Asianet Suvarna News Asianet Suvarna News

Mangaluru ಮಸೀದಿಯಲ್ಲಿ ದೈವೀ ಶಕ್ತಿ ಇತ್ತೆಂದ ತಾಂಬೂಲ ಪ್ರಶ್ನೆ

ಮಂಗಳೂರಿನ ಮಳಲಿ ಮಸೀದಿಯಲ್ಲಿ ದೈವಸ್ಥಾನ ಕುರುಹು ಪತ್ತೆ ಹಿನ್ನೆಲೆ ಕೇರಳ ಪ್ರಖ್ಯಾತ ಜ್ಯೋತಿಷ ದೈವಜ್ಞ ಜಿಪಿ ಗೋಪಾಲಕೃಷ್ಣ ಪಣಿಕ್ಕರ್ ಮೂಲಕ ತಾಂಬೂಲ ಪ್ರಶ್ನೆ ನಡೆಸಿದ್ದು, ಮಳಲಿ ಮಸೀದಿಯಲ್ಲಿ ದೈವೀ ಸಾನಿಧ್ಯ ಇತ್ತು ಎಂದು ಹೇಳಿದ್ದಾರೆ.

malali juma masjid controversy Tambula Prashne in Mangaluru gow
Author
Bengaluru, First Published May 25, 2022, 10:16 AM IST

ಮಂಗಳೂರು(ಮೇ.25): ಮಂಗಳೂರಿನ ಮಳಲಿ ಮಸೀದಿಯಲ್ಲಿ ದೈವಸ್ಥಾನ ಕುರುಹು ಪತ್ತೆ ಹಿನ್ನೆಲೆ ಸಮೀಪದ ಭಜನಾ ಮಂದಿರದಲ್ಲಿ ಕೇರಳ ಪ್ರಖ್ಯಾತ ಜ್ಯೋತಿಷ ದೈವಜ್ಞ ಜಿಪಿ ಗೋಪಾಲಕೃಷ್ಣ ಪಣಿಕ್ಕರ್ ಮೂಲಕ ತಾಂಬೂಲ ಪ್ರಶ್ನೆ (Tambula Prashne) ನಡೆಸಿದ್ದು, ಮಳಲಿ (Malali) ಮಸೀದಿಯಲ್ಲಿ (Mosque) ದೈವೀ ಸಾನಿಧ್ಯ ಇತ್ತು ಎಂದು ಹೇಳಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರೋ ಸಾನಿಧ್ಯ ಇದೆ. ತಪಸ್ವಿ ವ್ಯಕ್ತಿಗಳಿಂದ ಇಲ್ಲಿ ದೈವ ಸಾನಿಧ್ಯ ನಿರ್ಮಾಣವಾಗಿದೆ ಎಂದು ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ರಿಂದ ತಾಂಬೂಲ ಪ್ರಶ್ನೆಯಲ್ಲಿ ಮಾಹಿತಿ ನೀಡಿದ್ದಾರೆ.

Udupi ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!

ಆದರೆ ಸಾನಿಧ್ಯ ಯಾವುದು? ಸರಿಯಾದ ನಿಖರ ಜಾಗ ಯಾವುದು ಎನ್ನುವುದನ್ನು ಹುಡುಕಬೇಕು. ಆದರೆ ಅದನ್ನ ಹುಡುಕಲು ತಾಂಬೂಲ ಪ್ರಶ್ನೆ ಸಾಲುವುದಿಲ್ಲ. ಅಷ್ಟಮಂಗಳ ಪ್ರಶ್ನೆ ಮೂಲಕವೇ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು  ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ತಾಂಬೂಲ ಪ್ರಶ್ನೆ ಮೂಲಕ ಹೇಳಿದ್ದಾರೆ.

ಮಂಗಳೂರಿನ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯಲ್ಲಿ ದೈವಸ್ಥಾನದ ಕುರುಹು ಕಂಡ ಹಿನ್ನೆಲೆಯಲ್ಲಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆದಿದ್ದು, ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆಯಾಗಿದೆ. 

ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ 

ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ವಿವಾದದಿಂದಾಗಿ ದೇವಾಲಯ ನಾಶಪಡಿಸಿ, ಮಸೀದಿ ಕಟ್ಟಲಾಗಿದೆ. ದೇವಾಲಯವನ್ನು ಮರುಸ್ಥಾಪಿಸಬೇಕಿದೆ ಎಂದು ತಿಳಿಸಿದ್ದಾರೆ.

ಪುರಾತನ ಕಾಲದಲ್ಲಿ ಈ ಸ್ಥಳದಲ್ಲಿ ಗುರುಮಠದ ಸಾನಿಧ್ಯ ಇರುವುದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ವಿವಾದದಿಂದ (ಶೈವ/ವೈಷ್ಣವ ವಿವಾದ) ನಾಶವಾಯಿತು. ಆ ಸಂದರ್ಭದಲ್ಲಿ ಒಂದು ಮರಣವೂ ಆಗಿದೆ. ನಾಶವಾದಾಗ ಈ ಸ್ಥಳದಲ್ಲಿ ಇದ್ದವರು ಇಲ್ಲಿಂದ ಹೋಗಿದ್ದಾರೆ. ಇಲ್ಲಿಂದ ಮಠವನ್ನು ಕೂಡ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಆದರೆ, ಅವರು ಪೂರ್ಣವಾಗಿ ಕೊಂಡು ಹೋಗಿಲ್ಲ. ಅರ್ಧ ಸಾನಿಧ್ಯ ಇಲ್ಲಿಯೇ ಉಳಿದಿದೆ.

ಇದೀಗ ಈ ಜಾಗದ ಮಾಲಕತ್ವ ಹೊಂದಿರುವವರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮಾಡಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ. ಈ ಪ್ರದೇಶದಲ್ಲಿ ಶಿವಕಲೆಯಿದೆ. ಅಲ್ಲಿ ಶಿವಸಾನಿಧ್ಯವಿದೆ. ಇದರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ಮಾಡಲಾಗುತ್ತಿದೆ ಎಂದಿದ್ದಾರೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಜಿಲ್ಲಾಡಳಿತ ಮಂಡಳಿ ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳ ಕೈಗೊಂಡಿದೆ. ಈಗಾಗಲೇ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಿದೆ ಎಂದು ಹೇಳಿದ್ದಾರೆ.

ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ‌ ಭಾಗವನ್ನು‌ ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು.

ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ‌ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು. ಇದರ ನಡುವೆ ವಿಹೆಚ್‌ಪಿ   ತಾಂಬೂಲ ಪ್ರಶ್ನೆ ಇಟ್ಟಿದ್ದು ಪ್ರಶ್ನೆಯಲ್ಲಿ ಸಿಕ್ಕ ಅಂಶದಂತೆ ಮುಂದುವರಿಯಲು ತೀರ್ಮಾನಿಸಿದೆ.

Follow Us:
Download App:
  • android
  • ios