ಬೆಳಗಾವಿ(ಜ.13): ಒಂದೆಡೆ ನೂತನ ಸಚಿವರ ಪದಗ್ರಹಣ ಸಮಾರಂಭವಿದ್ದರೆ ಮತ್ತೊಂದೆಡೆ ರಮೇಶ್ ಜಾರಕಿಹೊಳಿ‌ ಮತ್ತು ಮಹೇಶ್ ಕುಮಟಳ್ಳಿ ಪ್ರತ್ಯೇಕ ಮಾತುಕತೆ ನಡೆದಿದೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿರುವ ಮಹೇಶ್ ಕುಮಟಳ್ಳಿ ಇದ್ದ ಎಲ್ಲಾ ಸಚಿವ ಸ್ಥಾನ ಭರ್ತಿ ಹಿನ್ನೆಲೆ ತಮ್ಮನ್ನ ಯಾವಾಗ ಮಂತ್ರಿ ಮಾಡ್ತಾರೆ ಎಂಬ ಚರ್ಚೆ ಆರಂಭವಾಗಿದೆ.

ಬಿಎಸ್‌ವೈ ಕುಟುಂಬ ರಾಜಕಾರಣ: ವಿಧಾನಸೌಧದಲ್ಲಿ ಅಣ್ಣ ತಮ್ಮಂದಿರೇ ಇದ್ದಾರೆ ಎಂದ ವಿಶ್ವನಾಥ್

ಮುಂದಿನ ದಿನಗಳಲ್ಲಿ ನಿಮಗೂ ಸಚಿವ ಸ್ಥಾನ ಸಿಗುತ್ತೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದು ಅಬಕಾರಿ ಸಚಿವ ನಾಗೇಶ್ ದಿಂದ ರಾಜೀನಾಮೆ ಪಡೆದುಕೊಂಡ ಕುರಿತು ಕೂಡ ಚರ್ಚೆ ನಡೆದಿದೆ.

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ‌ ಮಹೇಶ್ ರಮೇಶ್ ಜಾರಕಿಹೊಳಿ‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜನವರಿ 17ರಂದು ಬೆಳಗಾವಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಸಚಿವ ರಮೇಶ್ ಜಾರಕಿಹೊಳಿ‌ ಜನಸೇವಕ ಸಮಾವೇಶ ನಡೆಯುವ ಸ್ಥಳ ಪರಿಶೀಲನೆಗೆ ಬಂದಿದ್ದರು.