Asianet Suvarna News Asianet Suvarna News

Raichur: ಬುಡಕಟ್ಟು ನೃತ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ; ಸಚಿವ ಶ್ರೀರಾಮುಲು ಸೂಚನೆ

ಇದೇ ಜ.28 ಮತ್ತು 29ಕ್ಕೆ ನಗರದಲ್ಲಿ ರಾಷ್ಟ್ರಮಟ್ಟದ ಬುಡಕಟ್ಟು ನೃತ್ಯೋತ್ಸವವನ್ನು ಆಯೋಜಿಸಿದ್ದು, 2 ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಸೂಚಿಸಿದರು.

Make necessary preparations for the tribal dance festival Minister Sriramulu notice raichur rav
Author
First Published Jan 20, 2023, 7:52 AM IST

ರಾಯಚೂರು (ಜ.20) : ಇದೇ ಜ.28 ಮತ್ತು 29ಕ್ಕೆ ನಗರದಲ್ಲಿ ರಾಷ್ಟ್ರಮಟ್ಟದ ಬುಡಕಟ್ಟು ನೃತ್ಯೋತ್ಸವವನ್ನು ಆಯೋಜಿಸಿದ್ದು, 2 ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಸೂಚಿಸಿದರು.

ಸ್ಥಳೀಯ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದ ಇತಿಹಾಸ ಹಾಗೂ ಜೀವನ, ಆಚಾರ ವಿಚಾರಗಳ ಕುರಿತು ಜನರಿಗೆ ಪರಿಚಯಿಸುವ ಸದುದ್ದೇಶದೊಂದಿಗೆ ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ಬುಡಕಟ್ಟು ನೃತ್ಯೋತ್ಸವ( tribal dance festival) ಏರ್ಪಡಿಸಲಾಗಿದೆ. ಇಂತಹ ಪ್ರಯತ್ನ ಜಿಲ್ಲೆಯಲ್ಲಿ ಎಂದೂ ನಡೆದಿಲ್ಲ. ಈ ಕಾರ್ಯಕ್ರಮ ಮಾದರಿಯಾಗುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು.

Raichur: ಪ್ರಧಾನಿ ಮೋದಿ ಆಗಮನ: ಕಲ್ಯಾಣ ನಾಡಿನ ಅಭಿವೃದ್ಧಿ ಸಂಕ್ರಮಣ: ಸಂಸದ ರಾಜಾ ಅಮರೇಶ್ವರ ನಾಯಕ

ಈಗಾಗಲೇ ನಗರದ ಶಾಸಕರ ಹಾಗೂ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ನಿರ್ವಹಣೆಗಾಗಿ ಜಿಲ್ಲಾ ಕ್ರೀಡಾಂಗಣ ಹಾಗೂ ಕೃಷಿ ವಿಶ್ವವಿದ್ಯಾಲಯ ಎರಡು ಸ್ಥಳಗಳನ್ನು ಗುರುತಿಸಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಜ.28 ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಚಾಲನೆ ನೀಡಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 15 ಬುಡಕಟ್ಟು ಜನಾಂಗದ ಕಲಾತಂಡಗಳು ಆಗಮಿಸಲಿವೆ. ಅಲ್ಲದೇ ಸ್ಥಳೀಯ ಕಲಾತಂಡಗಳಿಗೂ ಆದ್ಯತೆ ನೀಡಲು ಈಗಾಗಲೇ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕಾಗಿ ರು.2.75 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ಶಾಸಕ ಡಾ.ಶಿವರಾಜ ಪಾಟೀಲ್‌(Dr shivaraja patil MLA) ಮಾತನಾಡಿ, ರಾಷ್ಟ್ರಮಟ್ಟದ ಬುಡಕಟ್ಟು ನೃತ್ಯೋತ್ಸವ ನಮ್ಮ ನಗರದಲ್ಲಿಯೇ ನಡೆಯುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆ ಉದ್ದೇಶಿಸಿ ಜಿಲ್ಲಾಧಿಕಾರಿ ಎಲ್‌. ಚಂದ್ರಶೇಖರ ನಾಯಕ ಮಾತನಾಡಿ, ನೃತ್ಯೋತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಿಶಿಷ್ಟವರ್ಗಗಳ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಕಲಾ ತಂಡಗಳ ಕಲಾವಿದರಿಗೆ ವಸತಿ ವ್ಯವಸ್ಥೆಗಾಗಿ ಖಾಸಗಿ ವಸತಿಗೃಹಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಯಾವುದೇ ರೀತಿಯಲ್ಲಿ ಸಂಚಾರ ದಟ್ಟಣೆಯಾಗದಂತೆ ಕ್ರಮಕ್ಕೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.

ಬಿಜೆಪಿಯಿಂದ ಮೀಸಲಾತಿ ಅಪ್ರಸ್ತುತ: ಸಿದ್ದರಾಮಯ್ಯ

ಸಭೆಯಲ್ಲಿ ಇಲಾಖೆ ನಿರ್ದೇಶಕರು ಕಾಂತರಾಜ್‌, ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಶಿವಕುಮಾರ, ಉಪನಿರ್ದೇಶಕ ಸುರೇಶರೆಡ್ಡಿ, ಸಂಶೋಧನಾಧಿಕಾರಿ ಶ್ರೀನಿವಾಸ ಉಪನಿರ್ದೇಶಕ ಸುರೇಶರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.

Follow Us:
Download App:
  • android
  • ios