ಮಂಗಳೂರು[ಸೆ. 15] ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ವ್ಯಕ್ತಿ ಎಂಟ್ರಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. CISF ಸಿಬ್ಬಂದಿಯಿಂದ ಕೇರಳದ ಕಾಸರಗೋಡು ಮೂಲದ ಆರೀಫ್  ಎಂಬಾತನನ್ನು ಬಂಧಿಸಲಾಗಿದೆ.

ದುಬೈಗೆ ಹೋಗುವ ಸ್ಪೈಸ್ ಜೆಟ್ SG 59 ನ ನಕಲಿ ಇ- ಟಕೆಟ್ ಮಾಡಿಕೊಂಡಿದ್ದ. ರಾತ್ರಿ 12 ಗಂಟೆ ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಏರ್ಪೋರ್ಟ್ ಒಳಗೆ ಹೋಗಿ ವಾಪಾಸ್ ಬರುವಾಗ ಅನುಮಾನಗೊಂಡ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.

4 ಜನ ಮನೆಯವರನ್ನು ಫ್ಲೈಟ್ ಹತ್ತಿಸಲು ಹೋಗಿದ್ದಾಗಿ ಆರೀಫ್ ಹೇಳಿದ್ದು  ಹೆಚ್ಚಿನ ತನಿಖೆಗಾಗಿ ಬಜಪೆ ಪೊಲೀಸರಿಗೆ ಆರೀಫ್ ಹಸ್ತಾಂತರ ಮಾಡಲಾಗಿದೆ. ಈತನ ಎಂಟ್ರಿಯ ಬಳಿಕ ವಿಮಾನ ನಿಲ್ಧಾಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ.