ಮಹಾರಾಷ್ಟ್ರದಲ್ಲಿ ಮಲ್ಪೆ ಮೀನುಗಾರರ ಬಂಧನ

ಮಲ್ಪೆ ಬಂದರಿನ ಆಳಸಮುದ್ರ ಮೀನುಗಾರಿಗೆ ತೆರಳಿದ್ದ ಮಲ್ಪೆಯ ಬೋಟ್‌ವೊಂದನ್ನು ಮಹಾರಾಷ್ಟ್ರದ ಮಲ್ವಾಣ್‌ ಎಂಬಲ್ಲಿ ಅಲ್ಲಿನ ಕರಾವಳಿ ರಕ್ಷಣಾ ಪೊಲೀಸರು ವಶಕ್ಕೆ ಪಡೆದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿದ್ದಾರೆ ಮತ್ತು ಲಕ್ಷಾಂತರ ರು.ಗಳ ನಷ್ಟವನ್ನುಂಟು ಮಾಡಿದ್ದಾರೆ.

Malpe fishermen arrested in maharastra

ಉಡುಪಿ(ಫೆ.13): ಮಲ್ಪೆ ಬಂದರಿನ ಆಳಸಮುದ್ರ ಮೀನುಗಾರಿಗೆ ತೆರಳಿದ್ದ ಮಲ್ಪೆಯ ಬೋಟ್‌ವೊಂದನ್ನು ಮಹಾರಾಷ್ಟ್ರದ ಮಲ್ವಾಣ್‌ ಎಂಬಲ್ಲಿ ಅಲ್ಲಿನ ಕರಾವಳಿ ರಕ್ಷಣಾ ಪೊಲೀಸರು ವಶಕ್ಕೆ ಪಡೆದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಬಂಧಿಸಿದ್ದಾರೆ ಮತ್ತು ಲಕ್ಷಾಂತರ ರು.ಗಳ ನಷ್ಟವನ್ನುಂಟು ಮಾಡಿದ್ದಾರೆ.

ಮಲ್ಪೆ ಬಂದರಿನಿಂದ ಸೋಮವಾರ ಮೀನುಗಾರಿಕೆಗೆ ಹೋಗಿದ್ದ ಶ್ರೀಲಕ್ಷ್ಮೇ ಹೆಸರಿನ ಈ ಬೋಟ್‌ನಲ್ಲಿ, ಚಾಲಕ ಕ್ಯಾಪ್ಟನ್‌ ರಾಮ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ 7 ಮಂದಿ ಮೀನುಗಾರರಿದ್ದರು. ಅವರು ಮಂಗಳವಾರ ರಾತ್ರಿ ಮಹಾರಾಷ್ಟ್ರ ಸಮುದ್ರ ತೀರದಿಂದ 12 ನಾಟಿಕಲ್‌ ಮೈಲಿ ಹೊರಗೆ ಮೀನು ಹಿಡಿಯುತ್ತಿದ್ದರು. ಬುಧವಾರ ಮುಂಜಾನೆ 1 ಗಂಟೆಗೆ ಅಲ್ಲಿಗೆ ಬಂದ ಮರಾಠಿ ಮೀನುಗಾರರು ಶ್ರೀಲಕ್ಷ್ಮೇ ಬೋಟ್‌ಗೆ ಸುತ್ತುವರಿದು ಮೀನುಗಾರಿಕೆಗೆ ಅಡ್ಡಿ ಮಾಡಿದರು.

ಬಂದ್‌ ಬಿಸಿ: ಮಂಗಳೂರಲ್ಲಿ ತಿರುಪತಿ ಬಸ್‌ಗೆ ಕಲ್ಲು

ನಂತರ ಅವರ ದೂರಿನಂತೆ ಅಲ್ಲಿಗೆ ಬಂದ ಮಹಾರಾಷ್ಟ್ರ ಕರವಾಳಿ ರಕ್ಷಣಾ ಪೊಲೀಸರು ಬೋಟ್‌ ಮತ್ತು ಮೀನುಗಾರರನ್ನು ವಶಕ್ಕೆ ಪಡೆದಿದ್ದಾರೆ. ಬೀಸಿದ್ದ ಬಲೆಯನ್ನು ಬಲವಂತವಾಗಿ ಕತ್ತರಿಸಿ ಹಾಕಿದ್ದಾರೆ. ಬೋಟ್‌ನಲ್ಲಿದ್ದ ಸುಮಾರು 4 ಲಕ್ಷ ರು.ಗೂ ಅಧಿಕ ಮೌಲ್ಯದ ರಾಣಿ ಮೀನುಗಳನ್ನು ಜಪ್ತು ಮಾಡಿ ಮರಾಠಿ ಮೀನುಗಾರರಿಗೆ ಒಪ್ಪಿಸಿದ್ದಾರೆ. ಆದರೇ ತಾವು ಕಾನೂನಿನಂತೆ ಸಮುದ್ರತೀರದಿಂದ 12 ನಾಟಿಕಲ್‌ ಮೈಲಿ ಹೊರಗೆ ಮೀನುಗಾರಿಕೆ ನಡೆಸುತ್ತಿದ್ದು, ಮಹಾರಾಷ್ಟ್ರ ಪೊಲೀಸರು ಕಾನೂನುಬಾಹಿರ ಕಾರ್ಯಚರಣೆ ನಡೆಸಿ, ಮೀನನ್ನು ಲೂಟಿ ಮಾಡಿದ್ದಾರೆ ಎಂದು ಶ್ರೀಲಕ್ಷ್ಮೇ ಬೋಟ್‌ನಲ್ಲಿದ್ದ ಮೀನುಗಾರರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಉಡುಪಿ ಟ್ರಾಲ್‌ ಬೋಟ್‌ ಚಾಲಕರ ಸಂಘದ ಅಧ್ಯಕ್ಷ ರವಿರಾಜ ಸುವರ್ಣ ಖಂಡಿಸಿದ್ದಾರೆ ಮತ್ತು ಕೂಡಲೇ ಕನ್ನಡಿಗ ಮೀನುಗಾರರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios