ಮಡಿಕೇರಿ: ಮೆಡಿಕಲ್‌ಗಳಲ್ಲಿ ಮಾಸ್ಕ್ ಮಾರಾಟ ಸ್ಥಗಿತ
ಕೊಡಗು ಜಿಲ್ಲೆಯ ಔಷಧಿ ಅಂಗಡಿಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲು ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ ನಿರ್ಧರಿಸಿದೆ.
ಮಡಿಕೇರಿ(ಮಾ.19): ಕೊಡಗು ಜಿಲ್ಲೆಯ ಔಷಧಿ ಅಂಗಡಿಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಲು ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ ನಿರ್ಧರಿಸಿದೆ. ಅಧಿಕಾರಿಗಳು ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿ ಸೂಕ್ತ ಕಾರಣವಿಲ್ಲದೆ ಅತ್ಯಧಿಕ ದಂಡಶುಲ್ಕ ವಿಧಿಸಿದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಮಾಸ್ಕ್‌ನಂಥ ಅತ್ಯಗತ್ಯ ಪರಿಕರಗಳ ಮಾರಾಟಕ್ಕೆ ಸಮಸ್ಯೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಈ ಪರಿಕರಗಳನ್ನು ಮಾರದಿರಲು ಔಷಧಿ ವ್ಯಾಪಾರಸ್ಥರು ನಿರ್ಧರಿಸಿದ್ದಾರೆ.
ಕೊರೋನಾ ವೈರಸ್ ಹಬ್ಬುತ್ತಿರುವ ಸಂದರ್ಭ ಮಾಸ್ಕ್, ಹ್ಯಾಂಡ್ ಗ್ಲೌ$್ವಸ್, ಸ್ಯಾನಿಟೈಸರ್‌ಗಳು ಅತ್ಯಗತ್ಯವಾಗಿದ್ದು ಇವುಗಳನ್ನು ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರಿಗೆ ಹೆಚ್ಚಿನ ಬೆಲೆಯಲ್ಲಿ ಸಗಟು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ತಮಗೆ ಎಷ್ಟುಬೆಲೆಗೆ ಸಿಗುತ್ತಿದೆಯೋ ಅದೇ ದರಕ್ಕೆ ಇವುಗಳನ್ನು ಜಿಲ್ಲೆಯ ಔಷಧಿ ಅಂಗಡಿಗಳ ಮಾಲೀಕರು ಮಾರಾಟ ಮಾಡುತ್ತಿದ್ದರು.
ಕೊರೋನಾ ಎಫೆಕ್ಟ್: 6 ವಿಮಾನ ಸೇರಿ ಹಲವು ರೈಲುಗಳೂ ರದ್ದು
ಆದರೆ ಎರಡು ದಿನಗಳಿಂದ ವಿವಿಧ ಇಲಾಖಾಧಿಕಾರಿಗಳು ಕೊಡಗಿನ ಔಷಧಿ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ ಅಧಿಕ ದಂಡ ಶುಲ್ಕವನ್ನು ವಿನಾ ಕಾರಣ ವಿಧಿಸುತ್ತಿದ್ದಾರೆ ಎಂಬುದು ವರ್ತಕರ ಆರೋಪ. ಇದು ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರ ನೋವಿಗೆ ಕಾರಣವಾಗಿದೆ.
ಮಾಸ್ಕ್, ಹ್ಯಾಂಡ್ ಗ್ಲೌ$್ವಸ್, ಸ್ಯಾನಿಟೈಸರ್‌ಗಳು ಈ ಮೊದಲು 100ರ ಪ್ಯಾಕ್ ನಲ್ಲಿ ಲಭಿಸುತ್ತಿತ್ತು. ಆಗ ಅದರ ಮೇಲೆ ಎಂ.ಆರ್.ಪಿ. ದರ ನಮೂದಾಗಿರುತ್ತಿತ್ತು. ಆದರೆ ಇತ್ತೀಚೆಗೆ ಹೆಚ್ಚಿರುವ ಬೇಡಿಕೆಯಿಂದಾಗಿ ವಿತರಕರು ಬಿಡಿಬಿಡಿಯಾಗಿ ಇವುಗಳನ್ನು ಮಾರಾಟ ಮಾಡುತ್ತಿದ್ದು ಹೀಗೆ ಬಿಡಿಯಾಗಿ ಮಾರಾಟ ಮಾಡಲಾಗುತ್ತಿರುವ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್‌ಗಳ ಮೇಲೆ ಎಂ.ಆರ್.ಪಿ. ಬೆಲೆ ನಮೂದಾಗಿರುವುದಿಲ್ಲ. ಇದೇ ಕಾರಣವನ್ನು ಅಧಿಕಾರಿಗಳು ಮುಂದೊಡ್ಡಿ ಮಾರಾಟಗಾರರ ಮೇಲೆ ಅಧಿಕ ದಂಡ ಶುಲ್ಕ ವಿಧಿಸುತ್ತಿದ್ದಾರೆ.
ಕಾಮುಕ ತಂದೆಯಿಂದ ಮಗಳ ಮೇಲೆಯೇ 3 ವರ್ಷ ನಿರಂತರ ಅತ್ಯಾಚಾರ
ಮಾರಾಟ ಮಾಡಿದ ವಸ್ತುವಿಗೆ ಅಧಿಕಾರಿಗಳು ವಿಧಿಸುತ್ತಿರುವ ದಂಡದ ಮೊತ್ತವೇ ಅತ್ಯಧಿಕವಾಗಿರುವ ಹಿನ್ನಲೆಯಲ್ಲಿ ವಿನಾ ಕಾರಣ ದಂಡ ಕಟ್ಟುವುದೇಕೆಂದು ಮಾಸ್ಕ್, ಹ್ಯಾಂಡ್ ಗ್ಲೌ$್ವಸ್, ಸ್ಯಾನಿಟೈಸರ್ಗಳನ್ನು ಮಾರದಿರಲು ಜಿಲ್ಲೆಯ ಔಷಧಿ ವ್ಯಾಪಾರಸ್ಥರು ನಿರ್ಧರಿಸಿದ್ದು ಜಿಲ್ಲಾಧಿಕಾರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಮುಂದೆ ಪ್ರತಿ ಬಿಡಿ ಮಾಸ್ಕ್, ಹ್ಯಾಂಡ್‌ಗ್ಲೌಸ್, ಸ್ಯಾನಿಟೈಸರ್‌ಗಳ ಮೇಲೆ ಎಂ.ಆರ್.ಪಿ. ಮುದ್ರಣವಾಗಿ ಬರುವವರೆಗೆ ಕೊಡಗು ಜಿಲ್ಲೆಯ ಔಷಧಿ ವ್ಯಾಪಾರಸ್ಥರು ತಮ್ಮ ಔಷಧಿ ಅಂಗಡಿಗಳಲ್ಲಿ ಇವುಗಳನ್ನು ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾಗಿ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಎ.ಕೆ.ಜೀವನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.