Asianet Suvarna News Asianet Suvarna News

ಕೊಡಗು ಬೈಕ್ ಗುದ್ದಿ ಯುವಕ ಸಾವು; ಈ ಅಪಘಾತಕ್ಕೆ ನಾನೇ ಕಾರಣವೆಂದು ಬೈಕ್ ಸವಾರ ಆತ್ಮಹತ್ಯೆ!

ಮಡಿಕೇರಿಯಲ್ಲಿ ಶುಕ್ರವಾರ ನಡೆದ ಎರಡು ಬೈಕ್‌ಗಳ ಅಪಘಾದಲ್ಲಿ ಡಿಗ್ರಿ ವಿದ್ಯಾರ್ಥಿ ಸಾವನ್ನಪ್ಪಿದ್ದನು.  ಈ ಅಪಘಾತಕ್ಕೆ ತಾನೇ ಕಾರಣವೆಂದು ಮನನೊಂದ ಬೈಕ್ ಸವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

Madikeri bike punching youth dies bike rider self died because of this accident sat
Author
First Published Feb 12, 2024, 2:00 PM IST

ಕೊಡಗು  (ಫೆ.12): ಮಡಿಕೇರಿಯಲ್ಲಿ ಶುಕ್ರವಾರ ನಡೆದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಪದವೀಧರ ವಿದ್ಯಾರ್ಥಿ ಸಾವನ್ನಪ್ಪಿದ್ದನು. ಆದರೆ, ಈ ಅಪಘಾತಕ್ಕೆ ತಾನೇ ಕಾರಣವೆಂದು ಮನನೊಂದ ಮತ್ತೊಬ್ಬ ಬೈಕ್ ಸವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಸ್ತೆ ಅಪಘಾತಕ್ಕೆ ನಾನೇ ಕಾರಣವೆಂದು ದ್ವಿಚಕ್ರ ವಾಹನ ಸವಾರ  ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಡಿಕೇರಿಯಲ್ಲಿ ನಡೆದಿದೆ. ಹೆರವನಾಡಿನ ತಮ್ಮಯ್ಯ (57) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಇತ್ತ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮಡಿಕೇರಿಯಲ್ಲಿ ಶುಕ್ರವಾರ ಧನಲ್ ಸುಬ್ಬಯ್ಯ ಹಾಗೂ ತಮ್ಮಯ್ಯ ಅವರ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.

ಪ್ಯಾರಾಗ್ಲೈಡಿಂಗ್ ವೇಳೆ ಕೆಳಗೆ ಬಿದ್ದು 26 ವರ್ಷದ ಹೈದರಾಬಾದ್ ಯುವತಿ ಸಾವು

ಮಡಿಕೇರಿಯ ಚೈನ್ ಗೇಟ್ ಬಳಿ ನಡೆದಿದ್ದ ಅಪಘಾತದಲ್ಲಿ ಮಾಸ್ಟರ್ ಡಿಗ್ರಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಧನಲ್ ಸುಬ್ಬಯ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ  ನಿನ್ನೆ ಬೆಳಗ್ಗಿನ ಜಾವ ಧನಲ್ ಸಾವನ್ನಪ್ಪಿದ್ದನು. ಮೃತ ಯುವಕ ಧನಲ್ ಸುಬ್ಬಯ್ಯ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿಯಾಗಿದ್ದನು.

ಕಾಂಗ್ರೆಸ್ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಕೈ ಹಿಡಿದ ನಾರಿಯರು; 8 ತಿಂಗಳಲ್ಲಿ 151 ಕೋಟಿ ಮಹಿಳೆಯರ ಸಂಚಾರ

ಇನ್ನು ಈ ಅಪಘಾತಕ್ಕೆ ನಾನೇ ಕಾರಣ ಎಂದು ಮನನೊಂದು ತಮ್ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಧನಲ್ ಸುಬ್ಬಯ್ಯ ಹಾಲೇರಿಯ ಕಾಂಡನಕೊಲ್ಲಿ ನಿವಾಸಿಯಾಗಿದ್ದಾರೆ. ನಿನ್ನೆ ಮುಂಜಾನೆ ಸುಮಾರು 3 ಗಂಟೆಗೆ ಯುವಕ ಸಾವನ್ನಪ್ಪಿದ್ದಾನೆ. ಆದರೆ, ಅಪಘಾತದಿಂದ ತೀವ್ರ ಮನನೊಂದಿದ್ದ ತಮ್ಮಯ್ಯ ಎರಡು ದಿನಗಳಿಂದ ಊಟವನ್ನೂ ಮಾಡದೇ ಕೊರಗುತ್ತಿದ್ದರು. ಆದರೆ, ಈ ಅಪಘಾತಕ್ಕೆ ನಾನೇ ಕಾರಣವೆಂದು ತೀವ್ರ ಪಶ್ಚಾತ್ತಾಪದಿಂದ ಬಳಲುತ್ತಿದ್ದ ಸುಬ್ಬಯ್ಯ ಕೂಡ ಇಂದು ಬೆಳಗಿನ ಜಾವ ನೇಣಿಗೆ ಕೊರಳೊಡ್ಡಿದ್ದಾನೆ. ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Follow Us:
Download App:
  • android
  • ios