವಾಹನ ಚಲಾಯಿಸುತ್ತಿರುವುದನ್ನು ಪ್ರಶ್ನಿಸಿದ ಟ್ರಾಫಿಕ್ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ. 

ಹೆಚ್ಚು ಮದ್ಯ ಸೇವಿಸಿದ್ದ ಗಿರೀಶ್ ಎಂಬ ವ್ಯಕ್ತಿ ರಾಮನಗರ ನಗರ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಟ್ರಾಫಿಕ್ ಪೊಲೀಸ್ ಶಂಕರ್ ಪಾಟೀಲ್ ಹಾಗೂ ಟೌನ್ ಪೊಲೀಸ್  ಶಿವರಾಜ್ ಮೇಲೆ ಹಲ್ಲೆ ಮಾಡಲಾಗಿದೆ. 

ಚನ್ನಪಟ್ಟಣ ಮೂಲದ ಮಾಕಳಿ ಮೂಲದ ಗಿರೀಶ್ ಟಾಟಾ ಏಸ್ ಚಾಲಕನಾಗಿದ್ದು, ಬಿಡದಿಯಿಂದ ಕುಡಿದು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ. ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಈ ವೇಳೇ ಆತನನ್ನು ತಡೆದ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರಿಗೆ ನಿಂದಿಸಿದ್ದಲ್ಲದೇ ಹಲ್ಲೆ ಮಾಡಿದ್ದು, ತಕ್ಷಣ ಆತನನ್ನು ಠಾಣೆಗೆ ಕರೆತರಲಾಗಿದೆ.  ಠಾಣೆಗೆ ಕರೆತಂದ ವೇಳೆ ಠಾಣೆಯಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದು, ಈ ಸಂಬಂಧ ರಾಮನಗರ ಸಂಚಾರಿ ಠಾಣೆಯಲ್ಲಿ ದೀಘ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.