Asianet Suvarna News Asianet Suvarna News

ನರೇಂದ್ರಸ್ವಾಮಿಯನ್ನ ಮಂತ್ರಿ ಮಾಡಿ ಎಂದ ಜನತೆ, ಸೀಟು ಖಾಲಿಯಿಲ್ಲ ಕೂತ್ಕೊಳ್ಳಿ ಎಂದ ಸಿಎಂ ಸಿದ್ದರಾಮಯ್ಯ

ನೀವೇನು ನರೇಂದ್ರಸ್ವಾಮಿಯನ್ನು ಮಂತ್ರಿ ಮಾಡಿ ಅಂತ ಹೇಳ್ತೀರಾ, ಆದ್ರೆ ಸೀಟು ಖಾಲಿಯಿಲ್ಲ ಸುಮ್ಮೆ ಕೂತ್ಕೊಳ್ಳಿ. ರೀ ಶೆಫಲ್ ಮಾಡುವಾಗ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

malavalli people request to make Narendraswamy as minister but CM Siddaramaiah says not vacant sat
Author
First Published Feb 18, 2024, 4:21 PM IST

ಮಂಡ್ಯ (ಫೆ.18): ನರೇಂದ್ರ ಸ್ವಾಮಿ ಶಾಸಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಈ ಸಮಾವೇಶ ಸಾಕ್ಷಿಯಾಗಿದೆ. ಅವರು, ಎಲ್ಲ ಮಂತ್ರಿಗಳ ಜೊತೆ ಚೆನ್ನಾಗಿದ್ದಾರೆ. ಅದನ್ನ ಬಳಸಿಕೊಂಡು ಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳ ಮಂಜೂರು ಮಾಡಿಸ್ತಿದ್ದಾರೆ. ನೀವೆಲ್ಲರೂ ನರೇಂದ್ರಸ್ವಾಮಿಯನ್ನ ಮಂತ್ರಿ ಮಾಡಿ ಅಂತಿದ್ದೀರಿ. ಇವಾಗ ಖಾಲಿ ಇಲ್ಲ ಕೂತ್ಕೊಳ್ಳಿ. ಮುಂದೆ ರೀ ಶೆಫಲ್ ಮಾಡುವಾಗ ಅವಕಾಶ ನೀಡಲಾಗುತ್ತದೆ. ಇವಾಗ ನೀವು ಒತ್ತಾಯ ಮಾಡಿದರೂ ಸೂಕ್ತ ಸಮಯವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಳವಳ್ಳಿಯಲ್ಲಿ ಪಟ್ಟಣದಲ್ಲಿ ಭಾನುವಾರ ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, 400 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದೇವೆ. ಶಾಸಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಈ ಸಮಾವೇಶ ಸಾಕ್ಷಿಯಾಗಿದೆ. ನರೇಂದ್ರಸ್ವಾಮಿ ಎಲ್ಲಾ ಮಂತ್ರಿಗಳ ಜೊತೆ ಚೆನ್ನಾಗಿದ್ದಾರೆ. ಅದನ್ನ ಬಳಸಿಕೊಂಡು ಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳ ಮಂಜೂರು ಮಾಡಿಸ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಶಾಲಾ ಮಕ್ಕಳಿಂದ ಕಾರು ಕ್ಲೀನ್ ಮಾಡಿಸಿದ ಮುಖ್ಯ ಶಿಕ್ಷಕ; ಏನು ಶಿಕ್ಷೆ ಕೊಡ್ತೀರಾ ಸಚಿವರೇ ಎಂದ ಪಾಲಕರು

ಮಳವಳ್ಳಿ ಸಮಾವೇಶದಲ್ಲಿ ಸೇರಿರುವ ನೀವೆಲ್ಲರೂ ನರೇಂದ್ರಸ್ವಾಮಿಯನ್ನ ಮಂತ್ರಿ ಮಾಡಿ ಅಂತಿದ್ದೀರಿ. ಇವಾಗ ಸೀಟು ಖಾಲಿ ಇಲ್ಲ ಕೂತ್ಕೊಳ್ಳಿ. ಮುಂದೆ ರೀ ಶೆಫಲ್ ಮಾಡುವಾಗ ಅವಕಾಶ ಕೊಡಲಾಗುವುದು. ಈಗ ನೀವು ಒತ್ತಾಯ ಮಾಡಿದ್ರು ಸೂಕ್ತ ಸಮಯವಲ್ಲ. ನೀವು ಸದಾ ಮಳವಳ್ಳಿಯಲ್ಲಿ ನಮ್ಮ ಅಭ್ಯರ್ಥಿಗಳನ್ನ ಆಶೀರ್ವಾದ ಮಾಡ್ತಿದ್ದೀರಿ. ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸ್ತೀನಿ. ನನಗೆ, ನಮ್ಮ ಅಭ್ಯರ್ಥಿ ಆಶೀರ್ವಾದ ಮಾಡ್ತಾ, ಬೆಂಬಲಿಸುವ ನಿಮಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಮಳವಳ್ಳಿ ಕ್ಷೇತ್ರ ನನ್ನ ಮತ ಕ್ಷೇತ್ರದಂತೆ ಭಾವನೆಯಿದೆ ಎಂದರು.

