ಕಲಬುರಗಿ: ವಸತಿ ಶಾಲಾ ಮಕ್ಕಳಿಗೆ ಮದ್ರಾಸ್‌ ಐ ಮಾರಿ ಕಾಟ

ಅಫಜಲ್ಪುರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರದ ವಸತಿ ನಿಲಯದಲ್ಲಿ 150 ವಿದ್ಯಾರ್ಥಿಗಳಿದ್ದು ಬಹುತೇಕ ವಿದ್ಯಾರ್ಥಿಗಳಿಗೆ ಮದ್ರಾಸ್‌ ಐ ಬಂದಿದೆ. ಅಲ್ಲದೆ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 260 ಮಕ್ಕಳಲ್ಲಿ ಅರ್ಧಕ್ಕೂ ಹೆಚ್ಚಿನ ಮಕ್ಕಳಲ್ಲಿ ಈ ಮಾರಿ ಬಾಧಿಸಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿ ಪಾಲಕರನ್ನು ಕರೆಸಿಕೊಂಡು ಮನೆಗಳಿಗೆ ತೆರಳುತ್ತಿದ್ದಾರೆ.

Madras Eye for Residential School Children at Afzalpur in Kalaburagi grg

ರಾಹುಲ್‌ ದೊಡ್ಮನಿ ಬಡದಾಳ

ಚವಡಾಪುರ(ಆ.09): ಸಾಮಾನ್ಯವಾಗಿ ಬೇಸಿಗೆಯಲ್ಲಿ ಜನರನ್ನು ಕಾಡುತ್ತಿದ್ದ ಕಣ್ಣಿನ ಕಾಯಿಲೆ ಮದ್ರಾಸ್‌ ಐ ಮಳೆಗಾಲದಲ್ಲೂ ಕಾಟ ಕೊಡುತ್ತಿದೆ. ಅದರಲ್ಲೂ ವಸತಿ ಶಾಲೆ, ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಮದ್ರಾಸ್‌ ಐ ಮಾರಿ ಕಾಟ ಕೊಡುತ್ತಿದ್ದು ವಿದ್ಯಾರ್ಥಿಗಳು ಮಾರಿ ಕಾಟಕ್ಕೆ ರೋಷಿ ಹೋಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ, ಓದಲಾಗುತ್ತಿಲ್ಲ, ಯಾರ ಮುಖ ನೋಡಿದರೂ ಕೆಂಪಾದ ಕಣ್ಣು, ಕಣ್ಣು ಉರಿ, ನಿರಂತರವಾಗಿ ಕಣ್ಣೀರು ಬರುವುದು, ಊತ ಕಂಡು ಬರುತ್ತಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡುವಂತಾಗಿದೆ.

ಅಫಜಲ್ಪುರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರದ ವಸತಿ ನಿಲಯದಲ್ಲಿ 150 ವಿದ್ಯಾರ್ಥಿಗಳಿದ್ದು ಬಹುತೇಕ ವಿದ್ಯಾರ್ಥಿಗಳಿಗೆ ಮದ್ರಾಸ್‌ ಐ ಬಂದಿದೆ. ಅಲ್ಲದೆ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 260 ಮಕ್ಕಳಲ್ಲಿ ಅರ್ಧಕ್ಕೂ ಹೆಚ್ಚಿನ ಮಕ್ಕಳಲ್ಲಿ ಈ ಮಾರಿ ಬಾಧಿಸಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿ ಪಾಲಕರನ್ನು ಕರೆಸಿಕೊಂಡು ಮನೆಗಳಿಗೆ ತೆರಳುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಹರಡುತ್ತಿದೆ ಮದ್ರಾಸ್‌ ಐ ಸೋಂಕು: 10 ದಿನಗಳಲ್ಲಿ 136 ಜನರಿಗೆ ಹರಡಿದ ರೋಗ

ಮೆಡಿಕಲ್‌ ಸ್ಟೋರ್‌ಗಳಲ್ಲಿ ಐಡ್ರಾಫ್ಸ್‌ ಅಭಾವ:

