ಮಹಿಷ ಮಹಾನ್ ಬೌದ್ಧ ಪ್ರಚಾರಕ : ದ್ರಾವಿಡ ರಾಜ
ಸಾಮ್ರಾಟ ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಶ್ರೀಲಂಕಾದಿಂದ ಬಂದ ಮಹಿಷ ಈ ನೆಲದ ಮೂಲ ರಾಜ, ಮಹಿಷಶೂರನನ್ನು ಮನುವಾದಿಗಳು ರಾಕ್ಷಸ ಎಂಬುವಂತೆ ಬಿಂಬಿಸುತ್ತಿದ್ದಾರೆ ಎಂದು ಉಪನ್ಯಾಸಕ ಜೆ.ಸಿ.ರಂಗಧಾಮಯ್ಯ ತಿಳಿಸಿದರು.
ತುಮಕೂರು : ಸಾಮ್ರಾಟ ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಶ್ರೀಲಂಕಾದಿಂದ ಬಂದ ಮಹಿಷ ಈ ನೆಲದ ಮೂಲ ರಾಜ, ಮಹಿಷಶೂರನನ್ನು ಮನುವಾದಿಗಳು ರಾಕ್ಷಸ ಎಂಬುವಂತೆ ಬಿಂಬಿಸುತ್ತಿದ್ದಾರೆ ಎಂದು ಉಪನ್ಯಾಸಕ ಜೆ.ಸಿ.ರಂಗಧಾಮಯ್ಯ ತಿಳಿಸಿದರು.
ನಗರದ ಅಂಬೇಡ್ಕರ್ ರಸ್ತೆಯಲ್ಲಿ ನಡೆದ ಮಹಿಷ ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಲ ದ್ರಾವಿಡ ರಾಜನಾಗಿ ಸಮರ್ಥ ಆಡಳಿತವನ್ನು ನೀಡಿರುವುದನ್ನು ಮಹಿಷ ಅಸುರ ಎನ್ನುವ ಮೂಲಕ ದ್ರಾವಿಡ ಪರಂಪರೆಯನ್ನು ಅಲ್ಲಗಳೆಯುವ ಕೆಲಸವನ್ನು ಪುರೋಹಿತಶಾಹಿಗಳು ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದರು.
ಮಹಿಷ ಮಹಾನ್ ಬೌದ್ಧ ಪ್ರಚಾರಕ ಎಂಬುದನ್ನು ಮನಗಂಡಿದ್ದ ಇತಿಹಾಸ ತಜ್ಞ ಮಂಟೇಲಿಂಗಸ್ವಾಮಿ ಎಂಬುವರು ಐವತ್ತು ವರ್ಷಗಳ ಹಿಂದೆಯೇ ಮಹಿಷ ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿಯೇ ಚಾಲನೆಯನ್ನು ನೀಡುವ ಮೂಲಕ ದ್ರಾವಿಡ ಪರಂಪರೆಯನ್ನು ಉಳಿಸುವ ಕ್ರಮ ಕೈಗೊಂಡಿದ್ದರ ಫಲವಾಗಿ ಇಂದು ಮಹಿಷ ದಸರಾ ಹೆಚ್ಚು ಮನ್ನಣೆಯನ್ನು ಪಡೆಯುತ್ತಿದೆ ಎಂದರು.
ಸಾಮಾಜಿಕ ಹೋರಾಟಗಾರ ಕುಣಿಹಳ್ಳಿ ಮಂಜುನಾಥ್ ಮಾತನಾಡಿ, ಮೈಸೂರಿನಲ್ಲಿ ನಡೆದಿರುವ ಐತಿಹಾಸಿಕ ಮಹಿಷ ದಸರಾ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತಾರವಾಗಲಿದೆ. ರಾಜನನ್ನು ರಾಕ್ಷಸನಾಗಿ ಮಾಡಿರುವುದಕ್ಕೆ ವಿರುದ್ಧವಾಗಿ ನಾಡಿನಲ್ಲಿ ಮಹಿಷ ದಸರಾ ಅದ್ಧೂರಿಯಾಗಿ ಮಾಡಲು ಮೂಲ ನಿವಾಸಿಗಳು ಮುಂದಾಗಬೇಕು ಎಂದರು.
ಯಲದಬಾಗಿ ರಾಜಣ್ಣ, ಟಿ.ಸಿ.ರಾಮಯ್ಯ, ಪಿ.ಎನ್.ರಾಮಯ್ಯ, ವಾಸುದೇವ್, ನಾಗರಾಜ.ಜೆ.ಸಿ, ಆನಂದ್, ಭಾನುಪ್ರಕಾಶ್, ಬಂಡೆ ಕುಮಾರ್, ರಾಜಣ್ಣ ಇದ್ದರು.