ಕಳೆದ ಚುನಾವಣೆಯಲ್ಲಿ ನಾವು ಅನೇಕ ಭರವಸೆ ಕೊಟ್ಟಿದ್ದೆವು. ಅದರ ಅನುಗುಣವಾಗಿ 470 ಕೋಟಿ ರೂ. ವೆಚ್ಚದ ಯೋಜನೆ ಮಂಜೂರು ಮಾಡಲಾಗಿದೆ. ಅಷ್ಟು ಸಾಲದೆಂಬಂತೆ ಇನ್ನೂ ಅನೇಕ ಮನವಿಯನ್ನ ಶಾಸಕರು ಕೊಟ್ಟಿದ್ದಾರೆ. ಆ ಮನವಿಯನ್ನ ಸ್ವೀಕರಿಸಿ, ಅನುಷ್ಠಾನಕ್ಕೆ ತರುತ್ತೇವೆ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ. ಬಿಜೆಪಿ, ಜೆಡಿಎಸ್‌ ರೀತಿ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವರಲ್ಲ. ನಾವು ಕೊಟ್ಟ ಮಾತನ್ನ ನೂರಕ್ಕೆ ನೂರು ಅನುಷ್ಠಾನಕ್ಕೆ ತರ್ತೇವೆ. ಏತ ನೀರಾವರಿ ಯೋಜನೆಯನ್ನ ನಾನೇ ಚಾಲನೆ ಕೊಟ್ಟಿದ್ದೆ. ಈಗ ನೀವೇ ಉದ್ಘಾಟಿಸಿ ಅಂತಿದ್ದಾರೆ. ಅದನ್ನ ನಾನೇ ಉದ್ಘಾಟಿಸುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಈಗ ಜೆಡಿಎಸ್‌, ಬಿಜೆಪಿ ಒಂದಾಗಿವೆ. ಮುಂದಿನ ಜನ್ಮದಲ್ಲಿ ನಾನು ಹುಟ್ಟಿದ್ರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಅಂತಾ ದೇವೇಗೌಡರು ಹೇಳಿದ್ದರು. ಆದರೆ, ಈಗ ಕೋಮುವಾದಿ ಬಿಜೆಪಿ ಜೊತೆ ಸೇರಿದ್ದಾರೆ. ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನ ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರ. ನೀವು ಜಾತ್ಯತೀತ ಅಂತಾ ಇಟ್ಕೊಳ್ಳೋಕೆ ನೈತಿಕತೆ ಇಲ್ಲ. ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಶ್ರಮಿಸಿದ್ದೆವು. ಅದಕ್ಕೆ 136 ಸೀಟ್ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ-ಜೆಡಿಎಸ್‌ ಡೋಂಗಿಗಳ ತರ ಹೇಳ್ತಾವೆ. ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಈ ಸಲ ಕನಿಷ್ಠ 20 ಸ್ಥಾನ ಗೆದ್ದು ಲೋಕಸಭೆಗೆ ಕಳಿಸುತ್ತೇವೆ ಎಂದು ಹೇಳಿದರು.

ಬೆಂಗಳೂರಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಫೆ.28 ಡೆಡ್‌ಲೈನ್ ಕೊಟ್ಟ ಬಿಬಿಎಂಪಿ

ನಿಮಗೆ ಉಪಕಾರ ಮಾಡಿದವರನ್ನ ಮರೆಯುತ್ತೀರ? 155 ಕೋಟಿ ರೂ. ಹೆಣ್ಣು ಮಕ್ಕಳು ಇವತ್ತು ಉಚಿತವಾಗಿ ಬಸ್ಸಿನಲ್ಲಿ ಓಡಾಡ್ತಿದ್ದಾರೆ. ಹಿಂದೆ ಯಾರಾದ್ರೂ ಮಾಡಿದ್ದರಾ? ಬಿಜೆಪಿ, ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪಿಎಂ ಹೆಚ್.ಡಿ.ದೇವೇಗೌಡರು ಮಾಡಿದ್ದರಾ? ಇದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅನ್ನೋದನ್ನ ಮರೆಯಬೇಡಿ. ಯಾರು ಹಸಿದು ಮಲಗಬಾರದು ಅಂತಾ ಅನ್ನಭಾಗ್ಯ ಅಕ್ಕಿ ಕೊಟ್ಟವರು ಯಾರು? ಕೇಂದ್ರದ ಅಸಹಕಾರದ ನಡುವೆಯೂ ಯೋಜನೆ ಅನುಷ್ಠಾನ. ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್‌ಗೆ ಮತ ಕೊಡಬೇಡಿ. ಇವತ್ತು ಕುಮಾರಸ್ವಾಮಿ, ಅಶೋಕ ಒಂದಾಗಿದ್ದಾರೆ ಎಂದು ಕಿಡಿಕಾರಿದರು.

Follow Us:
Download App:
  • android
  • ios