ಈ ರೋಗ ವಾಸಿಗಾಗಿ ಐ ಡ್ರಾಫ್ಸ್‌ಗಳನ್ನು ಹಾಕಿಕೊಳ್ಳುವಂತೆ ವೈದ್ಯರು ಸೂಚಿಸುತ್ತಿದ್ದು ಎಲ್ಲರೂ ಥರಹೇವಾರಿಯಾದ ಐಡ್ರಾಫ್ಸ್‌ಗಳನ್ನು ಖರೀದಿಗೆ ಮುಗಿಬೀಳುತ್ತಿದ್ದಾರೆ. ಈಗ ಎಲ್ಲರಿಗೂ ಐಡ್ರಾಫ್ಸ್‌ ಬೇಕಾದ್ದರಿಂದ ಮೆಡಿಕಲ್‌ ಸ್ಟೋರ್‌ಗಳಲ್ಲಿ ಐಡ್ರಾಫ್ಸ್‌ನ ಅಭಾವ ಕಂಡು ಬರುತ್ತಿದೆ.

ಮುಂಜಾಗೃತೆಯೇ ಮದ್ದು ಎನ್ನುವ ವೈದ್ಯರು:

ಮದ್ರಾಸ್‌ ಐ ಎನ್ನುವುದು ಆತಂಕ ಪಡುವಂತ ರೋಗವೇನಲ್ಲ. ಯಾರಿಗೆ ಬರುತ್ತದೆ ಅವರು ಮುಂಜಾಗೃತೆ ವಹಿಸಬೇಕು, ಪದೇ ಪದೇ ಕಣ್ಣು ಮುಟ್ಟಿಕೊಳ್ಳಬಾರದು, ಕಣ್ಣಿಗೆ ಕನ್ನಡಕ ಬಳಕೆ ಮಾಡುವುದು ಉತ್ತಮ ಹೆಚ್ಚು ಸಮಸ್ಯೆ ಎನಿಸಿದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಆರೋಗ್ಯ ಇಲಾಖೆಯವರು ತಾಲೂಕಿನಾದ್ಯಂತ ಈ ಮದ್ರಾಸ್‌ ಐ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ.

ಹವಾಮಾನ ವೈಪರಿತ್ಯ: ರಾಜ್ಯದ ಹಲವೆಡೆ Madras eye ಹಾವಳಿ

ನಮಗೆಲ್ಲ ಕಣ್ಣುಗಳಲ್ಲಿ ಉರಿ, ತುರಿಕೆ, ಕೆಂಪಾಗಿ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ವಾರ್ಡನ್‌ ಹಾಗೂ ಮುಖ್ಯಗುರುಗಳು ಐಡ್ರಾಫ್ಸ್‌ ತಂದು ಕೊಟ್ಟಿದ್ದಾರೆ. ಆದರೂ ನಮಗೆ ಬಹಳ ನೋವಾಗುತ್ತಿದೆ ಎಂದು ವಸತಿ ಶಾಲೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.  

ಮಕ್ಕಳಿಗೆ ಮದ್ರಾಸ್‌ ಐ ಸಮಸ್ಯೆ ನಿವಾರಣೆಗಾಗಿ ವಸತಿ ಶಾಲೆ, ವಸತಿ ನಿಲಯಗಳವರು ನಮ್ಮ ಗಮನಕ್ಕೆ ತಂದರೆ ನಮ್ಮ ವೈದ್ಯರ ತಂಡ ಕಳುಹಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಕೊಡುವ ಕೆಲಸ ಮಾಡಲಾಗುತ್ತದೆ. ಸಾರ್ವಜನಿಕರು ಈ ರೋಗದ ಬಗ್ಗೆ ಆತಂಕ ಪಡುವುದು ಬೇಡ, ಮುಂಜಾಗೃತೆ ವಹಿಸಿದರೆ ಸಾಕು ಎಂದು ಅಫಜಲ್ಪುರ ತಾಲೂಕು ಆರೋಗ್ಯ ಅಧಿಕಾರಿಗಳು ಡಾ. ರವಿಕಿರಣ ಹೇಳಿದ್ದಾರೆ.  

Latest Videos
Follow Us:
Download App:
  • android
  • ios