ಕೊಪ್ಪಳ(ಜ.14):  ಕಾಂಗ್ರೆಸ್‌ನಲ್ಲಿ ಕಾರ್‌ ಬಾಗಿಲು ತೆಗೆಯುವವರಿಗೆ, ಬ್ಯಾಗ್‌ ಹೊರುವ ಚೇಲಾಗಳಿಗೆ ಅಧಿಕಾರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ. 

ಕೊಪ್ಪಳದಲ್ಲಿ ಬುಧವಾರ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್‌ ವಿರುದ್ಧ ಮಾಲೀಕಯ್ಯ ಗುತ್ತೇದಾರ ದಾಳಿ ಮಾಡಿದ್ದಾರೆ. 

ಸಂಪುಟ ವಿಸ್ತರಣೆ ಅಸಮಾ​ಧಾನ ಸರಿಪಡಿಸಲಾಗುತ್ತದೆ: ಶೆಟ್ಟರ್‌

ಬಿಜೆಪಿಯಲ್ಲಿ ಮಾತ್ರ ಪಕ್ಷದ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಗುರುತಿಸಿ, ಸ್ಥಾನಮಾನ ನೀಡುತ್ತಾರೆ. ಶಾಂತರಾಮ್‌ ಸಿದ್ದಿ, ಅಶೋಕ ಗಸ್ತಿ ಅಂಥವರನ್ನು ಗುರುತಿಸಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದ್ದಾರೆ.