ರಾಮನಗರ [ಮಾ.06]:  ಸಹಾ​ಯಕ ಸಬ್‌ ಇನ್ಸ್‌ ಪೆಕ್ಟರ್‌ (ಎ​ಎಸ್‌ ಐ) ವೇಷ ಧರಿಸಿ ವಂಚಿ​ಸು​ತ್ತಿದ್ದ ವ್ಯಕ್ತಿ​ಯೊ​ಬ್ಬ​ನನ್ನು ಬಿಡದಿ ಪೊಲೀ​ಸರು ಗುರು​ವಾರ ಬಂಧಿ​ಸಿ​ದ್ದಾ​ರೆ.

ಉಲ್ಲಾಳ ಉಪನಗರದ ವಾಸಿ ರವಿ ಅಲಿಯಾಸ್‌ ಪೊಲೀಸ್‌ ರವಿ(36) ಬಂಧಿತ ಆರೋಪಿ.

ಈತ ಎಎಸ್‌ಐ ವೇಷ ಹಾಕಿಕೊಂಡು ವಸೂಲಿ ದಂಧೆ ನಡೆಸುತ್ತಿದ್ದ​ನು. ಬಿಬಿಎಂಪಿ ಸದಸ್ಯರು, ಎಂಎಲ್ಸಿಗಳು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ವ್ಯಾಪಾರಿಗಳಿಂದ ಕಾರ್ಯಕ್ರಮದ ಹೆಸರಿನಲ್ಲಿ ಹಣ ಪೀಕುತ್ತಿದ್ದನು.ಹೋಂಗಾರ್ಡ್‌ಗಳಿಗೆ ವೇತನ ಆಗಿಲ್ಲ. 

ಅವರಿಗೆ ಸ್ವಲ್ಪ ಹಣ ಕೊಡಬೇಕು. ಪೊಲೀಸ್‌ ಇಲಾಖೆಯಿಂದ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕೆ ಒಂದಿಷ್ಟುದೇಣಿಗೆ ನೀಡುವಂತೆ ಖಾಕಿ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

BSY ಸರ್ಕಾರ ಬೀಳಿಸಲು ಬಿಜೆಪಿಗನಿಂದಲೇ ತಂತ್ರ : ಹೊಸ ಬಾಂಬ್ ಸಿಡಿಸಿದ HDK..

ಅಲ್ಲ​ದೆ, ಕಳೆದ 10 ವರ್ಷಗಳಿಂದಲೂ ಇದೇ ಕಾಯಕ ಮಾಡಿಕೊಂಡಿದ್ದ ರವಿಯನ್ನು 2014ರಲ್ಲಿ ಕಾಮಾಕ್ಷಿ ಪಾಳ್ಯ ಠಾಣೆ ಪೊಲೀ​ಸರು ಬಂಧಿ​ಸಿ​ದ್ದರು. ಈತ ಪ್ರವಾಸಿ ತಾಣಗಳಿಗೆ ಖಾಕಿ ವೇಷದಲ್ಲಿ ಹೋಗಿ, ಪ್ರೇಮಿಗಳಿಂದ ಸಿಕ್ಕಿದಷ್ಟುಹಣ ಪೀಕುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.