ಕೋಲಾರ (ನ.01) : ಕೋಲಾರದ ಮಾಲೂರಿನ ತಹಶೀಲ್ದಾರ್ ಅವರನ್ನು ಅಮಾನತು ಮಾಡಲಾಗಿದೆ. 

ತಹಶೀಲ್ದಾರ್  ವಿ.ನಾಗರಾಜ್ ಅವರನ್ನು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅಮಾನತು ಮಾಡಿ ಆದೇಶ ನೀಡಿದ್ದಾರೆ. 

ನಿಮಯ ಬಾಹಿರವಾಗಿ ಜಮೀನು‌ ಮಂಜೂರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ‌ ಆರೋಪದ ಅಡಿಯಲ್ಲಿ ತಹಶೀಲ್ದಾರ್ ನಾಗರಾಜ್ ಅಮಾನತು ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಾದೇಶಿಕ ಆಯುಕ್ತರು ಖುದ್ದು ತಾಲೂಕು ಕಚೇರಿಗೆ ಭೇಟಿ ನೀಡಿದ ವೇಳೆ  ಹಲವು ವಿಚಾರಗಳು ಬಯಲಾಗಿದ್ದು ಈ ನಿಟ್ಟಿನಲ್ಲಿ ಅಮಾನತು ಮಾಡಲಾಗಿದೆ.

ತಾಲೂಕು ಕಚೇರಿಗೆ ಭೇಟಿ ನೀಡಿದ್ದು ಈ ವೇಳೆ ಸಾರ್ವಜನಿಕರಿಂದ ದೂರು ಆಲಿಸಿದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅಮಾನತು  ಮಾಡಿ ಆದೇಶ ನೀಡಿದ್ದಾರೆ.