ಪಂಚಮಸಾಲಿ ಹೋರಾಟ ಸ್ವಾಗತಿಸಿರುವೆ| ಪ್ರತಿಯೊಂದು ಸಮಾಜಕ್ಕೆ ಹೋರಾಟ ಮಾಡುವ ಹಕ್ಕಿದೆ| ಪಂಚಮಸಾಲಿಯಲ್ಲಿ ಸಹ ಒಕ್ಕಲಿಗರು ಸೇರಿದಂತೆ ಹಲವರು ಬಡವರಿದ್ದಾರೆ| ತಜ್ಞರ ಸಮಿತಿ ರಚಿಸುವ ಯಾವ ವರ್ಗದಲ್ಲಿ ಬಡವರಿದ್ದಾರೋ, ಯಾರಿಗೆ ಮೀಸಲಾತಿ ಅವಶ್ಯಕತೆ ಇದೆ: ಗುತ್ತೇದಾರ್|
ಕಲಬುರಗಿ(ಫೆ.22): ತಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿರೋಧಿ ಅಲ್ಲ, ಮೀಸಲಾತಿ ಪರವಾಗಿರುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ನೀಡಲು ನಾನು ವಿರೋಧ ವ್ಯಕ್ತಪಡಿಸಿದ್ದೇನೆ ಎಂದು ಹಲವೆಡೆ ಪ್ರಚಾರವಾಗಿದೆ. ಈ ವಿಚಾರವಾಗಿರುವ ತಮ್ಮ ಮಾತುಗಳನ್ನು ತಿರುಚಲಾಗಿದೆ. ಇದು ಸತ್ಯಕ್ಕೆ ದೂರವಾದ ಮಾತು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿರೋಧಿಸಿಲ್ಲ ಎಂದಿದ್ದಾರೆ.
'ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮೆ'
ಪಂಚಮಸಾಲಿ ಹೋರಾಟವನ್ನು ಸ್ವಾಗತಿಸಿರುವೆ. ಪ್ರತಿಯೊಂದು ಸಮಾಜಕ್ಕೆ ಹೋರಾಟ ಮಾಡುವ ಹಕ್ಕಿದೆ. ಪಂಚಮಸಾಲಿಯಲ್ಲಿ ಸಹ ಒಕ್ಕಲಿಗರು ಸೇರಿದಂತೆ ಹಲವರು ಬಡವರಿದ್ದಾರೆ. ತಜ್ಞರ ಸಮಿತಿ ರಚಿಸುವ ಯಾವ ವರ್ಗದಲ್ಲಿ ಬಡವರಿದ್ದಾರೋ, ಯಾರಿಗೆ ಮೀಸಲಾತಿ ಅವಶ್ಯಕತೆ ಇದೆ ಎಂಬುದರ ಬಗ್ಗೆ ಸರ್ಕಾರದಿಂದ ವರದಿ ತರಿಸಿಕೊಳ್ಳಲಾಗುತ್ತದೆ ಎಂದರು.
ಈಡಿಗ ಸಮಾಜ ಕೂಡ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಈಡಿಗ ಸಮಾಜಕ್ಕೂ ಮೀಸಲಾತಿ ಅವಶ್ಯಕತೆ ಇದೆ. ಪಂಚಮಸಾಲಿ ಹೋರಾಟಕ್ಕೆ ನಾನು ಶುಭ ಹಾರೈಸುತ್ತೇನೆ. ಅವರ ಹೋರಾಟ ಯಶಸ್ವಿಯಾಗಲಿ ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2021, 1:59 PM IST