ಕರ್ನಾಟಕದ ಪ್ರಥಮ ಕನ್ನಡ-ಇಂಗ್ಲಿಷ್ ದ್ವಿ ಭಾಷೆಯ 'ಈ ನಗರವಾಣಿ' ದಿನಪತ್ರಿಕೆ ಲೋಕಾರ್ಪಣೆ
- ಕರ್ನಾಟಕದ ಪ್ರಥಮ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷೆಯ ಈ ನಗರವಾಣಿ ದಿನಪತ್ರಿಕೆ
- ಚಿತ್ರದುರ್ಗದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಲೋಕಾರ್ಪಣೆ
ದಾವಣಗೆರೆ (ಅ.19): ಕರ್ನಾಟಕದ (Karnataka) ಪ್ರಥಮ ಕನ್ನಡ ಮತ್ತು ಇಂಗ್ಲಿಷ್ (Kannada English) ದ್ವಿಭಾಷೆಯ ಈ ನಗರವಾಣಿ (E Nagaravani paper ) ದಿನಪತ್ರಿಕೆಯನ್ನು ಚಿತ್ರದುರ್ಗದಲ್ಲಿ (Chitradurga) ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai), ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಲೋಕಾರ್ಪಣೆ ಮಾಡಿದರು.
ಹಿರಿಯ ಪತ್ರಕರ್ತ ಮಾಲತೇಶ್ ಅರಸ್ (Malathesh Aras) ಹರ್ತಿಕೋಟೆ ಸಂಪಾದಕತ್ವದಲ್ಲಿ ಆರಂಭಗೊಂಡ ನಗರವಾಣಿ ಪತ್ರಿಕೆಗೆ ಸುವರ್ಣ ನ್ಯೂಸ್ (Suvarna News) ಮತ್ತು ಕನ್ನಡ ಪ್ರಭ (Kannadaprabha) ಪ್ರಧಾನ ಸಂಪಾದಕರಾದ ರವಿ ಹೆಗಡೆ (Ravi Hegde) ಅವರು ಶುಭ ಹಾರೈಸಿದರು.
ಯಾದಗಿರಿ ರೇಪ್ ಕೇಸ್ ಬಯಲಿಗೆಳೆದ ಕನ್ನಡಪ್ರಭಕ್ಕೆ ಸದನದಲ್ಲಿ ಶ್ಲಾಘನೆ!
ಡಾ. ಶಿವಮೂರ್ತಿ ಮುರುಘಾ ಶರಣರ (Dr Shivamurthy Murugha Sharanaru) ತೃತೀಯ ದಶಮಾನೋತ್ಸವದಲ್ಲಿ ಗಣ್ಯರು ಶುಭಕೋರಿದರು. ಇಪ್ಪತ್ತೊಂದು ವರ್ಷಗಳ ಅನುಭವದ ಮಾಲತೇಶ್ ಅರಸ್ ನಮ್ಮ ಸುವರ್ಣ ನ್ಯೂಸ್ ದಾವಣಗೆರೆ ವರದಿಗಾರರಾಗಿದ್ದರು.
ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರುವ ಈ ನಗರವಾಣಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ವಿಜಯನಗರ, ಬಳ್ಳಾರಿಯ ವ್ಯಾಪ್ತಿಯಲ್ಲಿ ವಿಶೇಷವಾಗಿದೆ.
ಅರಸ್ ಮಾತು
ಅದೊಂದು ಬಾಲ್ಯದ ಕಾಲ ವಿದ್ಯಾರ್ಥಿ ಜೀವನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಗೀತೆಯ ನಂತರ ಸಾಲಾಗಿ ನಿಂತು ಹನ್ನೆರಡು ಮೇಷ್ಟ್ರುಗಳ ಮುಂದೆ ಮುನ್ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಮುಂದೆ ಪ್ರಜಾವಾಣಿ ದಿನ ಪತ್ರಿಕೆ ಹಿಡಿದು ಓದುತ್ತಿದ್ದರೆ ಅದೇನೋ ಸಾಧಿಸಿದ ಛಲ. ಅದು ನಿರಂತರವಾಗಿ ಹತ್ತನೆ ತರಗತಿವರೆಗೆ ವಾರ್ತೆಯನ್ನು ಓದುವಂತೆ ಮಾಡಿತ್ತು. ಬಿಕ್ಕಳಿಸುತ್ತಿದ್ದ ನನ್ನ ಮಾತುಗಳು ಅರ್ಜುನನ ಬಾಣದಂತೆ ಬರಲಾರಂಭಿಸಿದ್ದು ಇದೇ ಮಾಧ್ಯಮದ ಶಕ್ತಿಯಿಂದ.
DVG Award|ರವಿ ಹೆಗಡೆ ಸೇರಿ 18 ಪತ್ರಕರ್ತರಿಗೆ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ
ವಿಶ್ರಾಮ್ ಸಾವಧಾನ್ ಹೇಳಿದಾಗ ಮತ್ತೆ ಚಿಗುರೊಡೆದ ಕನಸು. ಅಗಲೇ 1994ರಿಂದ ಪ್ರಜಾವಾಣಿಯ ವಾಚಕರವಾಣಿ ವಿಭಾಗದಲ್ಲಿ ಬರೆಯೋದಕ್ಕೆ ಶುರು ಮಾಡಿದ್ದು,ವಾರಕ್ಕೊಮ್ಮೆ ನನ್ನದೊಂದು ಪತ್ರ ಖಾಯಂ. ನಂತರದ ಬರವಣಿಗೆ ನಿಲ್ಲಲೇ ಇಲ್ಲ. ಅದು 19ನೇ ಶತಮಾನದ ಕೊನೆಯ ಗಳಿಗೆ 1999ರ ಕಾಲ ವಿಜಯ ಸಂಕೇಶ್ವರ್ ಸಾರಥ್ಯದಲ್ಲಿ ವಿಜಯ ಕರ್ನಾಟಕ ಎಂಬ ಮಹಾಪತ್ರಿಕೆ ಎಂಟ್ರಿಯಾದ ಟೈಮ್. ಚಿರ ಯುವಕ ವಿಶ್ವೇಶ್ವರ ಭಟ್ ಅವರು ಅತೀ ಕಿರಿಯ ವಯಸ್ಸಿನಲ್ಲೇ ಸಂಪಾದಕರಾದ ಹೊತ್ತು. ಆಗ ನಾನು ಅಧಿಕೃತವಾಗಿ ವಿಜಯ ಕರ್ನಾಟಕ ಮೂಲಕ ಪತ್ರಿಕೋದ್ಯಮ ಗರಡಿಗೆ ಎಂಟ್ರಿ ಕೊಟ್ಟೆ. ವಿಜಯ ಕರ್ನಾಟಕದಲ್ಲಿ ಪೇಪರ್ ಹಾಕುವ ಬಾಯ್ ಅಗಿ ವೃತ್ತಿ ಆರಂಭಿಸಿದ ನಾನು ಹೋಬಳಿ ಮಟ್ಟದ ಸ್ಟ್ರಿಂಜರ್ ಆಗಿ, ಬಳಿಕ ಸುವರ್ಣ ನ್ಯೂಸ್ ಸೇರಿ, ವಿಜಯವಾಣೀ, ವಿಶ್ವವಾಣಿ, ಸುದ್ದಿವಾಣಿ ಜತೆ ಪಯಣ ಸಾಗಿ ಈಗ ನಗರವಾಣಿ ಆರಂಭಿಸಿದ್ದಾರೆ.