ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಅಚ್ಚರಿ ಮೂಡಿಸಿದರು. ಕನ್ನಡ ಮತ್ತು ಮರಾಠಿ ಭಾಷೆಗಳು ಸಹೋದರಿಯರು ಎಂದು ಹೇಳುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು. ಅಲ್ಲದೆ, ಪ್ರಧಾನಿ ಮೋದಿ ನಾಯಕತ್ವವನ್ನು ಶ್ಲಾಘಿಸಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಕನ್ನಡಗರು ಮತ್ತು ಮರಾಠಿಗರ ನಡುವೆ ಜಿದ್ದಾಜಿದ್ದಿ ನಡೆಯುತ್ತಲೇ ಇದೆ. ಎಂಇಎಸ್ ಪುಂಡರ ಹಾವಳಿಯಿಂದಾಗಿ ಕೆಲವು ಸೂಕ್ಷ್ಮ ಪ್ರದೇಶಗಳು ಪ್ರಮುಖ ದಿನಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ವಿಷಯ ಅದಲ್ಲ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಳಗಾವಿಗೆ ಬಂದು ಕನ್ನಡದಲ್ಲೇ ಮಾತು ಆರಂಭಿಸಿ ಅಚ್ಚರಿ ಮೂಡಿಸಿದ್ದಾರೆ.
ಏನಂದ್ರು ಫಡ್ನವಿಸ್?
ಇಲ್ಲಿನ ಧರ್ಮನಾಥ ಭವನದಲ್ಲಿ ಬಿಜೆಪಿ ಪ್ರಜಾಪ್ರಭುತ್ವ ಉಳಿಸಿ ಸಮಾವೇಶ ನಡೆಯಿತು. ಈ ವೇಳೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಮಹಾರಾಷ್ಟ್ರ ಸಿಎಂ, ಮರಾಠಿ ಮತ್ತು ಕನ್ನಡ ಭಾಷೆಗಳು ಸಹೋದರಿಯರು. ಮಹಾರಾಷ್ಟ್ರ ಕರ್ನಾಟಕ ನೆರೆಯ ಸಹೋದರ ರಾಜ್ಯಗಳು. ನಮ್ಮಿಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಸಂಪೂರ್ಣ ಗೌರವವಿದೆ ಅನ್ನೋ ಮೂಲಕ ನಾಡದ್ರೋಹಿಗಳಿಗೆ ಸಾಮರಸ್ಯದ ಪಾಠ ಮಾಡಿದ್ದಾರೆ.
ದೇಶದಲ್ಲಿ ಬಹಳ ದೊಡ್ಡ ನರೇಟೀವ್ ಹೋರಾಟ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ, ಕಾಕ್ರೋಚ್ ಅಂತಾ ಅಲ್ಲ. ಸಂಘಟಿತವಾಗಿ ನಡೆಯುತ್ತಿರುವ ಹೋರಾಟವನ್ನು ತಡೆಯಬೇಕಿದೆ. ದೇಶದಲ್ಲಿ ರಾಜಕೀಯ ಅಧಿಕಾರಿಗಳು ಬದಲಾಗುತ್ತವೆ. ಸರ್ಕಾರ ಗಳು ಬದಲಾಗುತ್ತವೆ. ಇವರು ಹೇಳ್ತಿದ್ದಾರೆ ಬಾಂಗ್ಲಾ, ನೇಪಾಳ, ಪಾಕಿಸ್ತಾನದಂತೆ ಬದಲಾವಣೆ ಆಗಬೇಕು ಎನ್ನುತ್ತಿದ್ದಾರೆ. ಹೊಸ ವ್ಯವಸ್ಥೆ ಸೃಷ್ಟಿಸಲು ಹುನ್ನಾರ ನಡೆಯುತ್ತಿದೆ. ಸ್ಥಳೀಯ ರಾಜಕೀಯ, ನಾಯಕರು, ಸಂಘಟನೆ ಹಾಗೂ ಫೋರ್ಸ್ ಇಟ್ಟುಕೊಂಡು ಪ್ರಯತ್ನ ನಡೆದಿದೆ.
ಇದರಲ್ಲಿ ಸಾಮಾಜಿಕ ಜಾಲತಾಣದ ದುರುಪಯೋಗ ನಡೆಯುತ್ತಿದೆ. ರಾಹುಲ್ ಗಾಂಧಿ ಪ್ರತಿ ದಿನವು ಸುಳ್ಳು ಯಾಕೇ ಹೇಳ್ತಾರೆ. ದಿನವು ಸುಳ್ಳು ಹೇಳಿದ್ರೆ ಅದೇ ಮುಂದೆ ಸತ್ಯ ಎನಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವವನ್ನ ಅನ್ಯ ದೇಶಗಳಲ್ಲಿ ಭಯ ಹುಟ್ಟಿಸಿದೆ. ಏಷ್ಯಾದ, ವಿಶ್ವದ ಮಾಲೀಕ ಅಂದುಕೊಳ್ಳುವವರಿಗೆ ಮೋದಿ ನಾಯಕತ್ವದ ಭಯವಿದೆ. ವಿಶ್ವ ಬ್ಯಾಂಕ್ ಯಾವಾಗಲೂ ಭಾರತ ದೇಶವನ್ನು ಅವಹೇಳನ ಮಾಡುತ್ತಲೇ ಬಂದಿದೆ. ಅದೇ ವಿಶ್ವ ಬ್ಯಾಂಕ್ ಈಗ 50 ರಷ್ಟು ದೇಶದಲ್ಲಿ ಬಡತನವನ್ನ ನಿವಾರಣೆ ಆಗಿದೆ ಎಂದು ಹೇಳುತ್ತಿದೆ. ಭಾರತ ಮೋದಿಯವರು ನಾಯಕತ್ವದಲ್ಲಿ ಬಲಿಷ್ಠವಾಗಿದೆ ಎಂದರು.
ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2047ರ ಒಳಗಾಗಿ ಭಾರತವನ್ನು ಪ್ರಪಂಚದ ವಿಕಸಿತ ರಾಷ್ಟ್ರವಾಗಲಿದೆ. ರಾಹುಲ್ ಗಾಂಧಿ ಕೆಂಪು ಬಣ್ಣದ ಸಂವಿಧಾನ ತೆಗೆದುಕೊಂಡು ಓಡಾಡುತ್ತಿದ್ದಾರೆ. ಆದ್ರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಬುಕ್ ನೀಲಿ ಬಣ್ಣದಿದೆ. ರಾಹುಲ್ ಗಾಂಧಿ ನಿರಂತರವಾಗಿ ಸಂವಿಧಾನ ಅಪಮಾನಿಸುತ್ತಿದ್ದಾರೆ ಎಂದು ದೇವೇಂದ್ರ ಫಡ್ನವಿಸ್ ವಾಗ್ದಾಳಿ ನಡೆಸಿದರು.












