‘ಬೇಡ ಜಂಗಮರಿಗೆ ಜಾತಿ ಪತ್ರ ನೀಡದಂತೆ ಮಲ್ಲಿಕಾರ್ಜುನ ಖರ್ಗೆ ಪತ್ರ’
ಒಂದೆಡೆ ಖರ್ಗೆಯವರು ಬುದ್ದ, ಬಸವ, ಅಂಬೇಡ್ಕರ್ ತತ್ವದ ಬಗ್ಗೆ ಮಾತಾಡ್ತಾರೆ. ಮನೆ, ಮನೆಗೆ ಕಂತೆ ಭಿಕ್ಷೆ ಬೇಡಿ ಜೀವಿಸುವ ಸಮುದಾಯ ಬೇಡ ಜಂಗಮ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸಿಗಬೇಕಾದ ಹಕ್ಕು ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಹಾಲು ಹಾಕುತ್ತಿದ್ದಾರೆ.
ಕಲಬುರಗಿ(ಫೆ.25): ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡದಂತೆ ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಪತ್ರ ಬರೆದಿದ್ದರು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಈ ಆರೋಪಕ್ಕೆ ಪೂರಕವಾಗಿ ಅವರು ಖರ್ಗೆ ಬರೆದಿದ್ದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. 1995ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು, ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿದ್ದರು. ಆ ಮೂಲಕ ಬೇಡ ಜಂಗಮರಿಗೆ ಸಿಗಬೇಕಾದ ನ್ಯಾಯಯುತ ಎಸ್ಸಿ ಪ್ರಮಾಣ ಪತ್ರ ನೀಡಲು ಖರ್ಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದರು.
ಒಂದೆಡೆ ಖರ್ಗೆಯವರು ಬುದ್ದ, ಬಸವ, ಅಂಬೇಡ್ಕರ್ ತತ್ವದ ಬಗ್ಗೆ ಮಾತಾಡ್ತಾರೆ. ಮನೆ, ಮನೆಗೆ ಕಂತೆ ಭಿಕ್ಷೆ ಬೇಡಿ ಜೀವಿಸುವ ಸಮುದಾಯ ಬೇಡ ಜಂಗಮ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸಿಗಬೇಕಾದ ಹಕ್ಕು ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡಹಾಲು ಹಾಕುತ್ತಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ, ವಿಶ್ವಾಸ ಇಲ್ಲ. ಆರ್ಥಿಕವಾಗಿ ಹಿಂದುಳಿದ ಬೇಡ ಜಂಗಮರಿಗೆ ಸರಕಾರ ಎಸ್ಸಿ ಸರ್ಟಿಫಿಕೆಚ್ ಕೊಡಬೇಕು ಎಂದು ಆಗ್ರಹಿಸಿದರು.
KALYANA KARNATAKA UTSAV 2023: ಕಲ್ಯಾಣ ಕರ್ನಾಟಕದ ಗತ ವೈಭವದ ವಾರಸುದಾರರಾಗಿ ಎಂದು ಸೇಡಂ ಕರೆ
ಬರೀ ಅಭಿವೃದ್ಧಿ ಹೊಂದಿದವರೇ ಇನ್ನೆಷ್ಟು ಅಭಿವೃದ್ಧಿ ಹೊಂದಬೇಕು?. ಹಿಂದುಳಿದ ವರ್ಗದ ಜನರಿಗೆ ಅವಕಾಶ ಬಿಟ್ಟು ಕೊಡಬೇಕಲ್ಲವೇ?. ನಾನು ಮೀಸಲಾತಿ ಬಿಟ್ಟು ಕೊಡಲು ಸಿದ್ದ. ನಾನು ಶಾಸಕನಾಗುವ ಇಚ್ಛೆ ಬಿಟ್ಟು, ಜಂಗಮರ ಪರ ಹೋರಾಟ ನಡೆಸುವೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಮೀಸಲಾತಿ ಬಿಟ್ಟು ಕೊಡಲು ಸಿದ್ದರಿದ್ದಾರೆಯೇ? ಎಂದು ಸವಾಲು ಹಾಕಿದರು.