ಮಂಗಳೂರಿನ ಮಳಲಿ ಮಸೀದಿ ವಿವಾದ, ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್

* ಮಂಗಳೂರು ಕೋರ್ಟ್ ನಲ್ಲಿ ವಿಎಚ್ ಪಿ ವರ್ಸಸ್ ಮಳಲಿ‌ ಮಸೀದಿ ಫೈಟ್
* ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ
* ವಾದ ಆಲಿಸಿ ಜೂನ್ 14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

malali mosque case mangaluru court postpones hearing to june 14 rbj

ಮಂಗಳೂರು, (ಜೂನ್.10): ಮಂಗಳೂರಿನ ಮಳಲಿ ಮಸೀದಿ ವಿವಾದ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.

ವಿಎಚ್ ಪಿ ವರ್ಸಸ್ ಮಳಲಿ‌ ಮಸೀದಿ ಫೈಟ್ ಬಗ್ಗೆ ಇಂದು(ಶುಕ್ರವಾರ) ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.  ವಾದ-ವಿವಾದ ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿದೆ,

ಮಳಲಿ‌ ಮಸೀದಿ ಪರ ವಕೀಲ ಎಂ.ಪಿ.ಶೆಣೈ ವಾದ ಮಂಡನೆ ಮಾಡಿದ್ದು,  ಮಳಲಿಯಲ್ಲಿರೋದು ಮಸೀದಿ ಅಂತ ಮತ್ತೆ ಸಾಬೀತು ಪಡಿಸುವ ಅಗತ್ಯ ಇಲ್ಲ. ಸರ್ಕಾರಿ ವಕ್ಫ್ ದಾಖಲೆ ಪ್ರಕಾರ ಅಲ್ಲಿ ಮಸೀದಿ ಇರುವುದು ದಾಖಲಾಗಿದೆ. ಮಸೀದಿ ಎಂದರೆ ವಕ್ಫ್ ಕಾನೂನಿನ ಪ್ರಕಾರ ಪ್ರಾರ್ಥನಾ ಸ್ಥಳ. ಅಂಥಹ ಸ್ಥಳವನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿಯೆಂದು ಕರೆಯುತ್ತಾರೆ ಎಂದು ವಾದಿಸಿದರು.

ಮಳಲಿ ವಿವಾದ: ಹಿಂದೂ ನಾಯಕನ ವಿರುದ್ಧ ಅಪಪ್ರಚಾರ, ಪ್ರತ್ಯುತ್ತರಕ್ಕೆ ಸಿದ್ಧ ಎಂದ ಭಜರಂಗದಳ..!

ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು  ಹೇಳಲು ಕೇಂದ್ರ ಸರ್ಕಾರದಿಂದ ನೋಟಿಫಿಕೇಶನ್ ಆಗಬೇಕು. ಆದರೆ ಮಳಲಿ ಮಸೀದಿ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಹೀಗಿರುವಾಗ ಇದನ್ನ ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ ಅಲ್ಲದೇ ಇದನ್ನ ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್ ಗೆ ಅಧಿಕಾರ ಇಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ವಕೀಲರ ವಾದ ಮಂಡಿಸಿದರು.

ವಿಶ್ವಹಿಂದೂ ಪರಿಷತ್ ಅರ್ಜಿ ವಜಾ ಮಾಡಲು ಮಂಗಳೂರು ಕೋರ್ಟ್ ಗೆ ಮಸೀದಿ ಆಡಳಿತ ಅರ್ಜಿ ಸಲ್ಲಿಸಿತ್ತು. ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ಅರ್ಜಿ ಸಲ್ಲಿಕೆ ಆಗಿತ್ತು. ವಕ್ಫ್ ಬೋರ್ಡ್ ಕಾಯ್ದೆ ಮತ್ತು 1991ರ ಪೂಜಾ ಸ್ಥಳಗಳ ಕಾಯ್ದೆಯಡಿ ವಜಾಗೆ ಅರ್ಜಿ ಸಲ್ಲಿಕೆ ‌ಮಾಡಲಾಗಿದೆ.

ಏ.21 ರಂದು ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಕಟ್ಟಡ ಪತ್ತೆಯಾಗಿತ್ತು. ಈ ವಿಚಾರದಲ್ಲಿ ವಿಹಿಂಪ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಇದರ ವಿಚಾರಣೆ ಮಂಗಳೂರಿನ ಮೂರನೇ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios